ಬೆಂಗಳೂರು – ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಶಾಸಕಾಂಗ ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರನ್ನು ಸೂಚಿಸಿದರು. ಗೋವಿಂದ ಕಾರಜೋಳ ಅನುಮೋದಿಸಿದರು. ಬಸವರಾಜ ಬೊಮ್ಮಾಯಿ ನಾಳೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
Read More »ಬಿಎಸ್ ವೈ ಬಲಗೈ ಬಂಟ ಬಸವರಾಜ ಬೊಮ್ಮಾಯಿ..ಕರ್ನಾಟಕದ ನೂತನ ಮುಖ್ಯಮಂತ್ರಿ..
ಬೆಂಗಳೂರು – ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಎಂದು ಗೊತ್ತಾಗಿದೆ. ಅಧಿಕೃತವಾಗಿ ಘೋಷಣೆ ಇನ್ನೂ ಆಗಬೇಕಿದೆ. ಬೆಂಗಳೂರಿನ ಕ್ಯಾಪಿಟಲ್ ಹೊಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪಕ್ಷದ ವೀಕ್ಷಕರ ಉಪಸ್ಥಿತಿಯಲ್ಲಿ ಈ ಘೋಷಣೆಯಾಗಿದೆ. ಬಿ.ಎಸ್.ಯಡಿಯೂರಪ್ಪ ರಾಜಿನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಬಂದಿದೆ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಸಂಪುಟದಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಬಸವರಾಜ …
Read More »ಸಂಸದೀಯ ಮಂಡಳಿಯಲ್ಲೇ ಸಿಎಂ ಹೆಸರು ಫೈನಲ್, ನೆಪ ಮಾತ್ರಕ್ಕೆ ಶಾಸಕಾಂಗ ಸಭೆ
ಬೆಂಗಳೂರು, ಜು.27- ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿರುವುದರಿಂದ ದೆಹಲಿ ವರಿಷ್ಠರೇ ಪಕ್ಷದ ಸಂಸದೀಯ ಮಂಡಳಿಯಲ್ಲೇ ಒಬ್ಬರನ್ನು ಆಯ್ಕೆ ಮಾಡುವುದು ಖಚಿತವಾಗಿದೆ. ಸಿಎಂ ಸ್ಥಾನ ಅಲಂಕರಿಸಲು ಸುಮಾರು ಒಂದು ಡಜನ್‍ಗೂ ಅಧಿಕ ಆಕಾಂಕ್ಷಿಗಳು ಇರುವುದರಿಂದ ಸಂಸದೀಯ ಮಂಡಳಿಯಲ್ಲೇ ಹೆಸರು ಅಂತಿಮಗೊಳಿಸಿ ನೆಪಮಾತ್ರಕ್ಕೆ ಶಾಸಕಾಂಗ ಸಭೆ ನಡೆಯಲಿದೆ. ವರಿಷ್ಠರ ಸೂಚನೆಯನ್ನು ವಿಧಿಯಿಲ್ಲದೆ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಶಾಸಕರ ಅಭಿಪ್ರಾಯದಂತೆ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡಲು ಹೋದರೆ ನೂರೆಂಟು ತಾಪತ್ರಯಗಳು ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ವರಿಷ್ಠರೇ …
Read More »ಮತ್ತೆ ಹೋರಾಟಕ್ಕೆ ಸಜ್ಜಾದ ಸಾರಿಗೆ ನೌಕರರು, ಫ್ರೀಡಂ ಪಾರ್ಕ್‍ನಲ್ಲಿ ಧರಣಿ
