ವಿಜಯಪುರ: ಲಾಕ್‍ಡೌನ್ ನಿಂದಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಸೈಕಲ್ ಗಳ ಮೇಲೆಯೇ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ 41 ಕಾರ್ಮಿಕರು ನಾಲ್ಕು ದಿನಗಳ ಹಿಂದೆಯೇ ಪ್ರಯಾಣ ಬೆಳೆಸಿದ್ದಾರೆ. ಬುಧವಾರ ರಾತ್ರಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ತಲುಪಿದ್ದಾರೆ. ನಾಲ್ಕು ದಿನಗಳಿಂದ ಸೈಕಲ್ ಮೇಲೆ ಬಂದಿದ್ದರಿಂದ ಹೆದ್ದಾರಿಯ ಪಕ್ಕದಲ್ಲಿಯೇ ವಿಶ್ರಾಂತಿ ಪಡೆದುಕೊಂಡಿದ್ದರು.

ಕಾರ್ಮಿಕರನ್ನು ಗಮನಿಸಿದ ಸ್ಥಳೀಯರು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಮಾಡಲು ಕೆಲಸವಿಲ್ಲ. ಊರಿಗೆ ತೆರಳಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಹಾಗಾಗಿ ಸೈಕಲ್ ಮೇಲೆಯೇ ಊರಿಗೆ ತೆರಳಲು ನಿರ್ಧರಿಸಿದೆವು ಎಂದು ಕಾರ್ಮಿಕರು ಹೇಳುತ್ತಿದ್ದಾರೆ. 41 ಕಾರ್ಮಿಕರು ತಾವು ಉತ್ತರ ಪ್ರದೇಶದ ಹರಿದೋಹಿ ಜಿಲ್ಲೆಯದವರು ಎಂದು ಹೇಳಿಕೊಂಡಿದ್ದಾರೆ.
Laxmi News 24×7