ಹಾಸನ : ಹಾಸನ ಜಿಲ್ಲೆಯಲ್ಲೊಂದು ಘೋರ ದುರಂತವೊಂದು ಸಂಭವಿಸಿದ್ದು, ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಒಂದು ಇಡೀ ಕುಟುಂಬವೇ ಸಾವಿಗೆ ಶರಣಾಗಿದೆ. ಹೌದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಗಂಡ-ಹೆಂಡತಿ ಹಾಗೂ ಪುತ್ರಿ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಶ್ರೀನಿವಾಸ್(43), ಶ್ವೇತಾ(36) …
Read More »ನಾಳೆ ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್
ಕೋಲ್ಕತ್ತಾ ವೈದ್ಯೆಯ ರೇಪ್ & ಮರ್ಡರ್ ಕೇಸ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನಾಳೆ ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದು, ಒಪಿಡಿ ಸೇವೆ ಮಾತ್ರ ಬಂದ್ ಇರಲಿದೆ. ಎಮರ್ಜೆನ್ಸಿ ಸೇವೆ ಎಂದಿನಂತೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು …
Read More »ಸಕ್ಕರೆ ನಾಡಿನಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಆಲೆಮನೆ ಬಳಿಕ ತೋಟದ ಮನೆಯಲ್ಲೂ ಕೃತ್ಯ!
ಸಕ್ಕರೆ ನಾಡಿನಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಆಲೆಮನೆ ಬಳಿಕ ತೋಟದ ಮನೆಯಲ್ಲೂ ಕೃತ್ಯ! ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಹೆಣ್ಣು ಭ್ರೂಣ ಪತ್ತೆ (Female Foeticide Racket) ಹಾಗೂ ಹತ್ಯೆ ದಂಧೆಯನ್ನು ಅಧಿಕಾರಿಗಳು ಬೇಧಿಸಿದ್ದಾರೆ. ಮಾವಿನಕೆರೆಯ ಆಲೆಮನೆ, ಹೆಲ್ತ್ ಕ್ವಾರ್ಟಸ್ ಬಳಿ ತೋಟದ ಮನೆಯಲ್ಲಿ (Farmhouse) ಭ್ರೂಣ ಲಿಂಗ ಪತ್ತೆ ಮಾಡ್ತಿದ್ದಾಗಲೇ ದಾಳಿ ಮಾಡಿದ ಡಿಹೆಚ್‌ಒ ಡಾ. ಮೋಹನ್ ನೇತೃತ್ವದ ತಂಡ ಮೂವರನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್ (Scanning) …
Read More »ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ದಿನಾಂಕ ಘೋಷಣೆ..?
ಬೆಂಗಳೂರು,ಆ.16- ಲೋಕಸಭೆ ಚುನಾವಣೆ ಕಾವು ಮುಗಿದ ಬೆನ್ನಲ್ಲೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದ್ದು, ಆಯೋಗ ಇಂದು ಸಮಯವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ರಾಮನಗರ ಜಿಲ್ಲೆ, ಚನ್ನಪಟ್ಟಣ, ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಹಾವೇರಿ …
Read More »ಪಂಚ ಗ್ಯಾರಂಟಿ’ಗಳಿಂದ 4.40 ಕೋಟಿ ಜನರಿಗೆ ಪ್ರಯೋಜನ
ಬೆಂಗಳೂರು: ಗ್ಯಾರಂಟಿ ಯೋಜನೆಗಳು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಜೀವನಾಧಾರವಾಗಿವೆ. 4.40 ಕೋಟಿ ಜನರಿಗೆ ಈ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಕಟಣೆ ಹೊರಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಜೀವನಾಧಾರವಾಗಿವೆ. 4.40 ಕೋಟಿ ಜನರಿಗೆ ಈ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನ …
Read More »ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ
ಮಂಗಳೂರು: ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಘಟನೆಯಲ್ಲಿ ಹಲವು ಮಂದಿಗೆ ಗಾಯವಾಗಿದೆ ಅಂತ ತಿಳಿದು ಬಂದಿದೆ. ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿದ್ದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್‌ಕೆಎಸ್‌ಎಸ್‌ಎಫ್ ಆಂಬ್ಯುಲೆನ್ಸ್ ಚಾಲಕ ಇಬ್ರಾನ್, ಕೆಜಿಎನ್ ಆಂಬ್ಯುಲೆನ್ಸ್‌ನ …
Read More »ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ನಿರ್ಧಾರ?
