ಹಾಸನ, ನವೆಂಬರ್ 12: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಯೂ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಹಾಸನ ಜಿಲ್ಲೆಯ ರಾಜಕೀಯ ಭದ್ರಕೋಟೆಯಾಗಿರುವ ಪ್ರಮುಖ ಪ್ರಾದೇಶಿಕ ಪಕ್ಷ ಎಂದರೆ ಜೆಡಿಎಸ್. ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಇಲ್ಲಿ ಪ್ರಾಬಲ್ಯ ಹೊಂದಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಕೇವಲ ಮೂರು ಸಾವಿರದ ಐದುನೂರಷ್ಟು ಮಾತ್ರ ಮತದಾರರಿದ್ದು, ಈ …
Read More »ಹಾಸನಾಂಬೆಯ ಮೊದಲ ದಿನದ ದರ್ಶನೋತ್ಸವ ಆರಂಭ; ಬೆಳಿಗ್ಗೆಯೇ ದೇವಾಲಯ ದತ್ತ ಲಗ್ಗೆಯಿಟ್ಟ ಸಹಸ್ರಾರು ಭಕ್ತರು
ಹಾಸನ: ಎರಡು ವರ್ಷಗಳ ಬಳಿಕ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಭಾಗ್ಯ ದೊರೆತಿದೆ. ಹಾಸನಾಂಬೆಯ ಮೊದಲ ದಿನದ ದರ್ಶನೋತ್ಸವ ಇಂದು (ಅಕ್ಟೋಬರ್ 29) ಆರಂಭವಾಗಿದ್ದು, ಬೆಳಿಗ್ಗೆಯೇ ದೇವಾಲಯ ದತ್ತ ಸಹಸ್ರಾರು ಭಕ್ತರು ಲಗ್ಗೆಯಿಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. ನೆನ್ನೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ. ಆ ನಂತರ ಮಧ್ಯಾಹ್ನ …
Read More »ಬಿಜೆಪಿ ಜತೆ ಹೊಂದಾಣಿಕೆ ಬೇಡ: ಎಚ್‌ಡಿ ರೇವಣ್ಣ
ಹಾಸನ: ‘ಜೆಡಿಎಸ್ ಮುಳುಗುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿರುವಾಗ ನಮ್ಮ ಜತೆ ಹೊಂದಾಣಿಕೆ ಮಾಡಿಕೊಂಡರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರ್ಚಿಗೆ ಧಕ್ಕೆ ಬರಲಿದೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಮಾರ್ಮಿಕವಾಗಿ ಹೇಳಿದರು. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಜೆಡಿಎಸ್ ಬೆಂಬಲನೀಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಜೆಡಿಎಷ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತರ …
Read More »ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ ಗಳು
ಹಾಸನ: ಅರಸೀಕೆರೆಯ ಮಾಡಾಳು ಗೌರಮ್ಮ ಪುಣ್ಯ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಬಗ್ಗೆ ಗುರುವಾರ ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಭಾರತ ಸಾಧು ಸಂತರ ಪೂಜೆ, ಜಪತಪ, ದೇವರನ್ನು ನಂಬಿರೋ ದೇಶ. ಪ್ರವಾಹ, ಕರೊನಾದಂತಹ ಕೆಟ್ಟ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸೋದು ಬೇಡ ಅಂತ ಸಲಹೆ ಕೊಡಲು ಸ್ವಾಮೀಜಿಗಳು ಬಂದಿದ್ದರು. ಆದ್ರೆ ಅವರ ಮಾತುಗಳನ್ನೇ ಧಿಕ್ಕರಿಸಿದರು. ಸದ್ಯದಲ್ಲೇ ಅದರ ಫಲವನ್ನ ಇವರೆಲ್ಲ ಉಣ್ಣುತ್ತಾರೆ ನೋಡಿ. ಹೇಗೆ ಅಂತ ಈಗ ಹೇಳಲ್ಲ, ಎಲ್ಲ …
Read More »ನಿತ್ಯವೂ ಜೆಡಿಎಸ್ ಜತೆ ನಾವು ಗುದ್ದಾಡಿದ್ರೆ, ಇನ್ನೊಬ್ರು ಅಡ್ಜಸ್ಟ್ಮೆಂಟ್ ಮಾಡ್ಕೋತಾರೆ: ಸಿಎಂ ವಿರುದ್ಧ ಪ್ರೀತಂಗೌಡ ಗರಂ
ಹಾಸನ: ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು ಎಂದು ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುತ್ತೇನೆಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು. ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡಲ್ಲ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಇದೆ. ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿದ್ದಾರೆ ಎಂದು ಫಸ್ಟ್ ಫ್ಯಾಮಿಲಿ ಆಫ್ …
Read More »ಹದಿನೇಳು ದಿನಗಳ ಅಂತರದಲ್ಲಿ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಸಾವು!
