ಬೆಂಗಳೂರು: ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ. ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರೈತ ವಿರೋಧಿಕಾಯ್ದೆಗಳನ್ನು ಹಿಂಪಡೆಯಬೇಕೆಂದು …
Read More »ಎತ್ತಿನಗಾಡಿ ಚಲೋ ಆಯ್ತು, ಸೈಕಲ್ ಜಾಥಾ ಆಯ್ತು, ಇದೀಗ ಕಾಂಗ್ರೆಸ್ನಿಂದ ಟಾಂಗಾ ಜಾಥಾ!
ಬೆಂಗಳೂರು: ಬೆಲೆ ಏರಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈ ನಾಯಕರು, ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಎತ್ತಿನಗಾಡಿ ಚಲೋ, ಸೈಕಲ್ ಜಾಥಾ ಬಳಿಕ, ಇದೀಗ ಕಾಂಗ್ರೆಸ್ನಿಂದ ಟಾಂಗಾ ಜಾಥಾ ನಡೆಯುತ್ತಿದೆ. ಮೂರನೇ ಬಾರಿ ವಿಧಾನಸೌಧಕ್ಕೆ ಟಾಂಗದಲ್ಲಿ ಬರುವ ಮೂಲಕ ವಿನೂತನ ಹೋರಾಟಕ್ಕೆ ಕೈ ನಾಯಕರು ಮುಂದಾಗಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಾಥಾ ನಡೆಯುತ್ತಿದೆ. ಟಾಂಗ ಜಾಥಾ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ …
Read More »ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಶಿಕ್ಷಣಾಧಿಕಾರಿ ಕಾಲು ಹಿಡಿದ ವಿದ್ಯಾರ್ಥಿಗಳು
ಗದಗ: ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿಲ್ಲ. ‘ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಲು ಹಿಡಿದು ವಿದ್ಯಾರ್ಥಿಗಳು ಗೋಳಾಡಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಹೀಗಾಗಿ ಇಂಗ್ಲಿಷ್ ಶಿಕ್ಷಕರ ನೇಮಕ ಮಾಡಿ ಎಂದು ಗದಗ ಬಿಇಒ ಎಂ.ಎ.ರಡ್ಡೇರ್‌ಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಇಒಗೆ …
Read More »ಮೋದಿ-ಕಮಲಾ ಹ್ಯಾರೀಸ್ ದ್ವಿಪಕ್ಷೀಯ ಮಾತುಕತೆ; ಇಂಡೋ-ಫೆಸಿಫಿಕ್ ಪ್ರದೇಶದ ಬಗ್ಗೆ ಫೋಕಸ್
ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು. ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಬ್ಬರು ನಾಯಕರುಗಳು ಇಂಡೋ-ಫೆಸಿಫಿಕ್ ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ವ್ಯಾಪಾರ, ಅಭಿವೃದ್ಧಿ, ಎರಡೂ ದೇಶಗಳ ಸ್ನೇಹ ಸಂಬಂಧ, ಸಂಸ್ಕೃತಿ ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆಯೂ ಚರ್ಚೆ …
Read More »ಡಾಲ್ಮಿಯಾ ಭಾರತ ಸಿಮೆಂಟ್ ಪ್ರೈ ಲಿ., ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆ ಈ ಭಾಗದಲ್ಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮೂರು ಬೊಲೇರೋ ವಾಹನ ನೀಡಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರದಂದು ಡಾಲ್ಮಿಯಾ ಭಾರತ ಸಿಮೆಂಟ್ ಲಿ., ಯಾದವಾಡ ಯುನಿಟ್‍ದಿಂದ 30 ಲಕ್ಷ ರೂ. ವೆಚ್ಚದ ಮೂರು …
Read More »ಕೆಎಸ್ಆರ್‌ಟಿಸಿ 4 ನಿಗಮಗಳಿಗೆ ಹೆಚ್ಚುವರಿ ಹಣ ನೀಡುವಂತೆ ಬಸವರಾಜ ಬೊಮ್ಮಾಯಿಗೆ ಮನವಿ
ಬೆಂಗಳೂರು: ಕೆಎಸ್ಆರ್‌ಟಿಸಿ ಸಂಸ್ಥೆ ಕುರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಮುಕ್ತಾಯಗೊಂಡಿದೆ. ವಿಧಾನಸೌಧದಲ್ಲಿ ಗುರುವಾರ ನಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ 4 ನಿಗಮಗಳಿಗೆ ಹೆಚ್ಚುವರಿಯಾಗಿ ಹಣ ನೀಡುವಂತೆ ಮನವಿ ಮಾಡಲಾಗಿದೆ. ಕೆಎಸ್ಆರ್‌ಟಿಸಿ ನಿಗಮದಿಂದ ಸಿಎಂ ಬೊಮ್ಮಾಯಿಗೆ ಹೀಗೆ ಮನವಿ ಮಾಡಲಾಗಿರುವ ಬಗ್ಗೆ ತಿಳಿದುಬಂದಿದೆ. ವಾರ್ಷಿಕ 2,500 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿತ್ತು. 3 ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಕೆಎಸ್ಆರ್‌ಟಿಸಿ ನಿಗಮ ಬೇಡಿಕೆ ಇಟ್ಟಿದೆ. ಆರ್ಥಿಕ ಪರಿಸ್ಥಿತಿ …
