Breaking News

ಕೆಎಸ್ಆರ್‌ಟಿಸಿ ನೌಕರರ ವರ್ಗಾವಣೆಗೆ ಆನ್‍ಲೈನ್ ವ್ಯವಸ್ಥೆ…………….

Spread the love

ಬೆಂಗಳೂರು, ಜೂ.7- ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸೋದರ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಆನ್‍ಲೈನ್ ವರ್ಗಾವಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸಂಚಾರ ಮತ್ತು ತಾಂತ್ರಿಕ ಇಲಾಖೆಯ ಅಂತರ ವಿಭಾಗ, ವಿಭಾಗ ಮಟ್ಟದ ದರ್ಜೆ-3, ಮೇಲ್ವಿಚಾರಕೇತರ ನೌಕರರ ವರ್ಗಾವಣೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನೌಕರರ ವರ್ಗಾವಣೆಯನ್ನು ಖಾಲಿ ಸ್ಥಾನಗಳ ಲಭ್ಯತೆ ಹಾಗೂ ನಿಗಮದ ಆವಶ್ಯಕತೆಗೆ ಅನುಗುಣವಾಗಿ ಸರಳಗೊಳಿಸುವ ಉದ್ದೇಶದಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೌಕರರ ವರ್ಗಾವಣೆ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ

ಖಾಯಂ ಸಿಬ್ಬಂದಿಯು ಪರೀಕ್ಷಾರ್ಥ ದಿನಾಂಕ ದಿಂದ ಕಾರ್ಯಸ್ಥಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಶಿಸ್ತು ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದ್ದರೆ ವರ್ಗಾವಣೆಗೆ ಅವಕಾಶವಿಲ್ಲ. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ನೌಕರರು ವರ್ಗಾವಣೆಗೆ ಅರ್ಹರಾಗಿರುವುದಿಲ್ಲ.

ತೀವ್ರತರದ ಆರೋಗ್ಯ ಪ್ರಕರಣ ಗಳಲ್ಲಿ, 10 ವರ್ಷ ವಯಸ್ಸು ಮೀರದಿರುವ ಅಪ್ರಾಪ್ತ ಮಕ್ಕಳನ್ನು ಹೊಂದಿರುವ ವಿಧವೆ ಹಾಗೂ ವಿಧುರ, ಶೇ.40ಕ್ಕೂ ಹೆಚ್ಚು ವಿಕಲಚೇತನತೆ ಹೊಂದಿರುವ ಹಾಗೂ ಪತಿ-ಪತ್ನಿ ಇಬ್ಬರೂ ಉದ್ಯೋಗಿಯಾಗಿರುವ ಪ್ರಕರಣದ ಆಧಾರದ ಮೇಲೆ ವರ್ಗಾವಣೆಯಿಂದ ವಿನಾಯಿತಿ ಪಡೆಯಬಹುದು.

ಕಡ್ಡಾಯವಾಗಿ ಡಿಡಿಡಿ.ho್ಟಠ್ಚಿ.ಟ್ಟಜ/ಟಞo ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಗಳಿಗೆ ಅವಕಾಶವಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