Breaking News

ಬೆಂಗಳೂರು

ಹಬ್ಬದ ಮಾರಾಟ: ಅಮೆಜಾನ್ ಹಿಂದಿಕ್ಕಿದ ಮೀಶೊ

ಬೆಂಗಳೂರು: ಈ ಬಾರಿಯ ಹಬ್ಬದ ವಿಶೇಷ ಮಾರಾಟದಲ್ಲಿ ಇ ಕಾಮರ್ಸ್ ಸಂಸ್ಥೆಗಳು ಭರ್ಜರಿ ವ್ಯಾಪಾರದ ಮೂಲಕ ಸದ್ದು ಮಾಡಿವೆ. ಒಟ್ಟಾರೆ ಮಾರಾಟದಲ್ಲಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್ ಶೇ 49ರಷ್ಟು ಪಾಲು ಪಡೆದುಕೊಂಡಿದ್ದರೆ, ಸಾಫ್ಟ್‌ಬ್ಯಾಂಕ್ ಹೂಡಿಕೆ ಹೊಂದಿರುವ ಮೀಶೊ ಶೇ 21ರಷ್ಟು ಪಾಲು ಪಡೆದುಕೊಂಡು ಎರಡನೇ ಸ್ಥಾನಕ್ಕೆ ಜಿಗಿದಿದೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ ರೆಡ್‌ಸೀರ್ ಹೇಳಿದೆ.   ಈ ಮೂಲಕ ಅಮೆಜಾನ್ ಇಂಡಿಯಾವನ್ನು ಮೀಶೊ ಹಿಂದಿಕ್ಕಿದ್ದು, ಗರಿಷ್ಠ ಸಂಖ್ಯೆಯ ಅರ್ಡರ್‌ಗಳನ್ನು ತನ್ನದಾಗಿಸಿಕೊಂಡಿದೆ. …

Read More »

ವೈದ್ಯನೊಬ್ಬ ಚಿಕಿತ್ಸೆಗಾಗಿ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪರಾರಿ

ಬೆಂಗಳೂರು: ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ಆದರೆ, ಕಾಮುಕ ವೈದ್ಯನೊಬ್ಬ ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಹೀಗೆ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಹೊಟ್ಟೆ ನೋವು ಎಂದು …

Read More »

ಸಿಇಟಿ ಕೋಟಾ ಸೀಟು ಆಕಾಂಕ್ಷಿಗಳಿಗೆ ನಿರಾಸೆ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಗಾಗಲೇ ವಿಳಂಬ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈಗ ಸೀಟು ಹಂಚಿಕೆ ಯಲ್ಲಿಯೂ ವಿಳಂಬ ನೀತಿ ಅನುಸರಿಸುವ ಮೂಲಕ ಬಡ ವಿದ್ಯಾರ್ಥಿಗಳ ಸರಕಾರಿ ಕೋಟ ಸೀಟು ದೊರೆಯದಂತೆಯೂ ನಿರಾಸೆ ಮೂಡಿಸಿದೆ.   ಸುಮಾರು 10 ದಿನಗಳ ಮೊದಲೇ ಕಾಮೆಡ್‌-ಕೆ ಸೀಟುಗಳ ಹಂಚಿಕೆ ವೇಳಾಪಟ್ಟಿಯನ್ನು ಕಾಮೆಡ್‌-ಕೆ ಪ್ರಕಟಿಸಿದ್ದು ಇದಕ್ಕೂ ಮೊದಲೇ ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬಹುದಿತ್ತು. ಆದರೂ ಕಾಮೆಡ್‌-ಕೆ ಬಳಿಕ ಸೀಟು …

Read More »

