Breaking News

ಬೆಳಗಾವಿ

ಜಲಜೀವನ ಮಿಷನ್‌ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಎಲ್.ಕೆ.ಅತೀಕ್

ಬೆಳಗಾವಿ: ‘ಜಲಜೀವನ ಮಿಷನ್‌ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಎಲ್ಲ ಕಾಮಗಾರಿಗಳಿಗೆ ವೇಗ ನೀಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚಿಸಿದರು.   ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛ ಭಾರತ ಮಿಷನ್ ಹಾಗೂ ಜಲಜೀವನ ಮಿಷನ್ ಯೋಜನೆ ಕುರಿತು ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರತಿ ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು’ ಎಂದು …

Read More »

ಮರಾಠಾ ಸಮುದಾಯದ ಬಹುಕಾಲದ  ಬೇಡಿಕೆಯಾಗಿರುವ 2A ವರ್ಗವನ್ನು ನೀಡುವಂತೆ ಬೃಹತ್ ಪ್ರತಿಭಟನೆ

ಬಿಜೆಪಿ ಕರ್ನಾಟಕ ರಾಜ್ಯ ಕರ್ನಾಟಕ ಮರಾಠ ಸಮಾಜದ ಅಡಿಯಲ್ಲಿ ನಮ್ಮ ಮರಾಠಾ ಸಮುದಾಯದ ಬಹುಕಾಲದ  ಬೇಡಿಕೆಯಾಗಿರುವ 2A ವರ್ಗವನ್ನು ನೀಡುವಂತೆ ಬೃಹತ್ ಪ್ರತಿಭಟನೆ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ರೀ ಕಿರಣ ಜಾಧವ್ ತಿಳಿಸಿದರು ಮರಾಠ ಸಮುದಾಯದವರೆಲ್ಲರೂ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನ ವನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತ್ತು ಈ ಪ್ರತಿಭಟನೆ ಜಾಗೃತಿ ಮತ್ತು ಮಹತ್ವವನ್ನು ತಿಳಿಸುವುದರ ಮೂಲಕ   ಮತ್ತು ಮುಂಬರುವ ದಿನಗಳಲ್ಲಿ …

Read More »

ಬ್ರೇಕ್ ಫೇಲ್ ಆಗಿ ಕ್ರೇನ್ ವಾಹನ ರಸ್ತೆ ಡಿವೈಡರ್‌ಗೆ ಗುದ್ದಿದೆ.

ಬ್ರೇಕ್ ಫೇಲ್ ಆಗಿ ಕ್ರೇನ್ ವಾಹನ ರಸ್ತೆ ಡಿವೈಡರ್‌ಗೆ ಗುದ್ದಿರುವ ಘಟನೆ ಬೆಳಗಾವಿಯ ನೆಹರು ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ.ಬೆಳಗಾವಿ: ಬೆಳಗಾವಿಯಲ್ಲಿ ಕೂದಲೇಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಕೆಎಲ್‌ಇ ಆಸ್ಪತ್ರೆಯ ಕಡೆಯಿಂದ ಕೃಷ್ಣದೇವರಾಯ ಸರ್ಕಲ್ ಕಡೆಗೆ ಬರುತ್ತಿದ್ದ ಕ್ರೇನ್ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಈ ವೇಳೆ ಏಕಾಏಕಿ ಬ್ರೇಕ್ ವಿಫಲವಾಯಿತು. ಇದರಿಂದ ಕ್ರೇನ್ ವಾಹನ ರಸ್ತೆ ಡಿವೈಡರ್‌ಗೆ ಗುದ್ದಿದೆ. ಅಪಘಾತ ಸಮಯದಲ್ಲಿ ಅದೇ ರಸ್ತೆಯಲ್ಲಿ ಶಾಲಾ ವಾಹನ ಕೂದಲೆಳೆ ಅಂತರದಲ್ಲಿ …

Read More »

ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಅಳವಡಿಸಲು ಮುಂದಾದ ಹಿಂಡಲಗಾ ಪಂಚಾಯತಿ

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿದ್ದಾರೆ. ಹೀಗೆ ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯತಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು ಸಿಸಿ ಕ್ಯಾಮರಾ ಅಳವಡಿಸುವ ಕಾಮಗಾರಿಗೆ ಮಂಗಳವಾರ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಚಾಲನೆ ನೀಡಿದರು. ಅದೇ ರೀತಿ ಕಸ ಚೆಲ್ಲುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸುವ ಬಗ್ಗೆ ಎಚ್ಚರಿಕೆಯನ್ನು ಗ್ರಾಮ ಪಂಚಾಯತಿ ನೀಡಿದೆ. ಈ ವೇಳೆ ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಶ್ರೀ ಕೋಕಿತ್ಕರ್, …

Read More »

ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ತೆರವು ಮಾಡಿದ ಬುಡಾ ಅಧಿಕಾರಿಗಳು

ಬೆಳಗಾವಿ ರಾಮತೀರ್ಥ ನಗರದಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಬುಡಾ ಅಧಿಕಾರಿಗಳು ತೆರವು ಮಾಡಿದ್ದಾರೆ. ಹೌದು ಮಂಗಳವಾರ ಬೆಳಿಗ್ಗೆ ಜೆಸಿಬಿಗಳ ಸಹಾಯದಿಂದ ರಾಮತೀರ್ಥ ನಗರದಲ್ಲಿ ಯೋಜನೆ ಸಂಖ್ಯೆ 35, 40, 41ರಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಈ ಸಂಬಂಧ ಮಾತನಾಡಿದ ಬುಡಾ ಎಇಇ ಮಹಾಂತೇಶ ಹಿರೇಮಠ ಅವರು ಯಾವುದೇ ಅನಧಿಕೃತ ಮನೆಗಳನ್ನು ಯಾರೂ ಕೂಡ ಕಟ್ಟಬಾರದು. ಪ್ರಾಧಿಕಾರಕ್ಕಾಗಿ ನಾವು ವಶಪಡಿಸಿಕೊಂಡಿರುವ ಅಥವಾ …

Read More »

ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಹೌದು ಸೋಮವಾರ ರಾತ್ರಿ ಬೆಳಗಾವಿ ನಗರದ 3ನೇ ಮತ್ತು 4ನೇ ರೈಲ್ವೇ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ರೈಲು ಗುದ್ದಿದ ಪರಿಣಾಮ ಆಕಳುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸ್ಯಾನಿಟರಿ ಇನ್ಸಪೆಕ್ಟರ್ ಗಣಾಚಾರಿ ಮತ್ತು ಅವರ ತಂಡ ಆಕಳುಗಳ ಶವಗಳನ್ನು ತೆಗೆದುಕೊಂಡು ಹೋಗಿ …

Read More »

ಬೆಳಗಾವಿ ಗಡಿ ವಿವಾದ : ಅತ್ತ ‘ಮಹಾ’ ಸಿದ್ಧತೆ, ಇತ್ತ ಗಾಢ ನಿದ್ದೆ

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತುರ್ತು ಸಿದ್ಧತೆಗಳನ್ನೂ ಮಾಡಿಕೊಳ್ಳದಿರುವುದು ಗಡಿ ಕನ್ನಡಿಗರು ಹಾಗೂ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ.   1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ. ಗಡಿ ವಿವಾದವನ್ನು ಸುಪ್ರೀಂ …

Read More »

ಬೆಳಗಾವಿಯಲ್ಲಿ ಕುಸಿದ ತಾಪಮಾನ: 10.2 ಡಿಗ್ರಿ ಸೆಲ್ಸಿಯಸ್‌ ದಾಖಲು

ಬೆಳಗಾವಿ: ನಗರದಲ್ಲಿ ಸೋಮವಾರ ಕನಿಷ್ಠ ತಾಪಮಾನ 10.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಪ್ರಸಕ್ತ ವರ್ಷದ ಈವರೆಗಿನ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ. ಕಳೆದ ಸೋಮವಾರದಿಂದ  ಗರಿಷ್ಠ 27ರಿಂದ ಕನಿಷ್ಠ 18ರ ಆಸುಪಾಸಿನಲ್ಲೇ ದಾಖಲಾಗಿದೆ. ಸೋಮವಾರ ಏಕಾಏಕಿ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡಿದೆ. ಇನ್ನೂ ಎರಡು ದಿನ ಇಷ್ಟೇ ಪ್ರಮಾಣದ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ನಗರದ ಜನ ಥರಗುಟ್ಟುವ ಚಳಿಯಿಂದ ಬಳಲುವಂತಾಯಿತು. ಗರಿಷ್ಠ ತಾಪಮಾನ ಸರಾಸರಿ …

Read More »

ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು,ರಾಜ್ಯದಲ್ಲಿಯೂ ಕಠಿಣ ಕ್ರಮ : ಅಭಯ್ ಪಾಟೀಲ

ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ತಂದು ತೀವ್ರತರವಾದ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಯುಪಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದರು. ಮಂಗಳವಾರ ಬೆಳಗಾವಿಯ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ರಾಜ್ಯ ಮತ್ತು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ ಜನರ ವಿರುದ್ಧ ಉಗ್ರ ಕ್ರಮ ಆಗಬೇಕು ಎಂದು ನಾವು ಮೊದಲಿನಿಂದ ಒತ್ತಾಯಿಸುತ್ತಿದ್ದೇವೆ. ಈ …

Read More »

ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ

ದೈಹಿಕ ಅಂಗವಿಕಲತೆಯನ್ನು ಲೆಕ್ಕಿಸದೆ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸಿದ ಎಲ್ಲ ವಿಕಲಚೇತನ ಕ್ರೀಡಾ ಪಟುಗಳಿಗೆ ಸರ್ಕಾರದಿಂದ ಹೆಚ್ಚಿನ ಸಹಾಯ, ಸಹಕಾರ ಸಿಗುವಂತಾಗಬೇಕು ಎಂದು ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅಭಿಪ್ರಾಯ ಪಟ್ಟರು. ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ, ಒಲಂಪಿಕ್ ಕಮಿಟಿ …

Read More »