ಬೆಳಗಾವಿ: ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಇದೀಗ ಸಂಪುಟ ವಿಸ್ತರಣೆ ಸದ್ದು ಜೋರಾಗಿದ್ದು, ಆಗಸ್ಟ್ ಮೊದಲ ವಾರದಲ್ಲೇ ಬಿಎಸ್‌ವೈ ಕೆಲವರನ್ನ ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಚಾನ್ಸ್ ಕೊಡಲು ಚಿಂತನೆ ನಡೆಸಿದ್ದಾರೆ. ಇದರ ಮಧ್ಯೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಈ ಸಲ ಮಂತ್ರಿಯಾಗುವುದು ಫಿಕ್ಸ್ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಉಮೇಶ್ ಕತ್ತಿ, ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿರುವ …
Read More »ಬೆಳಗಾವಿ | 228 ಜನರಿಗೆ ಸೋಂಕು ದೃಢ, 6 ಮಂದಿ ಸಾವು
ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 228 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾಗಿದ್ದ 6 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಅಥಣಿ ತಾಲ್ಲೂಕಿನ 58 ವರ್ಷದ ವ್ಯಕ್ತಿ, ಬೈಲಹೊಂಗಲದ 44 ವರ್ಷದ ಪುರುಷ, ಸವದತ್ತಿಯ 65 ವರ್ಷದ ಮಹಿಳೆ, ರಾಯಬಾಗ ತಾಲ್ಲೂಕಿನ ಕುಡಚಿಯ 55 ವರ್ಷದ ಮಹಿಳೆ ಹಾಗೂ 46 ವರ್ಷದ ಪುರುಷ ಹಾಗೂ ಬೆಳಗಾವಿ ತಾಲ್ಲೂಕಿನ 54 ವರ್ಷದ …
Read More »ಕೋವಿಡ್-19: ಪ್ರತೀ ದಿನ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿರುವ ಕರ್ನಾಟಕ, ಕೊರೋನಾ ಪಾಸಿಟಿವ್ ದುಪ್ಪಟ್ಟು!
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಕರ್ನಾಟಕ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ರಾಜ್ಯದಲ್ಲಿ ಸೋಂಕಿನ ಸರಾಸರಿ ಪಾಸಿಟಿವಿಟಿ ಪ್ರಮಾಣ ದುಪ್ಪಟ್ಟಾಗಿದೆ. ಕಳೆದ ಜು.10ರವರೆಗೆ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.4.18ರಷ್ಟಿದ್ದ ಪಾಸಿಟಿವಿಟಿ ದರ ಇದೀಗ ಶೇ.8.60ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕಳೆದ 18 ದಿನಗಳಲ್ಲಿ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.16.88 ಮಂದಿಗೆ ಸೋಂಕು ದೃಢಪಡುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ. ರಾಜ್ಯದಲ್ಲಿ ಜು.10ರವರೆಗೆ ಪಾಸಿಟಿವಿಟಿ …
Read More »ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನಾ ವರದಿ ಅನುಷ್ಠಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಸರ್ಕಾರ
ಬೆಳಗಾವಿ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿ. ಕಾಲುವೆ ಮುಖಾಂತರ 1.72 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ …
Read More »ಕೋವಿಡ್ ಸೋಂಕಿತರಿಗೆ ದಿನಬಳಕೆ-ಮೆಡಿಕಲ್ ಕಿಟ್ ವಿತರಣೆ
ಗೋಕಾಕ: ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ ಎಂದು ಹಿರಿಯ ತಜ್ಞ ವೈದ್ಯ ಡಾ| ಆರ್.ಎಸ್. ಬೆಣಚಿನಮರಡಿ ಹೇಳಿದರು. ಮಂಗಳವಾರ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ರೋಗಿಗಳಿಗೆ ಕೊಡಮಾಡಿದ ದಿನಬಳಕೆಯ ಮತ್ತು ಮೆಡಿಕಲ್ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್ ಸಮಯದಲ್ಲಿ ಅರಭಾವಿ ಕ್ಷೇತ್ರದ ಪ್ರತಿ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿದ್ದ ಶಾಸಕರು ಈಗ …
Read More »ಇಂದು ಹಾಪ್ ಸೆಂಚುರಿ ಬಾರಿಸಿದ ಕೊರೋನಾ: ನಗರದ ಒಂದೇ ಕುಟುಂಬದ ಹತ್ತು ಜನರಿಗೆ ತಗುಲಿದ ಸೋಂಕು
ಗೋಕಾಕ: ಗೋಕಾಕ ತಾಲೂಕಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪ್ರಥಮ ಬಾರಿಗೆ ಹಾಪ್ ಸೆಂಚುರಿ ಬಾರಿಸಿದ್ದು ಒಂದೇ ಕುಟುಂಬದ 10 ಜನರಿಗೆ ಕೊರೋನಾ ಧೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ. ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ವರದಿಯಾಗಿದ್ದು ಗೋಕಾಕ ನಗರದಲ್ಲಿಯೆ 24 ಸೋಂಕಿತರು ಪತ್ತೆಯಾಗಿದ್ದಾರೆ. ನಗರದ ವಿದ್ಯಾನಗರದ ಒಂದೇ ಕುಟುಂಬದ 10 ಜನರಿಗೆ ಕೊರೋನಾ ತಗುಲಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಗೋಕಾಕ …
Read More »ಸಂಜಯ್ ದತ್ ವಿರುದ್ಧ ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!