ಇಂದು ಭಾರತ್‌ ಜೋಡೋಗೆ ಸೋನಿಯಾ ಸಾಥ್‌; ಮೇಲುಕೋಟೆಯಿಂದ ರಾಹುಲ್‌ ಗಾಂಧಿ ಯಾತ್ರೆ ಆರಂಭ

ಬೆಂಗಳೂರು: ಎರಡು ದಿನಗಳ ವಿರಾಮದ ನಂತರ ಗುರುವಾರದಿಂದ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ಮುಂದುವರಿಯಲಿದ್ದು ಸೋನಿಯಾಗಾಂಧಿ ಹೆಜ್ಜೆ ಹಾಕಲಿದ್ದಾರೆ. ರಾಹುಲ್‌ಗಾಂಧಿ ಅವರು ಮೇಲುಕೋಟೆಯಿಂದ ಬೆಳಗ್ಗೆ ಯಾತ್ರೆ ಆರಂಭಿಸಲಿದ್ದು, ಜಕ್ಕನಹಳ್ಳಿ-ನಾಗಮಂಗಲ ಮಾರ್ಗದಲ್ಲಿ ಸೋನಿಯಾಗಾಂಧಿ ಜತೆಗೂಡಲಿದ್ದಾರೆ. ಸೋನಿಯಾಗಾಂಧಿ ಅವರು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ 12.30 ಕ್ಕೆ ದೆಹಲಿಗೆ ವಾಪಸ್ಸಾಗಲಿದ್ದಾರೆ. ಪ್ರಿಯಾಂಕ ಭೇಟಿ ಅ.8 ಕ್ಕೆ : ಈ ಮಧ್ಯೆ, ಅ.6 ರಂದು ನಿಗದಿಯಾಗಿದ್ದ ಪ್ರಿಯಾಂಕ ಗಾಂಧಿ ಭೇಟಿ ಅ.8 ಕ್ಕೆ ಮುಂದೂಡಿಕೆಯಾಗಿದೆ. ಅಂದು …

Read More »

ಹೆಂಡತಿ ತಂಗಿ ಮೇಲೆ ಕಣ್ಣಿಟ್ಟವನ ಕೈ ಕತ್ತರಿಸಿದ್ದ ಭಾವ, ಮೂವರು ಅಂದರ್‌.!

ಬೆಂಗಳೂರು: ಹೆಂಡತಿ ತಂಗಿ ಮೇಲೆ ಕಣ್ಣು ಹಾಕಿದ್ದ ಯುವಕನ ಕೈ ಕತ್ತರಿಸಿ ಪರಾರಿಯಾಗಿದ್ದ ಯುವತಿಯ ಭಾವ ಸೇರಿ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಖಾನ್, ಮಹಮ್ಮದ್ ಸಲೀಂ, ಅಬೂಬಕ್ಕರ್ ಸಿದ್ಧಿಕಿ ಕಂಬಿ ಈಗ ಮುದ್ದೆ ಮುರಿಯುತ್ತಿರುವವರು.   ತಂಟೆ ತಕರಾರು ಮಾಡಿಕೊಂಡು ಓಡಾಡಿಕೊಂಡಿದ್ದ ಶೋಯೆಬ್‌ ಎಂಬಾತ ಬಂಧಿತ ಮುಬಾರಕ್ ಹೆಂಡತಿಯ ತಂಗಿ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತಾ ಕಾಟ ಕೊಡುತ್ತಿದ್ದನಂತೆ. ಹೀಗಾಗಿ ಶೋಯೊಬ್‌ಗೆ ಮುಬಾರಕ್ ಹಲವು …

Read More »

ಬಳ್ಳಾರಿ ಕೊಲೆ ಪ್ರಕರಣ : 7 ಜನರ ಬಂಧನ, ಮೂವರಿಗಾಗಿ ಶೋಧ

ಬಳ್ಳಾರಿ : ಸೆ.28ರಂದು ಮಧ್ಯರಾತ್ರಿ ರೇಡಿಯೋ ಪಾರ್ಕ್ ಬಳಿ ಹತ್ಯೆಗೀಡಾಗಿದ್ದ ಕುಂಟ ಮಂಜು ಕೊಲೆ ಪ್ರಕರಣದ ಆರೋಪಿಗಳನ್ನು ಕೌಲ್‍ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಏಳು ಆರೋಪಿಗಳ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಲಿಯಾಸ್, ಹುಸೇನ್ ಅಲಿಯಾಸ್ ಲಕ್ಷ್ಮಣ, ಭಾಸ್ಕರ್, ಸಂತೋಷ ಸರ್ವರ್, ಪ್ರಭಾಕರ್, ರಘು ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. …

