ಬೆಂಗಳೂರು, ಮೇ 14- ಜಿಮ್, ಫಿಟ್‍ನೆಸ್ ಕೇಂದ್ರಗಳನ್ನು ಮುಂದಿನ ವಾರದಿಂದ ತೆರೆಯಲು ರಾಜ್ಯ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ , ಮುಚ್ಚಿದ್ದ ದೇವಾಲಯಗಳು ಕೂಡಾ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ.
ಒಂದು ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ದೇವಾಸ್ಥನಗಳು ತೆರೆದರೆ, ಅಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಭಕ್ತರು ಪಾಲಿಸಬೇಕಾಗುತ್ತದೆ. ಅದೆನೆಂದರೆ ಯಾವುದೇ ದೇವಾಲಯಗಳು ಭಕ್ತರಿಗೆ ಪ್ರಸಾದ, ತೀರ್ಥ ಕೊಡುವುದು ನಿಷಿದ್ಧ.
ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ಬರುವವರಿಗೆ ಕಟಕಟೆಗಳನ್ನು ಹಾಕಲಾಗುತ್ತದೆ. ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕೂಡಾ ಈ ಹಿಂದಿನಂತೆ ಹೂವು , ಹಣ್ಣು ತರುವುಂತಿಲ್ಲ. ಕೊರೊನಾ ವಿರುದ್ಧ ಸಮರದ ಅಂಗವಾಗಿ ಮಾ.25ರಿಂದ ಹೇರಲಾದ ಲಾಕ್‍ಡೌನ್ ಕಾರಣ ದೇಶಾದ್ಯಂತ ಎಲ್ಲ ದೇಗುಲಗಳನ್ನು ಸಹ ಬಂದ್ ಮಾಡಲಾಗಿತ್ತು.
ದೇವಾಲಯಗಳು ಬಂದ್ ಆದ ಕಾರಣ ಅರ್ಚಕ ವೃತ್ತಿ ಮಾತ್ರವಲ್ಲದೇ ಇತರ ಹಲವಾರು ಉಪ ವೃತ್ತಿಗಳ ಅಸಂಖ್ಯ ಜನರ ದಿನದ ಬದುಕಿಗೆ ತೀವ್ರ ತೊಂದರೆ ಉಂಟಾಗಿದೆ.ಹೀಗಾಗಿ ಕಳೆದ ವಾರ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜÁರಿಯವರನ್ನು ಭೇಟಿಯಾಗಿದ್ದ ಅರ್ಚಕರ ನಿಯೋಗ ದೇವಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ದೇವಾಲಯಗಳು ಮುಚ್ಚಿರುವ ಕಾರಣ ಆದಾಯವಿಲ್ಲದೆ, ಅರ್ಚಕರ ಪರಿಸ್ಥಿತಿ ಇತರರಗಿಂತಲೂ ಶೋಚನೀಯವಾಗಿದೆ ಎಂದು ಆಳಲು ತೊಡಿಕೊಂಡಿದ್ದಾರೆ.
ಇದಲ್ಲವೆನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆಲವು ದೇವಸ್ಥಾನಗಳನ್ನು ಮುಂದಿನ ವಾರದಿಂದ ಆರಂಭಿಸುವತ್ತ ಚಿತ್ತ ಹರಿಸಿದೆ.
ಒಂದು ವೇಳೆ ಸರ್ಕಾರ ಅವಕಾಶ ನೀಡಿದರೇ ದೇವಸ್ಥಾನಗಳಲ್ಲಿ ಅನುಸರಿಸಬೇಕಾದ ಮುಂಜÁಗ್ರತಾ ಕ್ರಮಗಳನ್ನು ಈಗಾಗಲೇ ಇಲಾಖೇ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮುಖ್ಯವಾಗಿ ತೀರ್ಥ, ಪ್ರಸಾದಗಳ ವಿತರಣೆಗೆ ಬ್ರೇಕ್ ಬೀಳಲಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮುಂದಿನ ವಾರದಿಂದ ದೇವಾಲಯದ ಬಾಗಿಲು ತೆರೆಯಲು ತಿರುಪತಿ ತಿರುಮಲ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ದರೂ ನಿತ್ಯ ದೇವರ ಪೂಜಾ ವಿಧಿ ನೆರವೇರಿಸಲು ಅರ್ಚಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಮೂರನೇ ಹಂತದ ಲಾಕ್‍ಡೌನ್ ಆರಂಭದ ಸಂದರ್ಭದಲ್ಲಿ ಹಲವಾರು ವಾಣಿಜ್ಯ ಮತ್ತು ಇತರ ವೃತ್ತಿಗಳ ಪುನಾರಂಭಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಆದರೆ ದೇವಾಲಯಗಳಿಗೆ ಯಾವುದೇ ವಿನಾಯಿತಿ ನೀಡಿರಲಿಲ್ಲ.
ಇದೇ ವೇಳೆ ಅರ್ಚಕರು ಮತ್ತು ದೇವಾಲಯಗಳಿಗೆ ಸಂಬಂಧಿಸಿದ ಇತರ ಉಪ ಕಸುಬುಗಳಲ್ಲಿ ತೊಡಗಿರುವವರ ಜೀವನೋಪಾಯಕ್ಕೆಂದು ವಿಶೇಷ ಧನ ಸಹಾಯ ನೀಡವಂತೆ ಸರಕಾರಕ್ಕೆ ಮೊರೆ ಇಡಲಾಗಿತ್ತು.
ಈ ಮಧ್ಯೆ ಮೂರನೇ ಹಂತದ ಲಾಕ್‍ಡೌನ್ ಇದೇ 17ಕ್ಕೆ ಕೊನೆಗೊಳ್ಳಲಿದ್ದು, ಒಂದು ವೇಳೆ ವಿಸ್ತರಣೆಯಾದರೂ ಬಹುತೇಕ ಎಲ್ಲ ಸಾರ್ವಜನಿಕ ಚಟುವಟಿಕೆಗಳಿಗೆ ರಿಯಾಯಿತಿ ನೀಡುವ ಸಾಧ್ಯತೆ ಇದ್ದು ದೇವಾಲಯಗಳೂ ತೆರೆಯಲಿವೆ.