Breaking News

ದ್ವಿತೀಯ ಪಿಯು ಪೂರಕ ಪರೀಕ್ಷೆ ದಿನಾಂಕ ಬದಲಾವಣೆ : ಹೀಗಿದೆ ಬದಲಾದ ಪರೀಕ್ಷಾ ದಿನಾಂಕಗಳು

Spread the love

ಬೆಂಗಳೂರು : ದ್ವಿತೀಯ ಪಿಯುಸಿಯ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ನಂತ್ರ, ಆಗಸ್ಟ್ 10ರಂದು ಪೂರಕ ಪರೀಕ್ಷೆಯ ದಿನಾಂಕವನ್ನು ಕೂಡ ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿತ್ತು. ಅದರಂತೆ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 18ರವರೆಗೆ ಪೂರಕ ಪರೀಕ್ಷೆಯ ವಿಷಯವಾರು ವೇಳಾ ಪಟ್ಟಿಯನ್ನು ಕೂಡ ಪ್ರಕಟಿಸಿತ್ತು. ಇಂತಹ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಿದೆ.

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕಿ ಕನಗವಲ್ಲಿ ಮಾಹಿತಿ ನೀಡಿದ್ದು, ಸೆಪ್ಟೆಂದ್ವಿತೀಯ ಪಿಯು ಪೂರಕ ಪರೀಕ್ಷೆ ದಿನಾಂಕ ಬದಲಾವಣೆ : ಹೀಗಿದೆ ಬದಲಾದ ಪರೀಕ್ಷಾ ದಿನಾಂಕಗಳು
ಬರ್ 7ರಿಂದ ಸೆಪ್ಟೆಂಬರ್ 19ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ಈ ಮೊದಲು ನಿಗದಿಯಾಗಿದ್ದಂತೆ ವೇಳಾಪಟ್ಟಿಯಲ್ಲಿ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.

ಹೀಗಿದೆ.. ಪರಿಷ್ಕೃತ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

ಸೆಪ್ಟಂಬರ್ 7 ರಂದು ಬೆಳಿಗ್ಗೆ: ಉರ್ದು, ಸಂಸ್ಕೃತ, (ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್ ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್ ಹಾಗೂ ಗೃಹಚವಿಜ್ಞಾನ)
ಸೆಪ್ಟೆಂಬರ್ 8 ರಂದು ಬೆಳಗ್ಗೆ: ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
ಸೆಪ್ಟೆಂಬರ್ 9 ರಂದು ಬೆಳಗ್ಗೆ: ಹಿಂದಿ ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್)
ಸೆಪ್ಟೆಂಬರ್ 10 ರಂದು ಬೆಳಗ್ಗೆ: ಇಂಗ್ಲಿಷ್
ಸೆಪ್ಟಂಬರ್ 11 ರಂದು ಬೆಳಗ್ಗೆ: ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ, (ಮಧ್ಯಾಹ್ನ: ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ)
ಸೆಪ್ಟಂಬರ್ 12 ರಂದು ಬೆಳಗ್ಗೆ: ಅರ್ಥಶಾಸ್ತ್ರ, ಭೌತಶಾಸ್ತ್ರ
ಸೆಪ್ಟಂಬರ್ 13 ರಂದು ಭಾನುವಾರ ರಜಾದಿನ
ಸೆಪ್ಟಂಬರ್ 14 ರಂದು ಬೆಳಗ್ಗೆ: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ
ಸೆಪ್ಟಂಬರ್ 15 ರಂದು ಬೆಳಗ್ಗೆ: ಕನ್ನಡ
ಸೆಪ್ಟೆಂಬರ್ 16 ರಂದು ಬೆಳಗ್ಗೆ: ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಸೆಪ್ಟೆಂಬರ್ 17 ಗುರುವಾರ ಮಹಾಲಯ ಅಮಾವಾಸೆ
ಸೆಪ್ಟೆಂಬರ್ 18 ರಂದು ಬೆಳಗ್ಗೆ: ಸಮಾಜಶಾಸ್ತ್ರ, ಲೆಕ್ಕಶಾಸತ್ರ, ಗಣಿತ
ಸೆಪ್ಟಂಬರ್ 19 ರಂದು ಬೆಳಗ್ಗೆ: ಭೂಗೋಳಶಾಸ್ತ್ರ, (ಮಧ್ಯಾಹ್ನ: ಮನಃಶಾಸ್ತ್ರ)


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