Read More »

ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ “ಟ್ಯಾಬ್‌’

ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಶೇ.30ರಷ್ಟು ಪಾಠಗಳು ಮುಗಿದಿವೆ. ಆದರೂ ವಿದ್ಯಾರ್ಥಿಗಳಿಗೆ “ಟ್ಯಾಬ್‌’ ತಲುಪಿಲ್ಲ. ಟ್ಯಾಬ್‌ ವಿತರಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ನೀಡಿದ ಬಳಿಕ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು 300 ಕೋಟಿ ರೂ. ಅನುದಾನ ಬೇಕಾಗುವುದರಿಂದ ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ಆರಂಭವಾಗುವುದು ಸ್ವಲ್ಪ ವಿಳಂಬ …

Read More »

ಪಂಜಾಬ್ ನಲ್ಲಿ ಹಾವೇರಿ ಮೂಲದ ಯೋಧ ಹುತಾತ್ಮ : ಸಿಎಂ ಬೊಮ್ಮಾಯಿ ಸಂತಾಪ

ಬೆಂಗಳೂರು : ಪಂಜಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿ ಯೋಧ ಶಿವರಾಜ್ ಎಂಬುವವರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಯೋಧ ಶಿವರಾಜ್ ಹುತಾತ್ಮರಾಗಿದ್ದಾರೆ.   ಈ ಹಿನ್ನೆಲೆ ಮೃತಪಟ್ಟ ಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೊಳಗಾಗಿ ವೀರಮರಣ ಹೊಂದಿದ ಹಾವೇರಿ ಜಿಲ್ಲೆಯ ನಮ್ಮ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ವೀರ ಯೋಧ ಶಿವರಾಜ್ …

Read More »

A.I.C.C. ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !

ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಗಾಂಧಿ ಕುಟುಂಬದ ಪ್ರಾಬಲ್ಯ ತಾತ್ಕಾಲಿಕವಾಗಿ ಅಂತ್ಯಕಾಣುವ ಸಾಧ್ಯತೆ ಗೋಚರಿಸುತ್ತಿದ್ದು, ಪಕ್ಷದ ಅಧ್ಯಕ್ಷಗಾದಿಗೆ ಸ್ಪರ್ಧಿಸಿದವರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸರ್ವೋಚ್ಛ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ. ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಜತೆ ರಾಷ್ಟ್ರೀಯ ನಾಯಕ ಶಶಿ ತರೂರ್ ಸಹ ಪ್ರಬಲ ಸ್ಪರ್ಧಿ. ಖರ್ಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕಡೆಯ ಕ್ಷಣದಲ್ಲಿ ಸ್ಪರ್ಧಾ …

Read More »

ರಾಜ್ಯದ ಎಲ್ಲಾ ಕಾಲೇಜುಗಳ ಅಧ್ಯಾಪಕರಿಗೆ ಸಿಹಿಸುದ್ದಿ

ಬೆಂಗಳೂರು,ಅ.1- ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಪದವಿ ಕಾಲೇಜುಗಳ ಅಧ್ಯಾಪಕರಿಗೆ ಇಂದಿನಿಂದ ಅ.9ರವರೆಗೆ ರಜೆ ಘೋಷಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು, ಖಾಸಗಿ ಅನಿದಾನಿತ ಪದವಿ ಕಾಲೇಜುಗಳು ಹಾಗೂ ಖಾಸಗಿ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಇಂದಿನಿಂದ ಅ.9 ರವರೆಗೆ …

Read More »