ಬೆಂಗಳೂರು, ಜೂನ್ 16: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ ಮಾಡಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆಯನ್ನು ಬೋರ್ಡ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯ ವೆಬ್ಸೈಟ್ www.sslc.Karnataka.gov.in ನಲ್ಲಿ ಪ್ರಕಟವಾಗಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ಪ್ರಸಕ್ತ ವರ್ಷ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಜೂನ್ …
Read More »‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ
ಬೆಂಗಳೂರು: “ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ” ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಆ’ಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ ‘ಶಾಪ’ ತಟ್ಟಿದಂತೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಗೈಯಲಾಗಿದೆ. ಅರುಣ್ ಸಿಂಗ್ ಅವರೇ, …
Read More »ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಂದು ಅಥವಾ ನಾಳೆ ನಿರ್ಧಾರ;
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ, ಬಣ ರಾಜಕೀಯ, ಅಸಮಾಧಾನಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದು, ಎಲ್ಲಾ ಗೊಂದಲಗಳನ್ನು ಬಗೆಹರಿಸಲಿದ್ದಾರೆ. ಮೂರು ದಿನಗಳ ರಾಜ್ಯ ಭೇಟಿಗಾಗಿ ಇಂದು ಮಧ್ಯಾಹ್ನ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಯತ್ನಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಚಿವರನ್ನು ಪ್ರತ್ಯೇಕವಾಗಿ ಕರೆಸಿ ಚರ್ಚೆ ನಡೆಸಲು ಅರುಣ್ ಸಿಂಗ್ ಮುಂದಾಗಿದ್ದು, ಸಚಿವರನ್ನು ಹೊರತುಪಡಿಸಿ ಬೇರಾರಿಗೂ ಬಿಜೆಪಿ …
Read More »ಬ್ರಾಹ್ಮಣರ ವಿರುದ್ಧ ಅವಹೇಳನ ಆರೋಪ: ವಿಚಾರಣೆಗೆ ಹಾಜರಾದ ನಟ ಚೇತನ್
ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಕೇಸ್ ದಾಖಲಾಗಿರೋ ಹಿನ್ನೆಲೆ, ಇಂದು ನಟ ಚೇತನ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ರು ಚೇತನ್ಗೆ ನೋಟೀಸ್ ನೀಡಿದ್ದರು. ಹೀಗಾಗಿ ತಮ್ಮ ಸ್ನೇಹಿತರು ಹಾಗೂ ವಕೀಲರ ಜೊತೆ ಚೇತನ್ ಇಂದು ಬಸವನಗುಡಿ ಇನ್ಸ್ಪೆಕ್ಟರ್ ಆರ್. ರಮೇಶ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ವಿಪ್ರ ಯುವ ವೇದಿಕೆಯ ಪವನ್ …
Read More »ಕಂಡೋರ ಸೈಟಿಗೆ ರಾಕ್ಲೈನ್ ವೆಂಕಟೇಶ್ ಬೇಲಿ: ಕೋರ್ಟ್ ತಪರಾಕಿ
ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿರುದ್ಧ ಅಕ್ರಮವಾಗಿ ಬೇರೊಬ್ಬರ ಸೈಟ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾಗರಬಾವಿಯಲ್ಲಿ ಸ್ನೇಹಶೀಲ ಎಂಬರವರಿಗೆ ಮಂಜೂರಾಗಿದ್ದ ನಿವೇಶನವನ್ನು ಅವರು ತನ್ನ ಸಹೋದರಿ ಪುಷ್ಪಲತಾರಿಗೆ ಗಿಫ್ಟ್ ಮಾಡಿದ್ದರು. ಈ ನಿವೇಶನವನ್ನು ರಾಕ್ಲೈನ್ ವೆಂಕಟೇಶ್ ಅಕ್ರಮವಾಗಿ ಒತ್ತುವಾರಿ ಮಾಡಿದ್ದಾರೆ ಎಂದು ಪುಪ್ಪಲತಾ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ರಾಕ್ಲೈನ್ ಮತ್ತು ಅವರ ಸಹಚರರಿಗೆ ಪುಪ್ಪಲತಾ ಅವರ ಜಾಗದಲ್ಲಿ ಅಕ್ರಮ …
Read More »ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದಿದ್ದ ಇಂಜಿನಿಯರಿಂಗ್ ಪದವೀಧರೆ ಅರೆಸ್ಟ್