ಮುಂಬೈ: ಬಾಲಿವುಡ್ ನಟ ಸಂಜಯ್ ದತ್‌ಗೆ ನಾಳೆ 60ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಅದರ ಮುನ್ನಾದಿನವೇ ಅವರಿಗೆ ಶಾಕ್ ಆಗುವಂಥ ವಿಚಾರವೊಂದು ನಡೆದಿದೆ. ಅದೇನೆಂದರೆ ಅವರ ವಿರುದ್ಧ ಇಂದು ಬಾಂಬೆ ಹೈಕೋರ್ಟ್‌ಗೆ ಕೇಸೊಂದು ದಾಖಲಾಗಿದೆ. ಈ ಕೇಸ್ ದಾಖಲು ಮಾಡಿರುವವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಿ ಪೆರರಿವಾಲನ್. ಅಷ್ಟಕ್ಕೂ ಈತನಿಗೂ, ಸಂಜಯ್ ದತ್‌ಗೂ ಸಂಬಂಧ ಏನೆಂದರೆ, ರಾಜೀವಗಾಂಧಿ ಹತ್ಯೆ ಪ್ರಕರಣದಲ್ಲಿ ಅವರನ್ನು ಹತ್ಯೆ ಮಾಡಲು …
Read More »ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?
ಕಲಬುರ್ಗಿ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ಮೂವರೂ ಸೇರಿದಂತೆ ಕಲ್ಯಾಣ ಕರ್ನಾಟಕದ ಐವರು ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದಾರೆ. ಆ ಮೂಲಕ ಈ ಜಿಲ್ಲೆಗಳಿಗೆ ಸದ್ಯ ಸಚಿವ ಸ್ಥಾನ ದೊರೆಯುವುದಿಲ್ಲ ಎಂಬ ಸಂದೇಶವೂ ರವಾನೆಯಾದಂತಾಗಿದೆ. ಬಳ್ಳಾರಿ ಜಿಲ್ಲೆಯ ಆನಂದ ಸಿಂಗ್ ಹಾಗೂ ಬೀದರ್ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಸಚಿವರಾಗಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ …
Read More »ಜೈಲಿನಲ್ಲೇ ಮರ್ಡರ್ಗೆ ಸ್ಕೆಚ್; ₹1 ಕೋಟಿ ಸುಪಾರಿ ಪಡೆದಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಜೈಲಿನಲ್ಲೇ ಇದ್ದು ಮರ್ಡರ್ ಮಾಡೋಕೆ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್ನ ಒಂಬತ್ತು ಜನ ಆರೋಪಿಗಳನ್ನು ಪೊಲೀಸರು ಹೆರೆಮುರಿ ಕಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ವರಲಕ್ಷ್ಮೀ ಎಂಬುವವರ ಪತಿ ಗೋವಿಂದೇ ಗೌಡನ ಹತ್ಯೆಯ ಪ್ರತೀಕಾರವಾಗಿ ಕೊಲೆ ಮಾಡಿದ ಆರೋಪಿಗಳ ಹತ್ಯೆಗೆ ವರಲಕ್ಷ್ಮೀ ಸುಪಾರಿ ನೀಡಿದ್ದರು ಎನ್ನಲಾಗಿದೆ. ವರಲಕ್ಷ್ಮೀ ಹಾಗೂ ಗೋವಿಂದೇಗೌಡನಿಗೆ ಆತ್ಮೀಯನಾಗಿದ್ದ ಚಿಕ್ಕತಿಮ್ಮೇಗೌಡ, ತಾನು ಬೆಳೆಯುತ್ತಿದ್ದಂತೆ ಇಬ್ಬರನ್ನ ದೂರ ಮಾಡಿದ್ದ. ವರಲಕ್ಷ್ಮೀ ದಂಪತಿಗೆ ಮಕ್ಕಳಿಲ್ಲದ ಕಾರಣ ಚಿಕ್ಕತಿಮ್ಮೇಗೌಡನನ್ನು ಬೆಳೆಸಿ, ಆತನಿಗೆ ಒಳ್ಳೆಯ …
Read More »ಹೋಟೆಲ್ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಮೂವರು ಅರೆಸ್ಟ್
ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಗೌರವ್, ಹೀನಾ ಹಾಗೂ ಅಣ್ಣಪ್ಪ ಬಂಧಿತರು. ಆರೋಪಿಗಳು ಲಾಡ್ಜ್ ನಡೆಸಲು ಪರವಾನಗಿ ಪಡೆದು ಅನಧಿಕೃತವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದರು. ಕೆಲಸದ ಆಮಿಷವೊಡ್ಡಿ ಹೊರರಾಜ್ಯದಿಂದ ಹುಡುಗಿಯರನ್ನು ಕರೆಯಿಸಿ ಕಂಫರ್ಟ್ ಹೋಟೆಲ್ನಲ್ಲಿ ದಂಧೆ ನಡೆಸುತ್ತಿದ್ದರು. ಆನ್ಲೈನ್ನಲ್ಲಿ ಮೊಬೈಲ್ ನಂಬರ್ ಹಾಕಿಕೊಂಡು, ಟೆಲಿಕಾಲರ್ ಮೂಲಕ ಗಿರಾಕಿಗಳನ್ನ ಕರೆಸುತ್ತಿದ್ದರು. ಇದು ಯಾರಿಗೂ ಗೊತ್ತಾಗದಂತೆ ಒಂದೊಂದು ನಂಬರ್ ಯ್ಯೂಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ …
Read More »