ಗೋಕಾಕ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 25.07. 2020 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯ ಪೌಷ್ಟಿಕ ಆಹಾರ ಹಾಲನ್ನು ಹಾವಿನ ಹುತ್ತಗಳಿಗೆ ಎರೆಯುವ ಬದಲು ಗೋಕಾಕ ನಗರದ ಶಿವಾ ಫೌಂಡೇಶನಲ್ಲಿರುವ ಅನಾಥ ಮಕ್ಕಳಿಗೆ ಹಾಲನ್ನು ಕೊಟ್ಟು ಮಾನವೀಯತೆಯ ಮೆರೆದಿರುವ ಮಾನವ ಬಂಧುತ್ವ ವೇದಿಕೆ ಗೋಕಾಕ್ …
Read More »ಗೋಕಾಕ ಜೇ ಏಮ್ ಯೆಫ್ ಸಿ ಕೋರ್ಟ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್ ಸಮನ್ಸ್
ಬೆಳಗಾವಿ- ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೋಕಾಕ ಸಿವ್ಹಿಲ್ ಜಡ್ಜ್ JMFC ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ …
Read More »ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್
ಶಿಮ್ಲಾ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ತಾನು ಸಾಕಿದ ಹಸುವನ್ನೇ ಮಾರಿ ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸದಾ ಮಾನವೀಯತೆಯ ಮೂಲಕ ರಿಯಲ್ ಲೈಫ್‍ನಲ್ಲಿ ಹೀರೋ ಆಗಿರೋ ಬಾಲಿವುಡ್ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು. ಹಸು ಮಾರಿದ ತಂದೆಯ ಸುದ್ದಿಗೆ ಟ್ವೀಟ್ ಮಾಡಿರುವ ಸೋನು ಸೂದ್, ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ಮಕ್ಕಳ ತಂದೆಗೆ ವಾಪಸ್ ಕೊಡಿಸುತ್ತೇನೆ. ಸದ್ಯ ನಂಗೆ ಅವರ …
Read More »ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು
ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ. ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಡಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೀನಾ ಕಪೂರ್ ಶೇರಿಂಗ್ ಆಧಾರದ ಮೇರೆಗೆ ಸ್ಕೂಟರ್ ಅನ್ನು ಬಾಡಿಗೆ ತೆಗೆದುಕೊಂಡಿದ್ದರು. ಬೇರೊಬ್ಬ ವ್ಯಕ್ತಿ ಸ್ಕೂಟರ್ ಓಡಿಸುತ್ತಿದ್ದನು. ಸ್ಕೂಟರ್ ಹಿಂದೆ …
Read More »ಇಂದು ಮುಂದುವರೆದ ಕೊರೋನಾ ದಾಳಿ ಮತ್ತೆ 214 ಸೊಂಕಿತರ ಪತ್ತೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಭೀತಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.ಇಂದು ಗುರುವಾರವೂ ಮಹಾಮಾರಿಯ ದಾಳಿ ಮುಂದುವರೆದಿದ್ದು, ಇಂದಿನ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 214 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 214 ಜನರಿಗೆ ಸೊಂಕು ತಗಲಿದ್ದು ಇಂದು ಒಂದೇ ದಿನ,ಕಿಲ್ಲರ್ ಕೊರೋನಾ ವೈರಸ್ ಗೆ 4 ಜನ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 1529 ಕ್ಕೇರಿದೆ ಬೆಳಗಾವಿ ಜಿಲ್ಲೆಯಲ್ಲಿ …
Read More »ಬಸವ ಭೀಮ ಸೇನೆಯಿಂದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಸನ್ಮಾನ
ಬೆಳಗಾವಿ: ಬಸವ ಪಂಚಮಿ ಹಿನ್ನೆಲೆಯಲ್ಲಿ ಬಸವ ಭೀಮ ಸೇನೆ ಸಂಸ್ಥಾಪಕ ಆರ್.ಎಸ್.ದರ್ಗೆಅವರು ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿದರು. ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ಜುಲೈ 27 ರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ , ಕಳೆದ …
