Breaking News
Home / ಜಿಲ್ಲೆ / ಕಾರ್ ಶೋರೂಂಗೆ ತಗುಲಿದ ಬೆಂಕಿ – 10ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿ

ಕಾರ್ ಶೋರೂಂಗೆ ತಗುಲಿದ ಬೆಂಕಿ – 10ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿ

Spread the love

ಧಾರವಾಡ: ಟೊಯೋಟಾ ಕಾರ್ ಶೋರೂಂವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹತ್ತುಕ್ಕೂ ಹೆಚ್ಚು ಕಾರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ರಾಯಾಪೂರದಲ್ಲಿ ನಡೆದಿದೆ.

ನಗರದ ರಾಯಪುರ ಬಳಿಯಿರುವ ಶೋಧಾ ಟೊಯೋಟಾ ಕಾರ್ ಸ್ಕ್ರ್ಯಾಪ್ ಶೋರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ಕಾರುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಕಾರುಗಳಿಗೆ ಹಾಗೂ ಶೋರೊಂ ಅಕ್ಕ ಪಕ್ಕದ ಬೆಂಕಿಯನ್ನ ಅಗ್ನಿ ಶಾಮಕ ದಳ ನಂದಿಸುವಲ್ಲಿ ಸಫಲವಾಯಿತು.

ಸುಟ್ಟ ಕಾರುಗಳು ರಿಪೇರಿಗೆ ಬಂದಿದ್ದವು ಹಾಗೂ ಅಪಘಾತಕ್ಕೆ ಇಡಾಗಿದ್ದವು. ಅವುಗಳನ್ನ ರಿಪೇರಿ ಮಾಡಲೆಂದು ಅಲ್ಲಿ ಇಡಲಾಗಿತ್ತು ಎಂದು ತಿಳಿದು ಬಂದಿದೆ. ಹುಲ್ಲು ಇರುವ ಕಾರಣ ಈ ಬೆಂಕಿ ಎಲ್ಲ ಕಡೆ ಆವರಿಸಿದ್ದಕ್ಕೆ ಕಾರುಗಳಿಗೆ ಬೆಂಕಿ ಹತ್ತಿದೆ. ಆದರೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎನ್ನುವದು ತಿಳಿದು ಬಂದಿಲ್ಲ. ಈ ಕುರಿತು ಹುಬ್ಬಳ್ಳಿಯ ಎಪಿಎಂಸಿ- ನವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ರಾಷ್ಟ್ರ ಮಟ್ಟದಲ್ಲಿ ವೈರಲ್ ಆಯ್ತು ವಿಡಿಯೋ; ನರ್ತಕಿ ಮೇಲೆ ಹಣ ತೂರಿದ ಕಾಂಗ್ರೆಸ್ ಮುಖಂಡ!

Spread the love ಧಾರವಾಡ: ನಿನ್ನೆ ನರ್ತಕಿಯೊಬ್ಬರ ಮೇಲೆ ಹಣ ತೂರಿದ್ದ ಕಾಂಗ್ರೆಸ್​ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