ಮುಂಬೈ, ಜೂ.11- ಬಾಲಿವುಡ್‍ನ ಬಿಗ್ ಬಿ ವಾಯ್ಸ್ ಅವರ ಹೆಸರಿನಷ್ಟೇ ಜನಪ್ರಿಯವಾಗಿದ್ದು ಈಗ ಅವರ ಧ್ವನಿಯನ್ನು ಗೂಗಲ್ ಮ್ಯಾಪ್‍ನಲ್ಲಿ ಅಳವಡಿಸಿಕೊಳ್ಳಲು ಒಪ್ಪಂದಕ್ಕೆ ಮುಂದಾಗಿದೆ.
ದೀವಾರ್, ಶೋಲೆ, ಅಮರ್ ಅಕ್ಬರ್ ಅಂಟೋನಿ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಬಿಗ್‍ಟೌನ್ ನಂಬರ್1 ನಟನಾಗಿ ಗುರುತಿಸಿಕೊಂಡಿರುವ ಅಮಿತಾಭ್‍ಬಚ್ಚನ್ ಅವರ ಧ್ವನಿಯು ಅವರ ಜನಪ್ರಿಯತೆಗೆ ಸಾಥ್ ನೀಡಿದ್ದಾರೆ.
ನಟನೆ ಮಾತ್ರವಲ್ಲದೆ ಹಲವು ಸರ್ಕಾರಿ ಹಾಗೂ ಖಾಸಗಿ ಜಾಹೀರಾತಿನಲ್ಲೂ ಗುರುತಿಸಿಕೊಂಡಿರುವ ಅಮಿತಾಭ್‍ಬಚ್ಚನ್‍ರ ಧ್ವನಿಯಿಂದಲೇ ತಮ್ಮ ಕಂಪೆನಿಯ ಬ್ರಾಂಡ್ ಹೆಚ್ಚಿಸಿಕೊಂಡಿದ್ದಾರೆ. ಫೇಸ್‍ಬುಕ್, ಗೂಗಲ್‍ನಲ್ಲೂ ಬಿಗ್‍ಬಿ ಸಾಕಷ್ಟು ಫಾಲೋಯರ್‍ಗಳಿದ್ದಾರೆ. ಇದರ ಲಾಭವನ್ನು ಪಡೆಯಲು ಗೂಗಲ್ ಮುಂದಾಗಿದೆ.
ಗೂಗಲ್ ಮ್ಯಾಪ್‍ನಲ್ಲಿ ಅಮಿತಾಭ್ ಬಚ್ಚನ್ ಧ್ವನಿ ಬಳಸಿಕೊಳ್ಳಲು ಭಾರೀ ಸಂಭಾವನೆಯನ್ನೇ ಕೊಡಲು ಗೂಗಲ್ ಸಂಸ್ಥೆ ಮುಂದಾಗಿರುವುದರಿಂದ ಇನ್ನೂ ಮುಂದೆ ಗೂಗಲ್ ಮ್ಯಾಪ್‍ನಲ್ಲಿ ಬಿಗ್‍ಬಿ ಧ್ವನಿ ಕೇಳಿಬರಲಿದೆ.
ಗೂಗಲ್ ಯಶ್ ರಾಜ್ ಫಿಲ್ಮ್ ಪ್ರೊಡಕ್ಷನ್ಸ್‍ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇವರ ನಿರ್ಮಾಣದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಫಿರಂಗಿ ಪಾತ್ರಕ್ಕೆ ಅಮಿತಾಬ್ ನೀಡಿರುವ ಧ್ವನಿಯನ್ನು ