Breaking News

ಬೆಂಗಳೂರು

ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 1.72 ಲಕ್ಷ `BPL’ ಕಾರ್ಡ್ ರದ್ದು

ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ತೆರಿಗೆ ಪಾವತಿದಾರರಾಗಿದ್ದರೂ ಸುಳ್ಳು ದಾಖಲೆ ನೀಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಪಡೆದಿದ್ದ 1.72 ಲಕ್ಷ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ. ಆಹಾರ ಇಲಾಖೆಯು 2021 ರ ಜನವರಿ 1 ರಿಂದ ಸೆ. 1 ರವರೆಗೆ 1,69,400 ಬಿಪಿಎಲ್ ಕಾರ್ಡ್ ಗಳು, 3080 ಅಂತ್ಯೋದಯ ಪಡಿತರ ಚೀಟಿ ಸೇರಿದಂತೆ ಒಟ್ಟು 1,72,480 ಪಡಿತರಚೀಟಿ …

Read More »

ಶುಗರ್‌ ಡ್ಯಾಡಿ’ ಪುಸ್ತಕ ನವೆಂಬರ್‌ 1ರಂದು ಬಿಡುಗಡೆ

ಬೆಂಗಳೂರು: ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್‌ ಡ್ಯಾಡಿ’ ಪುಸ್ತಕ ನವೆಂಬರ್‌ 1ರಂದು ಬಿಡುಗಡೆಯಾಗಲಿದ್ದು, ಆ ಕಾರ್ಯಕ್ರಮದಲ್ಲಿ ಮಾದಕ ಜಾಲಕ್ಕೆ ಒಳಗಾಗಿ ತೊಂದರೆ ಅನುಭವಿಸಿದವರು, ಆ ಜಾಲದಿಂದ ಮುಕ್ತರಾದವರು ಇರಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಅವರು ಹೇಳಿದ್ದಾರೆ. ಮಾದಕ ಜಾಲ ಪ್ರಕರಣಗಳನ್ನು ಪೊಲೀಸರು ಮತ್ತೆ ತೆರೆದು ತೀವ್ರ ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್‌ ಮೈಂಡ್‌ ಒಬ್ಬರು ಹೊರ ಬರಲಿದ್ದಾರೆ. ಅವರು ಸಿನಿಮಾ …

Read More »

ಕಲಬುರಗಿಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಲಬುರಗಿ ಪಾಲಿಕೆ ಅಧಿಕಾರದ ವಿಚಾರವಾಗು ಪ್ರಾರಂಭಿಕ ಹಂತದಲ್ಲಿ ಮಾತ್ರ ಚರ್ಚೆಯಾಗ್ತಿದೆ. ಆದರೆ ಕಲಬುರಗಿಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ಎಲ್ಲ ಸಚಿವರ ಭೇಟಿ ಯಶಸ್ವಿಯಾಗಿದೆ. ರಿಂಗ್ ರೋಡ್ ದಾಬಸ್ ಪೇಟೆಯಿಂದ ಮೈಸೂರು ರೋಡ್ ಯೋಜನೆ ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದಿತ್ತು, ಅದನ್ನು ಕ್ಲಿಯರ್ ಮಾಡಿಸಿ ಮುಂದುವರೆಯಲಿದೆ. 5 -6 ತಿಂಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ. ರಾಜ್ಯದ …

Read More »

ಎಣ್ಣೆಪ್ರಿಯರಿಗೆ ಹೊಡೆತ ಕೊಟ್ಟ ನಿಫಾ ವೈರಸ್​; ಮಂಗಳೂರಲ್ಲಿ 31 ಮದ್ಯದಂಗಡಿ ಬಂದ್

ಬೆಂಗಳೂರು: ಕೇರಳದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಕಾಟ ಒಂದೆಡೆಯಾದ್ರೆ, ನಿಫಾ ವೈರಸ್​ನ ಭೀತಿ ಮತ್ತೊಂದೆಡೆಯಾಗಿದೆ. ಈ ಸಂಬಂಧ ಕೇರಳದಿಂದ ಕರ್ನಾಟಕಕ್ಕೂ ನಿಫಾ ವೈರಸ್​ನ ಕಂಟಕ ಎದುರಾಗಿದೆ. ಈ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆಯು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ನಿಫಾ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಸಂಬಂಧ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗೆ ಬರುವ ರೋಗಿಗಗಳ ಮೇಲೆ …

Read More »

ಕೆಎಂಸಿ ಚುನಾವಣೆ ರದ್ದು ಆದೇಶಕ್ಕೆ ತಡೆ

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ (ಕೆಎಂಸಿ) ನಡೆದಿದ್ದ ಚುನಾವಣೆ ರದ್ದುಗೊಳಿಸಿರುವ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಡಾ.ಮಧುಸೂಧನ ಕರಿಗನೂರು ಮತ್ತು ಇತರರು ಸಲ್ಲಿಸಿದ್ದ ರಿಟ್ ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶ ನೀಡಿದೆ. ಈ ವಿಷಯದ ಬಗ್ಗೆ ವಿವರಣೆ ಅಗತ್ಯವಿದೆ ಎಂದು ತಿಳಿಸಿದ ಪೀಠ, ಕೆಎಂಸಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ನೀಡಲು ಆದೇಶಿಸಿತು. ‘2020ರ ಜನವರಿ …

Read More »

ಕನ್ನಡ ಹೇವರಿಕೆ ಭಾಷೆ ಕೇಸ್: ಹೈಕೋರ್ಟಲ್ಲಿ ಕ್ಷಮೆ ಕೋರಿದ ಗೂಗಲ್

ಬೆಂಗಳೂರು, ಸೆಪ್ಟೆಂಬರ್ 08: ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಮತ್ತೊಮ್ಮೆ ಕನ್ನಡ ಭಾಷೆ ಸರ್ಚ್ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕ್ಷಮೆಯಾಚಿಸಿದೆ. ಕನ್ನಡವನ್ನು ಹೇವರಿಕೆ ಭಾಷೆ ಎಂದು ತೋರಿಸಿದ್ದ ಜಾಗತಿಕ ದೈತ್ಯ ಟೆಕ್‌ ಕಂಪೆನಿ ಹೈಕೋರ್ಟಲ್ಲಿ ಕ್ಷಮೆಯಾಚಿಸಿದ್ದರಿಂದ ಗೂಗಲ್‌ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಲಾಗಿದೆ. ಗೂಗಲ್ ವಿರುದ್ಧ ಲೀಗಲ್‌ ಅಟಾರ್ನೀಸ್‌ ಮತ್ತು ಬ್ಯಾರಿಸ್ಟರ್ಸ್‌ ಸಂಸ್ಥೆಯ ಮೂಲಕ ಭಾರತೀಯ ಭ್ರಷ್ಟಾಚಾರ ವಿರೋಧಿ ಮಂಡಳಿ ಟ್ರಸ್ಟ್ …

Read More »

ಅನುಶ್ರೀ ಹೇರ್ ಟೆಸ್ಟ್ ಏಕೆ ಮಾಡಿಸಿಲ್ಲ : ಇಂದ್ರಜೀತ್ ಲಂಕೇಶ್

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ರಾಜಕೀಯ, ಚಿತ್ರರಂಗ, ಸಾಮಾಜಿಕ ಸೇರಿದಂತೆ ಹಲವಾರು ಆಯಾಮಗಳಿವೆ. ಆದ್ದರಿಂದಲೇ ಇದು ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸ್ಕ್ಯಾಂಡಲ್ ಎಂದು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸಿಸಿಬಿ ಸಿದ್ಧಪಡಿಸಿರುವ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಅವರು ಹೆಸರು ಉಲ್ಲೇಖಿಸಿರುವುದು ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮಗೋಷ್ಠಿ ನಡೆಸಿದ ಲಂಕೇಶ್ ಸಾಕಷ್ಟು ವಿಚಾರಗಳನ್ನು ಹೊರಹಾಕಿದರು. ಲಂಕೇಶ್ ಹೇಳಿದ್ದಿಷ್ಟು : “ಕರ್ನಾಟಕದ ಡ್ರಗ್ಸ್ ಜಾಲದ …

Read More »

ರೈತರಿಗೆ ಶಾಕ್, ಪಂಪ್ಸೆಟ್ ಉಚಿತ ವಿದ್ಯುತ್ ಗೆ ಬ್ರೇಕ್..? ಗ್ಯಾಸ್ ಸಬ್ಸಿಡಿ ಮಾದರಿ ‘ಗಿವ್ ಇಟ್ ಅಪ್’ ಅಭಿಯಾನ.?

ಬೆಂಗಳೂರು: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ನಡೆಸಿದಂತೆಯೇ ವಿದ್ಯುತ್ ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೃಷಿ ನೀರಾವರಿ ಪಂಪ್ ಸೆಟ್ ಗಳ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ಅಭಿಯಾನ ಕೈಗೊಳ್ಳಲಾಗುತ್ತದೆ. ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಿದರೆ, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ರೈತರೇ ಸ್ವಯಂ …

Read More »

ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲೂ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಕಾಲಿವುಡ್‌ನ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ನಟಿ ತ್ರಿಷಾ ಕೃಷ್ಣನ್ ಮಾಡಿದ ಎಡವಟ್ಟಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ ಕೃಷ್ಣನ್ ಅವರನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಶೂಟಿಂಗ್​ ನಡುವೆ ತ್ರಿಶಾ ಕೃಷ್ಣನ್​ ದಾರ್ಮಿಕ ಸ್ಥಳದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಚಿತ್ರೀಕರಣ ವೇಳೆ ಚಪ್ಪಲಿ ಹಾಕಿಕೊಂಡು ತ್ರಿಶಾ …

Read More »

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್! ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ‌

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದಿಂದ ಕಾಂಗ್ರೆಸ್ ಪಕ್ಷವನ್ನು ದೂರವಿಡಲು ಬಿಜೆಪಿ ನಿರ್ಧರಿಸಿದ್ದು, ಜೆಡಿಎಸ್ ಜತೆ ಮತ್ತೆ ದೋಸ್ತಿ ಮಾಡಿಕೊಳ್ಳಲು ಮುಂದಾಗಿದೆ. ಆರ್​ಟಿ‌ ನಗರದ ತಮ್ಮ ನಿವಾಸದ ಬಳಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ‌, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ವೇಳೆ ಔಪಚಾರಿಕವಾಗಿ ಚರ್ಚಿಸಿದ್ದು, ಒಂದಾಗಿ ಹೋಗುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದರು. ಉಭಯ ಪಕ್ಷಗಳು ಸ್ಥಳೀಯ ನಾಯಕರ ಜತೆಗೆ ಚರ್ಚಿಸಿದ ನಂತರ ಮುಂದಿನ ಹೆಜ್ಜೆ ಇರಿಸಲಿದ್ದು, …

Read More »