Breaking News

ಬೆಂಗಳೂರು

ರಾಜ್ಯದಲ್ಲಿ ಈ ವರ್ಷ ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ.

ಬೆಂಗಳೂರು – ರಾಜ್ಯದಲ್ಲಿ ಈ ವರ್ಷ ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. ಈ ಕುರಿತು ಹೊಸ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜೂನ್ 15ರಿಂದ ಶಾಲೆಗಳನ್ನು ಆರಂಭಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಲಾಕ್ ಡೌನ್ ಮುಂದುವರಿದಿರುವುದರಿಂದ ಮತ್ತು ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ. ಜುಲೈ 1ರಿಂದ ಅಕ್ಟೋಬರ್ 10ರ ವರೆಗೆ ಮೊದಲ ಅವಧಿ ಮತ್ತು ಅಕ್ಟೋಬರ್ 21ರಿಂದ 2022ರ ಏಪ್ರಿಲ್ 30 …

Read More »

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪರೀಕ್ಷೆ ಇಲ್ಲದೆ ಯಾವ ರೀತಿ ಗ್ರೇಡ್ ಕೊಡಬೇಕು ಎಂದು ಬಹಳ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಯೋಗಕ್ಷೇಮ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದ್ದರೆ. ಎಸ್ಸೆಸ್ಸೆಎಲ್ಸಿ, ಪಿಯುಸಿ ಪರೀಕ್ಷೆ ಈ ವರ್ಷ ಬಹುಚರ್ಚಿತ ವಿಚಾರ . ಕಳೆದ ವರ್ಷ ಪರಿಸ್ಥಿತಿ …

Read More »

ಸ್ಲಂ, ಬಡ ಜನರಿರುವ ಪ್ರದೇಶಗಳಿಗೆ ವ್ಯಾಕ್ಸಿನ್ ನೀಡಿ -ಸರ್ಕಾರಕ್ಕೆ ಹೈಕೋರ್ಟ್​ ಆದೇಶ

ಬೆಂಗಳೂರು: ಕೋವಿಡ್ ಸಂಬಂಧ ಪ್ರಕರಣಗಳ PIL ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಸ್ಲಮ್, ಬಡ ಜನರಿರುವ ಪ್ರದೇಶಗಳಿಗೆ ವ್ಯಾಕ್ಸಿನ್ ನೀಡುವಂತೆ ಆದೇಶ ಹೊರಡಿಸಿದೆ. ಎನ್​​ಜಿಒಗಳ ಸಹಕಾರ ಪಡೆದು ಪೌರ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಆದ್ಯತಾ ವಲಯಗಳಿಗೆ ವ್ಯಾಕ್ಸಿನ್ ನೀಡಿ. ಇವರ ಕುಟುಂಬದವರಿಗೂ ವ್ಯಾಕ್ಸಿನೇಷನ್​ಗೆ ಕ್ರಮವಹಿಸಿ. ಇದಕ್ಕಾಗಿ ನಡೆಸಿದ ವಿಶೇಷ ಅಭಿಯಾನಗಳ ಮಾಹಿತಿ ನೀಡಿ. ವಿಶೇಷ ಚೇತನರಿಗೆ ವ್ಯಾಕ್ಸಿನೇಷನ್‌ ಬಗ್ಗೆಯೂ ಮಾಹಿತಿ ನೀಡಿ ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ …

Read More »

ಜೂನ್​ ತಿಂಗಳಲ್ಲಿ ರಾಜ್ಯಕ್ಕೆ ಬರಲಿದೆ 58 ಲಕ್ಷ ಡೋಸ್​ ವ್ಯಾಕ್ಸಿನ್

ಬೆಂಗಳೂರು: ಈ ತಿಂಗಳಲ್ಲೇ ರಾಜ್ಯಕ್ಕೆ 58 ಲಕ್ಷ ಡೋಸ್ ವ್ಯಾಕ್ಸಿನ್ ಬರುತ್ತದೆ ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಕೇಂದ್ರದಿಂದ ರಾಜ್ಯಕ್ಕೆ ವ್ಯಾಕ್ಸಿನ್ ಪೂರೈಕೆಯ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ತಿಂಗಳಲ್ಲೇ ರಾಜ್ಯಕ್ಕೆ 58 ಲಕ್ಷ ಡೋಸ್ ವ್ಯಾಕ್ಸಿನ್ ಬರುತ್ತದೆ ಎಂದು ಕೇಂದ್ರ ಹೇಳಿದೆ. ಅದರಲ್ಲಿ 44 ಲಕ್ಷಕ್ಕೂ ಹೆಚ್ಚು ವ್ಯಾಕ್ಸಿನ್ ​ಉಚಿತವಾಗಿ ಕೇಂದ್ರ ಸರ್ಕಾರ ಕೊಡುತ್ತಿದೆ. ರಾಜ್ಯ ಸರ್ಕಾರ ಖರೀದಿ …

Read More »

ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತಿದ್ದೇವೆ -ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ ಗೂಗಲ್ ಕೊನೆಗೂ ಕನ್ನಡಿಗರ ಆಗ್ರಹಕ್ಕೆ ಮಣಿದಿದ್ದು, ಸಮಸ್ತ ಕನ್ನಡಿಗರಲ್ಲಿ ಕ್ಷಮೆ ಯಾಚನೆ ಮಾಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಗೂಗಲ್​​.. ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ, ಇಂಟರ್ನೆಟ್​​ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶ ಆಶ್ಚರ್ಯವನ್ನುಂಟು ಮಾಡುತ್ತದೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು, ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ಕ್ಷಿಪ್ರವಾಗಿ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು …

Read More »

ಹಾಲು ಸಂಗ್ರಹ 89 ಲಕ್ಷ ಲೀಟರ್‌ಗೆ ಏರಿಕೆ

ಬೆಂಗಳೂರು: ಲಾಕ್‌ಡೌನ್ ನಡುವೆ ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೆಎಂಎಫ್‌ (ಕರ್ನಾಟಕ ಹಾಲು ಮಹಾಮಂಡಳ) ದಿನಕ್ಕೆ ಸಂಗ್ರಹಿಸುತ್ತಿರುವ ಒಟ್ಟು ಹಾಲಿನ ಪ್ರಮಾಣ 89 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಮೇ ಮೊದಲ ವಾರದಲ್ಲಿ 70 ಲಕ್ಷ ಲೀಟರ್ ಹಾಲನ್ನು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಒಂದೇ ವಾರದಲ್ಲಿ ಅದರ ಪ್ರಮಾಣ 82 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಈಗ 89 ಲಕ್ಷ ಲೀಟರ್‌ಗೆ ಮುಟ್ಟಿದೆ. ಜೂನ್ ಮತ್ತು ಜುಲೈನಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ …

Read More »

ಭಾಷೆ ವಿಚಾರದಲ್ಲಿ ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತಿದೆ: ಎಚ್ ಡಿಕೆ

ಬೆಂಗಳೂರು: ಭಾಷೆ ವಿಚಾರದಲ್ಲಿ ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? ‘The ugliest language in India’ ಎಂಬ ಹುಡುಕಾಟಕ್ಕೆ ‘ಕನ್ನಡ’ ಎಂದು ಉತ್ತರ ನೀಡುತ್ತಿದ್ದ ವೆಬ್‌ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು ಗೂಗಲ್ ಗೆ ಅಸಾಧ್ಯವೇ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ. …

Read More »

ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌ ಮಾರ್ಕ್‌! ಬರೀ ಹೆಸರಲ್ಲ, ಎಮೋಷನ್ ಎಂದ ನೆಟ್ಟಿಗರು

ಬೆಂಗಳೂರು, ಜೂನ್ 03: ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕೇರಳಕ್ಕೆ ಸೇರಿಕೊಂಡಿದೆ. ಕೆಎಸ್‌ಆರ್‌ಟಿಸಿ ಹೆಸರನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಬುಧವಾರ ಆದೇಶ ಹೊರಡಿಸಲಾಗಿದೆ. ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ತೀರ್ಪು ನೀಡಿದ್ದು, Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ …

Read More »

ರಾಜ್ಯದಲ್ಲಿ 1 ವಾರ ಲಾಕ್​ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ 1 ವಾರ ಲಾಕ್​ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್​ಡೌನ್ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೀನುಗಾರರಿಗೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ. ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​ ಘೋಷಿಸಿರುವ ಸಿಎಂ ಯಡಿಯೂರಪ್ಪ, ತಲಾ 3000ದಂತೆ …

Read More »

ಪ್ಯಾಕೇಜ್ ನೀಡಿದ ನಂತರವೇ ಲಾಕ್ ಡೌನ್ ಘೋಷಿಸಿ: ಕಾಂಗ್ರೆಸ್

ಬೆಂಗಳೂರು: ಸರಕಾರ ಲಾಕ್‌ಡೌನ್ ವಿಸ್ತರಿಸುವ ಚಿಂತನೆ ನಡೆಸಿದೆ ಎಂದರೆ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್ ವಿಫಲವಾಗಿದೆ ಎಂದರ್ಥ. ಆಗಿರುವ ಲೋಪದ ಬಗ್ಗೆ ಸರಕಾರ ತಜ್ಞರೊಂದಿಗೆ ವಿಮರ್ಶೆ ನಡೆಸದೆ ತನ್ನ ಮನಸಿಗೆ ತೋಚಿದ್ದನ್ನ ಮಾಡುತ್ತಿದೆ. ವೈದ್ಯಕೀಯ ತಜ್ಞರಷ್ಟೇ ಅಲ್ಲ ಆರ್ಥಿಕ ತಜ್ಞರಲ್ಲಿಯೂ ಲಾಕ್‌ಡೌನ್ ಬಗ್ಗೆ ಚರ್ಚಿಸುವ ಅಗತ್ಯವಿದೆ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿಳಿಸಿದೆ. ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನತೆ ಲಾಕ್‌ಡೌನ್ ವಿಸ್ತರಣೆಯನ್ನು ಭರಿಸುವ ಶಕ್ತಿ ಹೊಂದಿದ್ದರೆಯೇ …

Read More »