ಹಾಸನ: ಅದೊಂದು ಬಡಕುಟುಂಬ. ಆದರೆ ಅವರ ಸಂಸಾರದಲ್ಲಿ ಸುಖ, ಸಂತೋಷಕ್ಕೇನು ಕಡಿಮೆಯಿರಲಿಲ್ಲ. ತಂದೆ – ತಾಯಿ ಕೂಲಿ ಮಾಡಿ ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ಸಾಕುತ್ತಿದ್ದರು. ಆದರೆ ಆ ಸುಂದರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಒಂದೇ ತಿಂಗಳಲ್ಲಿ ಮದುವೆಯಾಗಿದ್ದ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ಇಡೀ ಕುಟುಂಬದ ಕಣ್ಣೀರಿನಲ್ಲಿ ಮುಳುಗಿದೆ. ಹಾಗಾದ್ರೆ ಆ ಕುಟುಂಬದಲ್ಲಿ ಅಂತಹದ್ದು ಏನಾಯಿತು. ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು ಹೇಗೆ ಈ …
Read More »ಸಿದ್ದರಾಮಯ್ಯ ಇಲ್ಲಾಂದ್ರೆ ಕಾಂಗ್ರೆಸ್ ಝೀರೋ, ಇಡೀ ಪಕ್ಷ ಮುಳುಗಿ ಹೋಗುತ್ತೆ: ಎಚ್.ಡಿ.ರೇವಣ್ಣ
ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಇದೆ ಅಂದ್ರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಅಂತೆ. ಅವರಿಲ್ಲ ಅಂದ್ರೆ ಇಡೀ ಪಕ್ಷವೇ ಝೀರೋ ಆಗುತ್ತಂತೆ… ಹೌದು, ಹೀಗಂತ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎಂದೋ ಮುಳುಗಿ ಹೋಗುತ್ತಿತ್ತು. ಸಿದ್ದರಾಮಯ್ಯ ಕೈ ಬಿಟ್ರೆ ಈಗಲೂ ಮುಳುಗುತ್ತೆ. ಸದ್ಯ ಕಾಂಗ್ರೆಸ್ನನ್ನು ಶೇ.70ಕ್ಕೆ ನಿಲ್ಲಿಸಿರೋದು ಸಿದ್ದರಾಮಯ್ಯ. ಅವರಿಲ್ಲ ಅಂದ್ರೆ ಕಾಂಗ್ರೆಸ್ ಝೀರೋ. …
Read More »ರಕ್ತನಾಳ ಕೊಯ್ದುಕೊಂಡು ಕ್ರಷರ್ ಮಾಲೀಕ ಆತ್ಮಹತ್ಯೆ!
ಹಾಸನ: ಕ್ರಷರ್ ಮಾಲೀಕನೊಬ್ಬ ಸ್ನಾನದ ಮನೆಯಲ್ಲೇ ಬ್ಲೇಡ್ನಿಂದ ರಕ್ತನಾಳ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಗುರನಂದನ್ ಪ್ರಭು (42) ಆತ್ಮಹತ್ಯೆ ಮಾಡಿಕೊಂಡವ. ಈತ ಗುರುನಂದನ್ ಶೃತಿ ಲಾರಿ ಟ್ರಾಮ್ಸ್ಪೋರ್ಟ್ ಮತ್ತು ಜನನಿ ಕ್ರಷರ್ ಮಾಲೀಕನಾಗಿದ್ದ. ಸೋಮವಾರ ರಾತ್ರಿ ಮನೆಯ ಬಾತ್ ರೂಂಗೆ ಹೋದವ ರಕ್ತನಾಳ ಕುಯ್ದುಕೊಂಡು ಸತ್ತಿದ್ದಾನೆ. ಆತ್ಮಹತ್ಯೆಗೆ ಕಾರಣ ಇನ್ನೂ ಇಳಿದುಬಂದಿಲ್ಲ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »39 ಮಕ್ಕಳಿಗೆ ಕೊರೋನಾ ಸೋಂಕು, ಆಸ್ಪತ್ರೆಗೆ ದಾಖಲು
ಹಾಸನ: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ತಜ್ಞರ ಎಚ್ಚರಿಕೆ ಬೆನ್ನಲ್ಲೇ ಹಾಸನ ಜಿಲ್ಲೆಯಲ್ಲಿ 39 ಮಕ್ಕಳು ಕೊರೋನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ. ಹಾಸನದಲ್ಲಿ ಕಳೆದ 7 ದಿನಗಳಿಂದ 15 ವರ್ಷದೊಳಗಿನ 39 ಮಕ್ಕಳು ಕೊರೋನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಜಿಲ್ಲಾ ಸರ್ಜನ್ ಡಾ.ಕೃಷ್ಣಮೂರ್ತಿಯವರು ಮಾಹಿತಿ ನೀಡಿ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಹಿಮ್ಸ್) ಆಸ್ಪತ್ರೆಯಲ್ಲಿ 7 ಮಕ್ಕಳು …
Read More »ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ: ಕೋಡಿಶ್ರೀ ಭವಿಷ್ಯ
ಹಾಸನ: ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭವಿಷ್ಯವೊಂದನ್ನು ಹಾಸನ ಜಿಲ್ಲೆಯ ಕೋಡಿಮಠದ ಶ್ರೀಗಳು ನುಡಿದಿದ್ದಾರೆ. ಹಾಸನದ ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಕೊರೊನಾದಂತಹ ಮಾರಣಾಂತಿಕ ಕಾಯಿಲೆ ದೂರವಾಗಲು ಸುಮಾರು 10 ವರ್ಷಗಳೇ ಬೇಕು. ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವವನ್ನು ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಮುಂದೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ …
Read More »