Read More »ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ
ಬೆಂಗಳೂರು: ಓಂ ಬಿರ್ಲಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ನಿಂದ ಬಹಿಷ್ಕಾರ ಹಾಕಲಾಗಿದೆ. ವಿಧಾನಸಭೆಯಲ್ಲಿ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾರಿಂದ ಜಂಟಿ ಅಧಿವೇಶನ ನಡೆಸುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಆಡಳಿತಾರೂಢ ಬಿಜೆಪಿಯಿಂದ ಕೆಟ್ಟ ಸಂಪ್ರದಾಯ ಆರೋಪ ಆರಂಭವಾಗಲಿದೆ. ಸರ್ಕಾರ ವಿಧಾನಸೌಧದಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿದೆ ಎಂದು ಈ ಕ್ರಮದ ಬಗ್ಗೆ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮ …
Read More »ಗೋಕಾಕ : ಗ್ರಾಮ ಪಂಚಾಯತಗಳಲ್ಲಿ ಕಡ್ಡಾಯವಾಗಿ ಸಿ ಸಿ ಟಿವಿ ಕ್ಯಾಮೆರಾ ಅಳವಡಿಸಿಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿಕೆ.
ಗೋಕಾಕ : ‘ ಸುರಕ್ಷತೆಯ ದೃಷ್ಟಿಯಿಂದ ಯಮಕನಮರಡಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಸಿಸಿ ಕ್ಯಾಮರ್ ಅಳವಡಿಸಲು ಸೂಚನೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ್ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಮಕನಮರಡಿ ಗ್ರಾಮದ ಪ್ರಮುಖ ರಸ್ತೆ ಹಾಗೂ ಗ್ರಾಮ ಪಂಚಾಯ್ತಿಗೆ ಈಗಾಗಲೇ ಸಿಸಿ ಕ್ಯಾಮರ್ ಅಳವಡಿಸಲಾಗಿದೆ. ಅದೇ ರೀತಿ ಕ್ಷೇತ್ರದ 33 ಗ್ರಾಮ ಪಂಚಾಯ್ತಿಗೆ ಅಳವಡಿಸಲು ಸೂಚನೆ ನೀಡಲಾಗುತ್ತಿದೆ ಎಂದರು. …
Read More »ನಿಪ್ಪಾಣಿ ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ
ನಿಪ್ಪಾಣಿ: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಸ್ಥಳೀಯ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಬಾದಲ್ ಪ್ಲಾಟ್‍ನ ಸೋಹೆಲ್ ಶಬ್ಬೀರ ದೇಸಾಯಿ(26) ಹಾಗೂ ಶಿವಾಜಿನಗರ ಹಮೀದ ಸಲಮಾನ ಶೇಖ(21) ಬಂಧಿತ ಯುವಕರು. ಬಂಧಿತರಿಂದ ಸುಮಾರು 15 ಸಾವಿರ ಮೌಲ್ಯದ ಒಂದು ಕೆ.ಜಿ ಗೂ ಅಧಿಕ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ನ್ಯಾಯಾಂಗ ಬಂಧನಕ್ಕಾಗಿ ಇಬ್ಬರನ್ನೂ ಸ್ಥಳೀಯ …
Read More »ಸವದತ್ತಿ ಯಲ್ಲಮ್ಮ ದೇಗುಲದ ದರ್ಶನಕ್ಕೆ ಸೆಪ್ಟೆಂಬರ್ 28 ರಿಂದ ಅವಕಾಶ
ಬೆಳಗಾವಿ: ಸೆಪ್ಟೆಂಬರ್ 28 ರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತಾದಿಗಳ ದರ್ಶನಕ್ಕೆ ಅನುಮತಿ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ. ಕಳೆದ 17ತಿಂಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ದೇವಿ ದರ್ಶನಕ್ಕೆ ಅವಕಾಶವನ್ನು ಸ್ಥಗಿತಗೊಳಿಸಲಾಗಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದರ್ಶನಕ್ಕೆ ಅನುಮತಿ ನೀಡಲಾಗಿದ್ದರೂ, ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಕಡ್ಡಾಯವಾಗಿ ಕೊವಿಡ್ ನಿಯಮ …
Read More »