ಬೆಂಗಳೂರು, ಜು.27- ರಾಜ್ಯದ 4 ಸಾರಿಗೆ ನಿಗಮಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಜುಲೈ 29 ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಸಲಿವೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಅಧ್ಯಕ್ಷ ಹೆಚ್.ಡಿ.ರೇವಪ್ಪ, ಕಳೆದ ಏಪ್ರಿಲ್‍ನಲ್ಲಿ ಸಾರಿಗೆ ನೌಕರರ ಮುಷ್ಕರ ನಿರತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿಲ್ಲ, ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರನ್ನು ತೀವ್ರವಾದ ಶಿಕ್ಷೆಗೆ ಗುರಿಪಡಿಸಲಾಗಿದೆ. 4 ಸಾರಿಗೆ ನಿಗಮಗಳಲ್ಲಿ ಸಾವಿರಾರು ಕಾರ್ಮಿಕರನ್ನು ವಜಾ, ವರ್ಗಾವಣೆ , …
Read More »ಇಂದೇ ಸಿಎಂ ಆಯ್ಕೆ, ನಾಳೆ ಪ್ರಮಾಣವಚನ ಸ್ವೀಕಾರ ಸಾಧ್ಯತೆ
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ನೂತನ ಸಿಎಂ ಅನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಆಗಮಿಸಿದ್ದು, ಇವರಿಬ್ಬರೂ ಕೆಲ ಕಾಲ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಹಸ್ಯ ಮಾತುಕತೆ ನಡೆಸಿದರು. ಇದೇ ವೇಳೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಮತ್ತು ಕಿಶಾನ್ ರೆಡ್ಡಿ ಬರ್ತಿದ್ದಾರೆ. ಕೇಂದ್ರ …
Read More »ಇವತ್ತಿಂದ ಬಿಜೆಪಿ ಅವನತಿ ಆರಂಭ, ಪಕ್ಷ ಸರ್ವನಾಶ: ರುದ್ರಮುನಿ ಸ್ವಾಮೀಜಿ
ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ವೀರಶೈವ- ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮುಂದುವರಿಸಬೇಕು. ಈಗ ಪಡೆದಿರುವ ರಾಜಿನಾಮೆಯನ್ನು ವಾಪಸ್ ಪಡೆಯಬೇಕು ಎಂದು ರುದ್ರಮುನಿ ಸ್ವಾಮೀಜಿ ಮಂಗಳವಾರ ಬಿಜೆಪಿಯ ಹೈಕಮಾಂಡ್ ವಿರುದ್ದ ಗುಡುಗಿದ್ದಾರೆ. ಮುಖ್ಯಮಂತ್ರಿಸ್ಥಾನದಿಂದ ಬಿಎಸ್ ಯಡಿಯೂರಪ್ಪ ಅವರನ್ನು ಇಳಿಸಿ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಲಾಗಿದೆ. ಈ ಕಾರಣದಿಂದ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು. ಯಡಿಯೂರಪ್ಪ ಅವರು ಕೇವಲ ಲಿಂಗಾಯತರ ನಾಯಕರಾಗಿ ಮಾತ್ರ ಇರಲಿಲ್ಲ, …
Read More »ರಾಜಕೀಯ ಜಂಜಾಟಕ್ಕೆ ಬ್ರೇಕ್: ಹಸುಗಳನ್ನು ಮುದ್ದಾಡಿದ ಬಿಎಸ್ವೈ
ಬೆಂಗಳೂರು: ಬಿಜೆಪಿ ಕಟ್ಟಾಳು ಬಿಎಸ್ ಯಡಿಯೂರಪ್ಪ ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತಾವು ರಾಜೀನಾಮೆ ನಿರ್ಧರಿಸಿರುವುದನ್ನು ಹೇಳುವಾಗ ಯಡಿಯೂರಪ್ಪ ಗದ್ಗದಿತರಾದರು ಆ ಕ್ಷಣ ಅವರ ಅಭಿಮಾನಿಗಳಷ್ಟೇ ಅಲ್ಲದೇ ರಾಜ್ಯದ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಇದೀಗ ಬಿಎಸ್ವೈ ಅವರು ತಮ್ಮ ನಿವಾಸದಲ್ಲಿ ಕಾಲಕಳೆಯುತ್ತಿದ್ದು, ಬೆಳ್ಳಂಬೆಳಿಗ್ಗೆ ನಿವಾಸದಲ್ಲಿರುವ ಹಸುಗಳನ್ನು ಮುದ್ದಾಡಿದ್ದಾರೆ. ಸದ್ಯ ರಾಜಕೀಯ ಜಂಜಾಟಗಳನ್ನು ಬದಿಗೊತ್ತಿ, ಎಸ್.