Read More »ಕೊರೋನಾ ಸೋಂಕಿನಿಂದ ಹೊರಬಂದ 109 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
ಬೆಂಗಳೂರು,ಜು.23- ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬೆಂಗಳೂರು ನಗರದ 109 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ವಿವಿಧ ಸ್ಥಳಗಳಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸೋಂಕು ತಗುಲಿತ್ತು. ತಕ್ಷಣ ಇವರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ಇದೀಗ ಗುಣಮುಖರಾದ 109 ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸಿ, ಸಾಮಾಜಿಕ …
Read More »ಟ್ರ್ಯಾಕ್‌ಗೆ ಇಳಿಯಲಿರುವ ಭಾರತದ ಮೊದಲ ಅಥ್ಲೀಟ್ ಶ್ರಬನಿ
ಕಿಂಗ್ಸ್‌ಟನ್: ಭಾರತದ ಅಗ್ರಶ್ರೇಯಾಂಕದ ಓಟಗಾರ್ತಿ ಶ್ರಬನಿ ನಂದಾ ಅವರು ಜಮೈಕಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ. ಆ ಮೂಲಕ ಕೊರೊನಾ ಕಾಲದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ಗೆ ಇಳಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೋದ ಭಾನುವಾರ ಜಮೈಕಾದಲ್ಲಿ ನಡೆದಿದ್ದ ವೆಲಾಸಿಟಿ ಉತ್ಸವದ 100 ಮೀಟರ್ ಓಟದಲ್ಲಿ ನಂದಾ ಸ್ಪರ್ಧಿಸಿದ್ದರು. ಅವರು ಆ ಕೂಟದಲ್ಲಿ ಎಂವಿಪಿ ಟ್ರ್ಯಾಕ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು. ಎರಡು ಹೀಟ್ಸ್‌ಗಳಲ್ಲಿ 11.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಮೂರನೇ …
Read More »ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿಯಲ್ಲೇ ವಿರೋಧ
ಸಾಗರ: ರಾಜ್ಯದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಮಲೆನಾಡಿನ ಆರ್ಥಿಕ ಚಟುವಟಿಕೆಯ ಜೀವನಾಡಿಯಾಗಿರುವ ಅಡಿಕೆ ವಹಿವಾಟಿಗೆ ತಿದ್ದುಪಡಿ ತೀವ್ರ ಪೆಟ್ಟು ನೀಡಲಿದೆ ಎಂಬ ಕಾರಣಕ್ಕೆ ಬಿಜೆಪಿಯಲ್ಲಿ ಸಕ್ರಿಯವಾಗಿರುವ ಸಹಕಾರ ಮುಖಂಡರು ತಿದ್ದುಪಡಿ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದಾರೆ. ಕಾಯ್ದೆ ತಿದ್ದುಪಡಿ ಪ್ರಕಾರ ಎಪಿಎಂಸಿ ಪ್ರಾಂಗಣದ ಹೊರಗೆ ವಹಿವಾಟಿಗೆ ತೆರಿಗೆ ಕಟ್ಟಬೇಕಿಲ್ಲ. ಪ್ರಾಂಗಣ ದೊಳಗೆ ಶೇ 1.5ರಷ್ಟು ತೆರಿಗೆ ಕಟ್ಟಬೇಕು. ಈ ನಿಯಮ ಇಲ್ಲಿನ …
Read More »ಕೃಷ್ಣಾ ಐತೀರ್ಪು ಅಧಿಸೂಚನೆ ಜಾರಿಗೆ ಯತ್ನ: ಸಚಿವರು ರಮೇಶ ಜಾರಕಿಹೊಳಿ
ಆಲಮಟ್ಟಿ(ಜು.23): ನ್ಯಾಯಮೂರ್ತಿ ಬ್ರಿಜೇಷ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ ಪ್ರಾಧಿಕಾರ ತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಶೀಘ್ರ ಹೊರಡಿಸಲು ರಾಜ್ಯ ಸರ್ಕಾರ ಸತತ ಪ್ರಯತ್ನಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇಲ್ಲಿನ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಬುಧವಾರ ನೆರೆ ಹಾವಳಿ ಪೀಡಿತ ಐದು ಜಿಲ್ಲೆಗಳ (ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು) ಜಿಲ್ಲಾಡಳಿತದೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಗೆಜೆಟ್ …
Read More »