Breaking News

ಬೆಂಗಳೂರು

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸುರೇಶ್ ಕುಮಾರ್ ವಿರುದ್ಧ ಸಿಎಂ ಗರಂ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನಾಳೆ ಸಂಜೆ 4 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದು, ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ, ಆಕ್ಸಿಜನ್ ವ್ಯವಸ್ಥೆ, ಬೆಡ್, ಚಿಕಿತ್ಸೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತಮ್ಮದೇ ಉಸ್ತುವಾರಿ ಜಿಲ್ಲೆಯಲ್ಲಿ …

Read More »

ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿಯಂತೆ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಇಂದು ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ ನಿಗದಿಯಾದ ದಿನಾಂಕದಲ್ಲಿ ಪರೀಕ್ಷೆ ನಡೆಸುವ ಕುರಿತು …

Read More »

ಫೇಸ್​​ಬುಕ್​ನಲ್ಲಿ ಪರಿಚಯ ಮಾಡ್ಕೊಂಡು ವಿಡಿಯೋ ಕಾಲ್​ನಲ್ಲಿ ನೀಚ ಕೃತ್ಯ :ಈ ಕಿಲಾಡಿ ಲೇಡಿ ಇಂದ ಹುಷಾರಾಗಿರಿ….

ನಲ್ಗೊಂಡ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಆರೋಪಿಯನ್ನು ತೆಲಂಗಾಣದ ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್​ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ. ಇತ್ತೀಗೆಚೆ ಈಕೆ ಹೈದರಾಬಾದ್​​ನ ಕೊಂಪಲ್ಲಿ ಮೂಲದ …

Read More »

ಸೋಲು, ಗೆಲುವನ್ನು ಒಪ್ಪಬೇಕು, ಮಮತಾಗೆ ಕೊಡಬಾರದ ಕಾಟ ನೀಡಿದ್ದರು – ಡಿಕೆಶಿ

ಬೆಂಗಳೂರು: ನಾವು ನೀವೆಲ್ಲಾ ಫಲಿತಾಂಶ ನೋಡ್ತಿದಿವಿ ಸೋಲನ್ನು ಒಪ್ಪಬೇಕು. ಗೆಲುವನ್ನು ಒಪ್ಪಬೇಕು ಇದು ಪ್ರಜಾಪ್ರಭುತ್ವದ ನಿಯಮವಾಗಿದೆ. ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಬೈ ಎಲೆಕ್ಷನ್ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. …

Read More »

ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ

ಬೆಂಗಳೂರು: ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ ಉಪಚುನಾವಣೆಯಲ್ಲಿ ಇಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿರುವ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ರಿಸಲ್ಟ್‍ಗಾಗಿ ಕಾಯುತ್ತಿದೆ. ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ. ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳ್ಳೆದಾಗಲಿ ಗೆದ್ದು ಬಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಮಸ್ಕಿ …

Read More »

B negative ಪ್ಲಾಸ್ಮಾಗಾಗಿ ಡಿಸಿಪಿ ಇಶಾ ಪಂತ್ ಹುಡುಕಾಟ.. ಸಹಾಯಕ್ಕಾಗಿ ಮನವಿ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಬೆಡ್ ಇಲ್ಲ, ಆಕ್ಸಿಜನ್ ಕೊರತೆ ಮುಂತಾದ ಸಮಸ್ಯೆಗಳಿಂದ ಕೊರೊನಾ ವಾರಿಯರ್ಸ್ ಪರದಾಡುವಂತಾಗಿದೆ. ಇದೀಗ ಸ್ವತಃ ಐಪಿಎಸ್​ ಅಧಿಕಾರಿ ಇಶಾ ಪಂತ್​ ಅವರಿಗೂ ಸೂಕ್ತ ಪ್ಲಾಸ್ಮಾ ದಾನಿಗಳು ಸಿಗುತ್ತಿಲ್ಲ. ಕಮಾಂಡ್ ಸೆಂಟರ್ ಡಿಸಿಪಿ‌ ಇಶಾ ಪಂತ್ ಕಳೆದ ಎರಡು ದಿನಗಳಿಂದ B-(ಬಿ ನೆಗೆಟಿವ್) ಪ್ಲಾಸ್ಮಾಗಾಗಿ ಹುಡುಕಾಟ‌ ನಡೆಸುತ್ತಿದ್ದಾರೆ. ಆದ್ರೆ ಎಲ್ಲಿಯೂ ಕೂಡ ಸಿಕ್ತಿಲ್ಲವಂತೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್​ ಮಾಡಿ …