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಬದಲಾವಣೆ ಮಾಡಲು ಇದೀಗ ದೆಹಲಿಯಿಂದ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’ ಸೈಟುಗಳ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಈ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರ ನಾಯಕರು ಎಂತಹ ನಿರ್ಧಾರ ಕೈಗೊಂಡಿದ್ದಾರೆ ಗೊತ್ತೆ? ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಈಗ ಕಂಟಕ ಎದುರಾಗಿದೆಯಾ? ಬನ್ನಿ ತಿಳಿಯೋಣ
Read More »ಭಾರತೀಯರಿಗೆ ಗುಡ್ ನ್ಯೂಸ್ : ವೀಸಾ ಮುಕ್ತ ಪ್ರವೇಶ ಘೋಷಿಸಿದ ಈ 6 ದೇಶಗಳು!
ನವದೆಹಲಿ : ಭಾರತೀಯ ಪ್ರವಾಸಿಗರಿಗೆ ಸಿಹಿಸುದ್ದಿ,ಆರು ದೇಶಗಳು ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿವೆ. ಅದರಂತೆ, ಈ ಆರು ದೇಶಗಳು ವೀಸಾ ಇಲ್ಲದೆ ಹೋಗಬಹುದು. ಆದಾಗ್ಯೂ, ಆ ದೇಶಕ್ಕೆ ಆಗಮಿಸಿದ ನಂತರ ವೀಸಾ-ಆನ್-ಅರೈವಲ್ ತೆಗೆದುಕೊಳ್ಳಬೇಕು. ವೀಸಾ-ಆನ್-ಅರೈವಲ್ ಎಂದರೆ ಆಯಾ ದೇಶಗಳಿಗೆ ಹೋಗುವಾಗ ಮುಂಚಿತವಾಗಿ ವೀಸಾ ಅಗತ್ಯವಿಲ್ಲ. ಆ ದೇಶದಲ್ಲಿ ಇಳಿದ ನಂತರ, ನಿಮ್ಮ ದಾಖಲೆಗಳನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ವೀಸಾ ನೀಡಲಾಗುತ್ತದೆ. ಜೋರ್ಡಾನ್ ನ ಆರು ದೇಶಗಳಲ್ಲಿ …
Read More »ಸಾಲಗಾರರಿಗೆ ಶಾಕ್: ಬಡ್ಡಿದರ ಏರಿಕೆಯಿಂದ ಎಸ್.ಬಿ.ಐ. ಸಾಲ ಮತ್ತಷ್ಟು ದುಬಾರಿ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಸಾಲ ಮತ್ತಷ್ಟು ದುಬಾರಿಯಾಗಿದೆ. ಎಸ್‌ಬಿಐ ತನ್ನ ಬಹುತೇಕ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.10 ರಷ್ಟು ಏರಿಕೆ ಮಾಡಿದೆ. ಇದರೊಂದಿಗೆ ಎಂಸಿಎಲ್‌ಆರ್ ಆಧರಿತ ಎಲ್ಲಾ ಸಾಲಗಳು ದುಬಾರಿಯಾಗಲಿವೆ. ಇಎಂಐ ಹೆಚ್ಚಳ ಅಥವಾ ಸಾಲದ ಕಂತು ವಿಸ್ತರಣೆ ಮೂಲಕ ಸಾಲಗಾರರಿಗೆ ಹೊರೆ ಹೆಚ್ಚಾಗಲಿದೆ. ಆಗಸ್ಟ್ 15 ರಿಂದಲೇ ಅನ್ವಯವಾಗುವಂತೆ ಎಸ್.ಬಿ.ಐ. ಹೊಸ ಬಡ್ಡಿದರ ಪರಿಷ್ಕರಣೆ ಮಾಡಿದ್ದು, ಮನೆ, ವಾಹನ, ಗೃಹ ಇತರೆ ಸಾಲಗಳ ಬಡ್ಡಿದರ …
Read More »ಹುಲಿ ಬಂದಿದೆ ಎಂದು ನಕಲಿ ವಿಡಿಯೊ ಹರಿಬಿಟ್ಟ ಇಬ್ಬರು ಪೊಲೀಸ್ ವಶಕ್ಕೆ
ಹಿರೇಬಾಗೇವಾಡಿ: ಸಮೀಪದ ಕೊಂಡಸಕೊಪ್ಪ ಮತ್ತು ಯರಮಾಳ ಬಳಿ ಹುಲಿ ಬಂದಿದೆ ಎಂಬ ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು. ಕೊಂಡಸಕೊಪ್ಪದ ಶೀತಲ್ ಪಾಟೀಲ, ಮಲ್ಲೇಶ ದೇಸಾಯಿ ವಶಕ್ಕೆ ಪಡೆಯಲಾಗಿದೆ. ‘ಈ ಭಾಗದಲ್ಲಿ ಕಾಡುಬೆಕ್ಕು ಓಡಾಡುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಈ ಮಧ್ಯೆ, ಹುಲಿ ಓಡಾಡುತ್ತಿರುವ ವಿಡಿಯೊ ಶೀತಲ್ ಮತ್ತು ಮಲ್ಲೇಶ ವಾಟ್ಸ್‌ಆಯಪ್ …
Read More »