Breaking News

ಬೆಳಗಾವಿ

ಮುಖ್ಯ ಇಂಜಿನಿಯರ್ ಮನೆಯಲ್ಲಿ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ನಗದು ಪತ್ತೆ*

ಮುಖ್ಯ ಇಂಜಿನಿಯರ್ ಮನೆಯಲ್ಲಿ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಒಂದೂವರೆ ಲಕ್ಷ ನಗದು ಪತ್ತೆ* ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿ ವೇಳೆ ಪತ್ತೆ ಬೆಳಗಾವಿಯ ರಾಮತೀರ್ಥ‌ನಗರದಲ್ಲಿರುವ ಅಧಿಕಾರಿ ಮನೆ ಮುಖ್ಯ ಇಂಜಿನಿಯರ್ ಅಶೋಕ ವಸಂದ್ ಬೆಳಗಾವಿ ಮನೆ, ಧಾರವಾಡ ಕಚೇರಿ ಮೇಲೆ‌ ದಾಳಿ ಕೆಎ‌ನ್‌ಎನ್ಎಲ್ ಧಾರವಾಡ ವಿಭಾಗದ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ ವಸಂದ್ ಧಾರವಾಡ ‌ಲೋಲಾಯುಕ್ತ ಅಧಿಕಾರಿಗಳಿಂದ ಬೆಳಗಾವಿಯಲ್ಲಿ ಶೋಧಕಾರ್ಯ

Read More »

ರಾಜು ಕಾಗೆ ಹೇಳಿದ್ದರಲ್ಲಿ ಸತ್ಯಾಂಶವಿದೆ: ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಹೇಳಿಕೆ

ಬೆಳಗಾವಿ: ಹಿಂದೆ 40 ಪರ್ಸೆಂಟ್ ಅಂತಾ ಬಿಜೆಪಿ ಸರ್ಕಾರದ ಮೇಲೆ ಆಪಾದನೆ ಮಾಡಿದ್ದರು. ಅದನ್ನು ಅವರು ಸಾಬೀತು ಮಾಡಲಿಲ್ಲ. ಆದರೆ, ಅವರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರ ಹೇಳಿಕೆಯಿಂದಲೇ ಸಾಬೀತಾಗಿದೆ. ಹಾಗಾಗಿ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ …

Read More »

ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲ್ವಾರು ಯೋಜನೆ ಗಳಿಗೆ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ತ್ರೀಚಕ್ರ ವಾಹನ ಸೋಲಾರ್ ಪ್ಲಾಟ್, ಪೌರಕಾರ್ಮಿಕರಿಗೆ ಸಮವಸ್ತ್ರದ ಕಿಟ್, ತ್ಯಾಜ್ಯ ಸಂಗ್ರಹಿಸಲು ಟ್ಯಾಕ್ಟರ್ ಹೀಗೆ ಹತ್ತು ಹಲವರು ಫಲಾನುಭವಿಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಯುವಕರು ಉಪಸ್ಥಿತರಿದ್ದರು.

Read More »

ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್

ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್ ಬೆಳಗಾವಿಯ ಉಜ್ವಲ ನಗರ, ಶಾಮ್ಸ್ ಕಾಲೋನಿ ಹಾಗೂ ಅಮನ್ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಆಸೀಫ್ ಸೇಠ್ ಚಾಲನೆ ನೀಡಿ ಜನತಾದರ್ಶನದಲ್ಲಿ ಅಹವಾಲು ಸ್ವೀಕರಿಸಿದರು ಹಲವಾರು ವರ್ಷಗಳಿಂದ ಬೆಳಗಾವಿ ಉಜ್ವಲ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದವು ಒಳಚರಂಡಿ ದುರಸ್ತಿ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಸೋಮವಾರ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು …

Read More »

ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ…

ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ… ಇನ್ಮುಂದೆ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸಿಗಲಿವೆ ಆನ್’ಲೈನ್ ಸೇವೆಗಳು ಭಾರತೀಯ ಅಂಚೆ ಇಲಾಖೆಯೂ ಭಾರತಾದ್ಯಂತ ಗ್ರಾಹಕರಿಗೆ ಶೀಘ್ರಗತಿಯಲ್ಲಿ ಸೇವೆಯನ್ನು ನೀಡುವ ಉದ್ಧೇಶದಿಂದ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 ಜಾರಿಗೊಳಿಸಿದ್ದು, ಇಂದು ಬೆಳಗಾವಿಯ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಈ ನೂತನ ಸೇವೆಯನ್ನು ಆರಂಭಿಸಲಾಯಿತು. ಇಂದು ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದ ಅಧೀಕ್ಷಕರಾದ ಎಸ್.ಕೆ. ಮುರನಾಲ್, ಸಹಾಯಕ ಅಧೀಕ್ಷಕರಾದ …

Read More »

ಆಡಳಿತ ವ್ಯವಸ್ಥೆ ಕುಸಿದಿದೆ, ನಾನು 2 ದಿನದಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜು ಕಾಗೆ