Read More »

ಉಪ ಚುನಾವಣೆ ಮತ ಎಣಿಕೆ ದಿನವೇ ಬೆಳಗಾವಿ ನಾಯಕರಿಗೆ ಸಿಎಂ ಶಾಕ್

ಬೆಂಗಳೂರು: ಉಪಚುನಾವಣೆ ಮತ ಎಣಿಕೆಯ ದಿನವೇ ಬೆಳಗಾವಿಯ ನಾಯಕರಿಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ. ಕರ್ನಾಟಕ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಗೋವಿಂದ ಕಾರಜೋಳ, ಉಮೇಶ್ ಕತ್ತಿಗೆ ಬಾಗಲಕೋಟೆ, ಅರವಿಂದ ಲಿಂಬಾವಳಿಗೆ ಬೀದರ್, ಮುರುಗೇಶ್ ನಿರಾಣಿಗೆ ಕಲಬುರಗಿ, ಅಂಗಾರಗೆ ಚಿಕ್ಕಮಗಳೂರು, ಎಂಟಿಬಿ ನಾಗರಾಜ್ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯ 4 …

Read More »

ಉಪಮುಖ್ಯಮಂತ್ರಿಯೂ ಆಗಿರುವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ

ಬೆಂಗಳೂರು – ಉಪಮುಖ್ಯಮಂತ್ರಿಯೂ ಆಗಿರುವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ರಮೇಶ ಜಾರಕಿಹೊಳಿ ರಾಜಿನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಉಮೇಶ ಕತ್ತಿ ಅವರಿಗೆ ಬಾಗಲಕೋಟೆಯ ಉಸ್ತುವಾರಿ ವಹಿಸಲಾಗಿದೆ. ಅರವಿಂದ ಲಿಂಬಾವಳಿ ಬೀದರ್, ಎಂಟಿಬಿ ನಾಗರಾಜ ಕೋಲಾರ, ಮುರುಗೇಶ ನಿರಾಣಿ ಕಲಬುರಗಿ, ಎಸ್.ಅಂಗಾರ ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿದ್ದಾರೆ.

Read More »

ಅನಗತ್ಯವಾಗಿ ಹೊರಬಂದವರಿಗೆ ಬಿಗ್ ಶಾಕ್: ವಾಹನ ಬಿಡುಗಡೆ ಸದ್ಯಕ್ಕಿಲ್ಲ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಜನತಾ ಕರ್ಫ್ಯೂ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದವರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 7000 ವಾಹನಗಳನ್ನು ಜಪ್ತಿ ಮಾಡಲಾಗಿದೆ. ರಾಜ್ಯ ವಿವಿಧ ಕಡೆಗಳಲ್ಲೂ ನೂರಾರು ಸಂಖ್ಯೆಯ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದಂಡ ಹಾಕಲಾಗಿದೆ. ಜಪ್ತಿ ಮಾಡಿರುವ ವಾಹನಗಳನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎನ್ನಲಾಗಿದೆ. ಜಪ್ತಿ ಮಾಡಿದ ವಾಹನಗಳನ್ನು ಠಾಣೆಗೆ ಸಾಗಿಸಿದ್ದು, ಅವುಗಳ ರಕ್ಷಣೆ, ಸುರಕ್ಷತೆ ಪೊಲೀಸರಿಗೆ ಸವಾಲಾಗಿದೆ. ಬಹುತೇಕ …

Read More »

ಕೊರೊನಾ ಸ್ಫೋಟ, ಮುಂದಿನ 15 ದಿನ ಎಚ್ಚರ: ಕೊಡಗು ಜಿಲ್ಲಾ ವೈದ್ಯಾಧಿಕಾರಿ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಮುಂದಿನ 15 ದಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾ ವೈದ್ಯಾಧಿಕಾರಿ ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಸ್ಫೋಟ ಸಾಧ್ಯತೆ: ಮುಂದಿನ ಹದಿನೈದು ದಿನ ಕೊಡಗಿಗೆ ಕಂಟಕ ಎದುರು ಅಗುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಜನಸಂಖ್ಯೆ ಸುಮಾರು ಆರೂವರೆ ಲಕ್ಷ. ಆದ್ರೆ ಬೆಂಗಳೂರಿನಿಂದ ಬಂದಿರುವ ಜನರು ಹಳ್ಳಿ ಸೇರಿಕೊಂಡಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ …

Read More »