ಆರ್.ವಿಶ್ವನಾಥ್ ತಂದು ಕೊಟ್ಟಿದ್ದ ಹಸುಗಳ ಜೊತೆ ಸಮಯ ಕಳೆದಿದ್ದಾರೆ. ಇನ್ನು ಈ ಹಸುಗಳ ಮೇಲೆ ಯಡಿಯೂರಪ್ಪ …
Read More »ಯಡಿಯೂರಪ್ಪಗೆ ವಯಸ್ಸು 75 ವರ್ಷ, ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ – ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ
ಬೆಂಗಳೂರು: ಕೇರಳದಲ್ಲಿ ಶ್ರೀಧರನ್ 80 ವರ್ಷದ ಮುದಿಯಾ, ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಇಲ್ಲಿ ಯಡಿಯೂರಪ್ಪಗೆ 75 ವರ್ಷ ವಯಸ್ಸು. ಇಲ್ಲಿ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ ಅಂತ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಅಕ್ಟೋಬರ್ನಲ್ಲಿ ಅಲ್ಪಸಂಖ್ಯಾತರ …
Read More »ಛಲದಂಕಮಲ್ಲನ ಹೋರಾಟದ ಹಾದಿ
ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಆಯಾ ಕಾಲಘಟ್ಟದಲ್ಲಿ ರಾಜ್ಯವನ್ನಾಳಿದ ನಾಯಕರು ತಮ್ಮದೇ ಆದ ಛಾಪು ಮೂಡಿಸಿದ್ದು, ಜನನಾಯಕ ರಾಗಿ, ಸಮುದಾಯದ ನಾಯಕರಾಗಿ ಗುರುತಿಸಿ ಕೊಂಡಿದ್ದು, ಇನ್ನೂ ರಾಜ್ಯದ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ತೆರೆಯ ಹಿಂದೆ ಸರಿಯುವ ಪ್ರಮುಖ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ ಬಂದಿದೆ. ಹೋರಾಟದಿಂದಲೇ ಅಧಿಕಾರಕ್ಕೆ ಬಂದು, ಅಧಿಕಾರ ನಡೆಸುವಾಗಲೂ ಹೋರಾಟ ನಡೆಸುತ್ತಲೇ ಅಧಿಕಾರ ನಡೆಸುವಂತಾಯಿತು. ಪ್ರತಿಪಕ್ಷದ ನಾಯಕನಾಗಿ ಆಡಳಿತ ಪಕ್ಷದ ವಿರುದ್ದ …
Read More »ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ: ಇಂದೇ ನೂತನ ಸಿಎಂ ಆಯ್ಕೆ ಸಾಧ್ಯತೆ
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯಲ್ಲಿ ನೂತನ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಸಿಎಂ ಕುರ್ಚಿ ರೇಸ್ ನಲ್ಲಿ ಈಗಾಗಲೇ ಮೂರು- ನಾಲ್ಕು ಜನರ ಹೆಸರು ಕೇಳಿಬರುತ್ತಿದ್ದು, ‘ಇವರ್ ಬಿಟ್ಟು ಅವರ್ ಬಿಟ್ಟು ಮತ್ಯಾರು’ ಎಂಬ ಪರಿಸ್ಥಿತಿಗೆ ಬಂದಿದೆ. ಇದರ ನಡುವೆ ಇಂದು (ಜು.27) ಸಂಜೆ 7.30 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ …
Read More »