ಬೆಂಗಳೂರು: ಪ್ರಿಯಕರನಿಗಾಗಿ ಗಾಂಜಾ ಮಾರಾಟಕ್ಕಿಳಿದ ಇಂಜಿನಿಯರಿಂಗ್ ಪದವೀಧರೆ ರೇಣುಕಾ ಎಂಬಾಕೆಯನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಖಾಸಗಿ ಕಾಲೇಜ್ನಲ್ಲಿ ಸಿದ್ಧಾರ್ಥ್ ಎಂಬುವನನ್ನ ಪ್ರೀತಿಸುತ್ತಿದ್ದ ರೇಣುಕಾಳಿಂದ ಪೊಲೀಸರಿಗೆ ಅನುಮಾನ ಬಾರದಂತೆ ಸಿದ್ದಾರ್ಥ್ ಗಾಂಜಾ ಸಪ್ಲೈ ಮಾಡಿಸ್ತಿದ್ದ ಎನ್ನಲಾಗಿದೆ. ಸಿದ್ದಾರ್ಥ್ ಫೋನ್ನಿಂದ ಕಾನ್ಫರೆನ್ಸ್ ಕಾಲ್ನಲ್ಲಿ ಕಸ್ಟಮರ್ಗೆ ಕಾಲ್ ಮಾಡ್ತಿದ್ದ ರೇಣುಕಾ ಆಂಧ್ರಪ್ರದೇಶದಿಂದ ಬಂದು ಮುಖ್ಯ ರಸ್ತೆಗಳಲ್ಲಿರುವ ಓಯೋ ರೂಮ್ಗೆ ಕಸ್ಟಮರ್ಗೆ ಬರಲು ಹೇಳಿ ಅಲ್ಲೇ ಗಾಂಜಾ ಸಪ್ಲೈ ಮಾಡುತ್ತಿದ್ದಳಂತೆ. ಸದಾಶಿವನಗರ ಪಿಎಸ್ಐ …
Read More »ವೇರ್ ಈಸ್ ಪಿಂಕಿ’ ನಟನೆಗಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಅಕ್ಷತಾ
ರಂಗಭೂಮಿ ಕಲಾವಿದೆ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವೇರ್ ಈಸ್ ಪಿಂಕಿ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ‘ವೇರ್ ಈಸ್ ಪಿಂಕಿ’ (ಪಿಂಕಿ ಎಲ್ಲಿ) ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ವಿಶೇಷ ಗಮನ ಸೆಳೆದಿದೆ. ಈ ಕುರಿತು ಅಕ್ಷತಾ ಪಾಂಡವಪುರ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ …
Read More »ಸಾರಿಗೆ ನೌಕರರ ಕೂಟದಲ್ಲಿ ಒಡಕು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿಬಿದ್ದ ಪದಾಧಿಕಾರಿಗಳು
ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರು ರಾಜ್ಯದ್ಯಂತ ನಡೆಸಿದ್ದ ಮುಷ್ಕರ ಯಾವುದೇ ಪ್ರಯೋಜನವಿಲ್ಲದೇ ತಾರ್ಕಿಕ ಅಂತ್ಯ ಕಂಡಿದೆ. ಸಾರಿಗೆ ನೌಕರರ ಕೂಟದಲ್ಲಿ ಒಡಕುಮೂಡಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಕೆಲವು ಪದಾಧಿಕಾರಿಗಳು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು, ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೆಲವು ಪದಾಧಿಕಾರಿಗಳು ತಿರುಗಿಬಿದ್ದಿದ್ದು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಅಧ್ಯಕ್ಷ ಚಂದ್ರು ಅವರ ಏಕಪಕ್ಷೀಯ ನಿರ್ಧಾರದಿಂದ …
Read More »ಒಂದು ನಿಮಿಷಕ್ಕೆ 250 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನೆ ಮಾಡುವಂತಹ ಪ್ಲಾಂಟ್ ನಿರ್ಮಾಣ: ಡಿಸಿಎಂ ಸವದಿ
ಬೆಂಗಳೂರು: ಒಂದು ನಿಮಿಷಕ್ಕೆ 250 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನೆ ಮಾಡುವಂತಹ ಪ್ಲಾಂಟ್ ಒಂದನ್ನು ಸ್ನೇಹಿತರ ಸಹಕಾರದೊಂದಿಗೆ 58 ಲಕ್ಷ ರೂಪಾಯಿಗಳ ಮೊತ್ತದಲ್ಲಿ ಉಚಿತವಾಗಿ ಅಥಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಅವಶ್ಯಕತೆ ಇರುವಂತಹ ಯಂತ್ರ ಹಾಗೂ ಸಾಮಾಗ್ರಿಗಳು ಇಂದು ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು …
Read More »ಖಾಸಗಿ ಶಾಲೆಗಳ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಪ್ರಸ್ತಾಪ: ವಿರೋಧಿಸಿದ ಕ್ಯಾಮ್ಸ್, ಸ್ವಾಗತಿಸಿದ ರುಪ್ಸಾ
ಬೆಂಗಳೂರು: ಸರ್ಕಾರದ ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಪರಿಶೀಲನೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲೆಗಳಿಗೆ ಲಾಭವಿಲ್ಲದೇ ಬೋಧನಾ ಶುಲ್ಕ ನಿಗದಿ ಮಾಡುವ ಹಕ್ಕಿದೆ. ಸರ್ಕಾರ ಸಮಿತಿ ರಚಿಸಿ ಶುಲ್ಕ ನಿಗದಿ ಮಾಡಲು ಆಗುವುದಿಲ್ಲ. ಸರ್ಕಾರದ ಈ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಮತ್ತೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ನಾವು ಎರಡು ವರ್ಷದ ಹಿಂದಿನ ಶುಲ್ಕ ಪಡೆಯುತ್ತಿದ್ದೇವೆ. ಸರ್ಕಾರ ಗೊಂದಲದ ಮೇಲೆ ಗೊಂದಲ ಸೃಷ್ಟಿಸಬಾರದು …
Read More »