ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಈಗ ದೇಶದಲ್ಲಿ ಗ್ಯಾಸ್ ಎಮರ್ಜೆನ್ಸಿ ಸೃಷ್ಟಿ ಮಾಡಿದೆ. ಈಗಾಗಲೇ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇದೀಗ ಅಡುಗೆ ಎಣ್ಣೆ ಬೆಲೆಯೂ ಏರಿಕೆ ಆಗಿದೆ. ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 60 ರೂಪಾಯಿ ಏರಿಕೆ ಮಾಡುವ ಮೂಲಕ ಸಾಮಾನ್ಯ ವರ್ಗದ ಬೆನ್ನಮೇಲೆ ಮತ್ತೊಂದು ಭಾರ ಹೇರಲಾಗಿತ್ತು. ಈಗ ಅಡುಗೆ ಎಣ್ಣೆ ಬೆಲೆ ಕೂಡ ಏರಿಸಿ ಮತ್ತಷ್ಟು ಭಾರ ಸಾಮಾನ್ಯ …
Read More »ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ – ಮಲತಂದೆ ಸೇರಿ ಮೂವರು ಅರೆಸ್ಟ್
ಬೆಂಗಳೂರು: ಹಣದಾಸೆಗೆ ಬಿದ್ದು 15 ವರ್ಷದ ಮಗಳನ್ನು ತಾಯಿ ಹಾಗೂ ಮಲತಂದೆ ಸೇರಿ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ ಕರಾಳ ಕೃತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ, ಆಕೆಯ ಮಲತಂದೆ ಹಾಗೂ ಮತ್ತೋರ್ವ ಮಹಿಳೆ ವಾಣಿ ಎಂಬಾಕೆಯನ್ನ ಬಂಧಿಸಿದ್ದಾರೆ. ಬಂಧಿತ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ …
Read More »ಅಡಿಗೆ ಅನಿಲ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಯಾವುದೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುತ್ತಿದೆ:-ಆಹಾರ ಸಚಿವ ಕೆಹೆಚ್. ಮುನಿಯಪ್ಪ
ವಿಧಾನ ಸೌಧ: ಅಡಿಗೆ ಅನಿಲ ಕುರಿತು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಇಂದು ವಿಧಾನ ಸೌಧದ ಕೊಠಡಿಯಲ್ಲಿ IOC ,BPC,HPC,GAIL ನ ಸಂಸ್ಥೆಗಳ ಅಧಿಕಾರಿಗಳು ಹಾಗೂ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷರೊಂದಿಗೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್,ದಿವ್ಯ, ಮುರಳಿ …
Read More »ನನ್ನ ಕೊನೆ ಉಸಿರು ಇರೋವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿದ್ದರಾಮಯ್ಯ
ಮೈಸೂರು: ನನ್ನ ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲಿ ಇದ್ದು, ಜನರ ಸೇವೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ವರಕೂಡು ಗ್ರಾಮದಲ್ಲಿ ಬೀರಶ್ವೇರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ, ನಾನು ರಾಜಕೀಯದಲ್ಲಿ ಸೋಲು – ಗೆಲವು ಕಂಡಿದ್ದೇನೆ. ಸೋತಾಗಲೂ ಜನ ಸೇವೆ ಬಿಟ್ಟಿಲ್ಲ. ಈಗೀಗ ಕ್ಷೇತ್ರಕ್ಕೆ ಹೆಚ್ಚು ಬರಲು ಆಗುತ್ತಿಲ್ಲ. ನನ್ನ ಮಗ ಯತೀಂದ್ರ ಬರುತ್ತಾರೆ. ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನು ರಾಜಕೀಯವಾಗಿ ಬೆಳೆಸಿ …
Read More »ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಪ್ರಶ್ನೆ ಕೇಳಿದರು. 3 ವರ್ಷಗಳಲ್ಲಿ ವಸತಿ ನಿಲಯಗಳಲ್ಲಿ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಫಲ್ಯ, ವೈಯಕ್ತಿಕ ಕಾರಣ ಸೇರಿ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. 7-8ನೇ ತರಗತಿ …
Read More »ಬಿಕ್ಲು ಶಿವ ಕೊಲೆ ಕೇಸ್ – ಬೈರತಿ ಬಸವರಾಜ್‌ಗೆ ಜಾಮೀನು
ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣ ಆರೋಪಿ ಶಾಸಕ ಬೈರತಿ ಬಸವರಾಜ್ ಅವರಿಗೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾ ಬಳಿಕ ಅವರನ್ನು ಬಂಧಿಸಲಾಗಿತ್ತು. ಫೆ.12 ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಬೈರತಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಆರೋಗ್ಯ ತಪಾಸಣೆ ನಡೆಸಿದ್ದ ವೇಳೆ ಅವರಿಗೆ ಇಸಿಜಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರಿಗೆ …
Read More »ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ
ಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಿಂದ 14 ಮಂದಿ, ಮೈಸೂರು 2, ಬೆಳಗಾವಿ 2, ಕಲಬುರಗಿ 2, ಶಿವಮೊಗ್ಗ 1, ವಿಜಯಪುರ 5, ಬಳ್ಳಾರಿ 3, ಧಾರವಾಡ 1, ಶಿವಮೊಗ್ಗ ಮಹಿಳಾ ಬ್ಯಾರೆಕ್‌ನಿಂದ ಒಬ್ಬರನ್ನು ಬಿಡುಗಡೆಗೆ ಆದೇಶ ಮಾಡಲಾಗಿದೆ. ರಾಜ್ಯದ 9 ಕಾರಾಗೃಹ ಜೈಲಿನಿಂದ 31 ಕೈದಿಗಳ ಬಿಡುಗಡೆಗೆ ಆದೇಶ ಮಾಡಲಾಗಿದೆ. 54 …
Read More »ಜೈಲಿಂದ ಬಿಡುಗಡೆಯಾದ ಚಂದ್ರು ಲಮಾಣಿ – ದೇವಸ್ಥಾನದಲ್ಲಿ ಈಡುಗಾಯಿ ಹೊಡೆದ ಶಾಸಕ
ಬೆಂಗಳೂರು: 5 ಲಕ್ಷ ಲಂಚ ಪಡೆದ ಆರೋಪದಡಿ ಜೈಲು ಸೇರಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಜಾಮೀನು ಸಿಕ್ಕ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶಿರಹಟ್ಟಿ ಶಾಸಕರಾಗಿರುವ ಚಂದ್ರು ಲಮಾಣಿ ಕಳೆದ 15 ದಿನದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಚಂದ್ರು ಲಮಾಣಿಗೆ 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಇಂದು ಎಲ್ಲ ಪ್ರೊಸೀಜರ್ ಮುಗಿಸಿ ಬಿಡುಗಡೆಗೊಂಡಿದ್ದಾರೆ. …
Read More »ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಇರೋ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ 50 ವರ್ಷದ ಹಳೆಯ ಎಲ್ಲಾ ಜಲಾಶಯಗಳ ಹಳೆಯ ಗೇಟ್ ಬದಲಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯಗಳಿಗೆ ಹೊಸ ಗೇಟ್ ಅಳವಡಿಸುತ್ತೇವೆ. ಮೊದಲು ತುಂಗಭದ್ರಾ …
Read More »ಹೊರ ರಾಜ್ಯದಿಂದ ಬರುವ ಅಕ್ರಮ ಮದ್ಯ ತಡೆಗೆ ಕ್ರಮ: ಬೋಸರಾಜು
ಬೆಂಗಳೂರು: ಹೊರ ರಾಜ್ಯದಿಂದ ಬರುವ ಅಕ್ರಮ ಮದ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಬೋಸರಾಜು ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ (Nagaraj Yadav) ಪ್ರಶ್ನೆ ಕೇಳಿದರು. ಅಬಕಾರಿ ಇಲಾಖೆಯಲ್ಲಿ ಈ ವರ್ಷ ಟಾರ್ಗೆಟ್ ರೀಚ್ ಆಗಿಲ್ಲ. ಕುಡುಕರು ಕಡಿಮೆ ಆಗಿದ್ದಾರೆ ಅಂದುಕೊಂಡಿದ್ದೆ. ಆದರೆ ನಕಲಿ ಮದ್ಯ, ಗೋವಾದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಟಾರ್ಗೆಟ್ ರೀಚ್ ಆಗಿಲ್ಲ. ಬೇರೆ ರಾಜ್ಯದಿಂದ …
Read More »
Laxmi News 24×7