ಚಿಕ್ಕೋಡಿ(ಬೆಳಗಾವಿ): “ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ ಬಿ.ಆರ್​. ಪಾಟೀಲ್​ ಹೇಳಿರುವುದು ಸುಳ್ಳಲ್ಲ” ಎಂದು ಹಿರಿಯ ಶಾಸಕ ರಾಜು ಕಾಗೆ ಸ್ವಪಕ್ಷ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಆರ್. ಪಾಟೀಲ್ ಆಡಿರುವ ಮಾತುಗಳು ಸುಳ್ಳಲ್ಲ. ಅವರ ಆಡಿಯೋ ವೈರಲ್ ವಿಚಾರಕ್ಕೆ …

Read More »

ಮಳೆಯಿಂದ ಕ್ಷೀರಧಾರೆಯಂತೆ ಧುಮ್ಮಿಕ್ಕುತ್ತಿರುವ ಅಂಬೋಲಿ ಜಲಪಾತ

ಬೆಳಗಾವಿ: ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಅದರಲ್ಲೂ ಕಡಿದಾದ ಹಚ್ಚ ಹಸಿರಿನ ಗುಡ್ಡದಿಂದ ಧುಮ್ಮಿಕ್ಕಿ ಹರಿಯುವ ಅಂಬೋಲಿ ಫಾಲ್ಸ್ ಜಲವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜಲಪಾತಗಳತ್ತ ಹರಿದು ಬರುತ್ತಿದೆ. ಹೌದು, ಮಾನ್ಸೂನ್ ಋತುವಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣಗಳು ಎಂದರೆ ಜಲಪಾತಗಳು. ಅದರಲ್ಲೂ ಅಂಬೋಲಿ ಫಾಲ್ಸ್ ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರು ಹೊದಿಕೆಯ ಗುಡ್ಡದಿಂದ ಧುಮ್ಮಿಕ್ಕಿ ಬರುವ ಜಲಧಾರೆ. ಹಾಲ್ನೊರೆಯಂತೆ ಹರಿಯುವ ನೀರಿನ …

Read More »

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ತಲಾಶ್ ನಡೆಸಿದ ಪೊಲೀಸರು (

ಬೆಳಗಾವಿ: ಚಾಕು, ಮಚ್ಚು, ಲಾಂಗು ಎಂದರೆ ಆಟಿಕೆ ಸಾಮಾನು ಆದಂತಾಗಿವೆ. ಪುಸ್ತಕ, ಪೆನ್, ಊಟದ ಡಬ್ಬಿ ಇಟ್ಟುಕೊಳ್ಳುವ ಬ್ಯಾಗ್​ನಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಶಾಲಾ ಕಾಲೇಜು ಮಕ್ಕಳು ಓಡಾಡುತ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಬೆಳಗಾವಿ ಪೊಲೀಸ್ ಕಮಿಷನರ್ ನೂತನ ಚಕ್ರವ್ಯೂಹವೊಂದನ್ನು ರಚಿಸಿದ್ದಾರೆ. ಅದುವೇ “ಚುಚ್ಚು ನಿಯಂತ್ರಣ ತಂಡ”. ಚಾಕು ಇರಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ಬೊರಸೆ ಅವರು ಚುಚ್ಚು ನಿಯಂತ್ರಣ ತಂಡವನ್ನು ಮೊನ್ನೆಯಷ್ಟೇ ಘೋಷಣೆ ಮಾಡಿದ್ದರು. ಈ …

Read More »

30 ವರ್ಷದ ಹಿಂದೆ ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಈಗ ಶಿಕ್ಷೆ

ಬೆಳಗಾವಿ : 30 ವರ್ಷದ ಹಿಂದೆ ಉತಾರ ಕೊಡಲು 500 ರೂ. ಲಂಚ ಪಡೆದಿದ್ದ ಆಗಿನ ಗ್ರಾಮ‌ ಲೆಕ್ಕಾಧಿಕಾರಿಗೆ ಈಗ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆದರೆ, ದೂರು ನೀಡಿದ್ದ ರೈತ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಲಂಚ ಸ್ವೀಕರಿಸಿದ್ದ ಅಧಿಕಾರಿ ಹಿಂಡಲಗಾ ಜೈಲು ಕಂಬಿ ಎಣಿಸುತ್ತಿದ್ದಾರೆ. 1995ರಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ …

Read More »

ಭೀಕರ ಅಪಘಾತ…ಹಿಂಬದಿಯಿಂದ ಗುದ್ದಿದ ಬಸ್…ಲಾರಿ ಪಲ್ಟಿ!!!

ಭೀಕರ ಅಪಘಾತ…ಹಿಂಬದಿಯಿಂದ ಗುದ್ದಿದ ಬಸ್…ಲಾರಿ ಪಲ್ಟಿ!!! ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ವೇಗದಲ್ಲಿದ್ದ ಖಾಸಗಿ ಬಸ್ಸೊಂದು ಹಿಂಬದಿಯಿಂದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಟ್ರಕ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಎಸ್ ಎಸ್ ಟ್ರಾವೇಲ್ಸ್ ಬಸ್ ಹಾಗೂ ಟ್ರಕ್ ನಡುವೆ …

Read More »