Breaking News

ಆಗಲ್ಲ ಅಂದ್ರೆ ಇಬ್ರೂ ರಾಜೀನಾಮೆ ಕೊಡಿ : ಶಾಸಕ, ಸಂಸದರಿಗೆ ಎಚ್ಚರಿಕೆ

Spread the love

ಬೇಲೂರು  : ತಾಲೂಕಿನ ಅಗಸರಹಳ್ಳು ಸೇತುವೆ ವಿಚಾರದಲ್ಲಿ ರಾಜಕೀಯ ಮುಖಂಡರು ಒಬ್ಬರಿಗೊಬ್ಬರು ದೂರು ಹೇಳುವುದನ್ನು ಬಿಟ್ಟು ಯಾವುದೇ ರಾಜಕೀಯ ಮಾಡದೆ ತಕ್ಷಣವೇ ನಮಗೆ ಸೇತುವೆ ಮಾಡಿಸಿಕೊಡಿ. ಇಲ್ಲದಿದ್ದರೆ ಶಾಸಕರು ಹಾಗೂ ಸಂಸದರು ಮತ್ತು ಸಂಬಂಧಪಟ್ಟಅ​ಧಿಕಾರಿಗಳ ವಿರುದ್ಧ 10 ಗ್ರಾಮಸ್ಥರು ಒಟ್ಟುಗೂಡಿ ಉಗ್ರರೀತಿಯ ಪ್ರತಿಭಟನೆ ನಡೆಸುವುದಾಗಿ ಅಗಸರಹಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಅಟ್ಟಾಡಿಸಿ ಹೊಡೆಸುತ್ತೇನೆ : ಅಧಿಕಾರಿಗಳಿಗೆ ಅವಾಜ್ ಹಾಕಿದ ಎಚ್.ಡಿ.ರೇವಣ್ಣ…

ಗ್ರಾಮಸ್ಥರಾದ ಶ್ರೀನಿವಾಸ್‌ ಹಾಗೂ ನಾಗರಾಜ್‌ ಪಟ್ಟಣದಲ್ಲಿ ಸುದ್ದಿಗೊೂೕಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನದಲ್ಲಿ ಬಾರಿ ಮಳೆಯಿಂದಾಗಿ ಎರಡು ಬಾರಿ ಅಗಸರಹಳ್ಳಿ ಸೇತುವೆ ಕೊಚ್ಚಿಹೋಗಿದ್ದು, ಕಳೆದ ಬಾರಿ ಸೇತುವೆ ಕೊಚ್ಚಿ ಹೋದ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ತಕ್ಷಣವೇ ಸೇತುವೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು.

ನಂತರ ಕೇವಲ ಸೇತುವೆ ಮೇಲ್ಭಾಗದಲ್ಲಿ ಮಣ್ಣು ಸುರಿಸಿದ್ದರು. ಮತ್ತೊಮ್ಮೆ ಸುರಿದ ಬಾರಿ ಮಳೆಯಿಂದಾಗಿ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು, ಪರಿಣಾಮ ಸುಮಾರು 25 ಗ್ರಾಮಗಳಿಗೆ ರಸ್ತೆಯ ಸಂಪರ್ಕವೇ ಇಲ್ಲದಂತಾಗಿದೆ ಎಂದರು.

ಬಿಜೆಪಿ ಸೇರಲು ಮನಸ್ಸು ಮಾಡಿದ್ರಾ ಮತ್ತೋರ್ವ ಜೆಡಿಎಸ್ ಶಾಸಕ?..

ಕಳೆದ ಬಾರಿ ಲೋಕೋಪಯೋಗಿ ಸಚಿವರಾದ ಹೆಚ್‌.ಡಿ.ರೇವಣ್ಣನವರು ಈ ಸೇತುವೆಗೆ 2 ಕೋಟಿ ರು. ಹಣವನ್ನು ನೀಡಿದ್ದೇವೆ ಎನ್ನುವ ಇವರು ಸಕಲೇಶಪುರ ಹಾಗೂ ಬೇಲೂರಿನ ಒಟ್ಟು 25 ಸೇತುವೆಗಳಿಗೆ ಅನುಮೋದನೆ ಕೊಟ್ಟಿರುತ್ತಾರೆ. ಆದರೆ ಎಲ್ಲ ಅನುದಾನವೂ ವಾಪಸ್ಸು ಹೋಗಿರುವುದರ ಹಿನ್ನಲೆ ಏನು? ನಮಗೆ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸದೆ ಶಾಸಕರು ತಕ್ಷಣವೇ ನಮ್ಮ ಈ ಸೇತುವೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ಆದಷ್ಟುಬೇಗ ನಮಗೆ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ 10ಕ್ಕೂ ಗ್ರಾಮಸ್ಥರು ಬಸವೇಶ್ವರ ವೃತ್ತದಲ್ಲಿ ಶಾಸಕರು ಹಾಗೂ ಸಂಸದರ ವಿರುದ್ಧ ಉಗ್ರ ರೀತಿಯ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