Breaking News

ಬೆಳಗಾವಿ

ಬೆಳಗಾವಿ : ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.   ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೂತನ ಕೃಷಿ ಕಾಯ್ದೆ ಗಳು ರೈತರಿಗೆ ಮಾರಕವಾಗಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ …

Read More »

ಬೆಳಗಾವಿ ಕೋಟೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಬೆಳಗಾವಿ : ಇಲ್ಲಿನ ಕೋಟೆ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಇಂದು ಮಧ್ಯಾಹ್ನ ಪತ್ತೆಯಾಗಿದ್ದು, ಅಲ್ಲಿಗೆ ಬರುವ ವಾಯು ವಿಹಾರಿಗಳಿಗೆ ಆತಂಕ ಮನೆ ಮಾಡಿದೆ.   ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾರ್ಕೇಟ್ ಠಾಣೆ ಪೊಲೀಸರು ಭೇಟಿ ನೀಡಿ, ಶವವನ್ನು ಕೆರೆಯಿಂದ ಹೊರಗೆ ತೆಗೆಯಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ತನಿಖೆಯ ಬಳಿಕವೇ ಸತ್ಯ ತಿಳಿಯಬೇಕಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಬೆಳಗಾವಿಯ ಮುಂದಿನ ಪಾಲಿಕೆ ಮೇಯರ್ ಬಿಜೆಪಿಯವರಾಗಿರ್ತಾರೆ: ಸಚಿವ ಭೈರತಿ ಬಸವರಾಜ್

ಬೆಳಗಾವಿ: ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಾಡುತ್ತೇನೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ನಗರದಲ್ಲಿ ಇಂದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಸಂಕ್ರಾತಿ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು, ಈ ಬಗ್ಗೆ …

Read More »

ಗೋಕಾಕ ಅಭಿವೃದ್ದಿಗೆ 100 ಕೋಟಿ ಪ್ರಸ್ತಾವಣೆ, ಶೀಘ್ರ ಅನುದಾನ ಸಿಗುವ ನಿರೀಕ್ಷೆಯಿದೆ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿ.ಸಿ. ರಸ್ತೆ, ಚರಂಡಿ, ಪ್ರೀಕಾಸ್ಟ್ ಪೇವರ್ಸ್ ರಸ್ತೆ, ತೆರದ ಭಾಂವಿ, ಸಮುದಾಯ ಭವನ ಹಾಗೂ ಪಿಕ್-ಅಪ್ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೆಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. 2019-20ನೇ ಸಾಲಿನ ವಿಶೇಷ ಘಟಕ (ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‍ಪಿ) ಯೋಜನೆಗಳ ಅಡಿ 30 ಕೋಟಿ ರೂ. ಮತ್ತು ಅದೇ ಅವಧಿಯ ಉಳಿಕೆ ಅನುದಾನದಲ್ಲಿ 31.05 ಕೋಟಿ …

Read More »

ಕೊರೋನಾ ದೃಢ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್

  ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಜನ ಶಿಕ್ಷಕರಿಗೆ ಕೊರಾನಾ ದೃಡವಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಅದರಲ್ಲಿ ಶಾಲೆಗಳಾದ ಕನಸಗೇರಿ ಪ್ರಾಥಮಿಕ ಶಿಕ್ಷಕ ಹಾಗೂ ಹೀರೆನಂದಿ ಪ್ರೌಡಶಾಲೆಯ ಒರ್ವ ಶಿಕ್ಷಕನಿಗೆ ಕೊರಾನಾ ಪೊಸಿಟೀವ್ ದೃಡವಾದ ಹಿನ್ನೆಲೆ ಇಬ್ಬರು ಶಿಕ್ಷಕರು ಸೆಲ್ಪ್ ಹೋಮ್ ಕ್ವಾರೈಂಟೈನ್ ಆಗಿದ್ದು, ಈ ಗ್ರಾಮದ ಎರಡು ಶಾಲೆಗಳನ್ನು ಮೂರು ದಿನ ಬಂದ್ ಮಾಡಿ ಪ್ರಾರಂಭ ಮಾಡುವದಕ್ಕಿಂತ ಮುಂಚೆ ಸ್ಥಳಿಯ ಗ್ರಾಮ ಪಂಚಾಯತಿಯವರಿಂದ ಆ ಶಾಲೆಗಳಿಗೆ ಸಾನಿಟೈಜರ ಮಾಡಿಸಿ …

Read More »

ಮಹಾಲಿಂಗಪುರ ಪುರಸಭೆ ಸದಸ್ಯೆ ತಳ್ಳಾಟ ಪ್ರಕರಣ : ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದೇನು ?

ಗೋಕಾಕ : ‘ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ ಪ್ರಕರಣದಲ್ಲಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲು ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಹಾಲಿಂಗಪೂರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದೇವೆ. ಯಾರೇ ತಪ್ಪು ಮಾಡಿದರು ಸಹ ಕಾನೂನು ಕ್ರಮ ಕೈಗೊಂಡರೆ …

Read More »

ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ

  ಗೋಕಾಕನ ನಗರದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಗೋಕಾಕ ಗೃಹ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ ಈ ದೇಶದ ಎಲ್ಲಾ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ …

Read More »

ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢ

ಬೆಳಗಾವಿ: ಶಾಲೆ-ಕಾಲೇಜು ಪುನರಾರಂಭದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ಗ್ರಾಮೀಣ ಭಾಗದ 9, ಬೆಳಗಾವಿ ನಗರ ವಲಯದ 4 , ಕಿತ್ತೂರು 1, ರಾಮದುರ್ಗದಲ್ಲಿ 3 ಶಿಕ್ಷಕರಿಗೆ  ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಕೋವೀಡ್ ಸೊಂಕು  ದೃಢವಾಗಿದೆ. ಹುಕ್ಕೇರಿಯ 2 , ರಾಯಬಾಗದ 2 ಶಿಕ್ಷಕರಿಗೆ ಸೊಂಕು ತಗುಲಿದ್ದು ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು …

Read More »

ಹುಲಕುಂದ ಪಂಚಾಯ್ತಿ 13 ಸದಸ್ಯರು, 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

  ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಪಂಚಾಯತಿಯ 14 ಸದಸ್ಯರ ಪೈಕಿ 13 ಸದಸ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹೌದು ಮಂಗಳವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಪಂಚಾಯತಿಯ 13 ಸದಸ್ಯರು ಹಾಗೂ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ …

Read More »

ಮಾಜಿ ಶಾಸಕ ಬಸವಂತರೆಡ್ಡಿ ನಿಧನ: ಸಂತಾಪ ವ್ಯಕ್ತಪಡಿಸಿದ ಸಚಿವ ರಮೇಶ್ ಜಾರಕಿಹೊಳಿ

  ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ಬಸವಂತ ರೆಡ್ಡಿ ಪಾಟೀಲ್ ಮೋತಕದಲ್ಲಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1989 ಮತ್ತು 1994 ರಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ್ದ ಬಸವಂತರೆಡ್ಡಿ ಅವರು ಪ್ರಗತಿಪರ ಶಾಸಕರಾಗಿ ನಮಗೆಲ್ಲಾ ಮಾದರಿಯಾಗಿದ್ದರು ಎಂದು ಸ್ಮರಿಸುವ ಸಚಿವ ಜಾರಿಕಿಹೊಳಿ, ಯಾದಗೀರ್ ಮತ್ತು ಕಲಬುರಗಿ …

Read More »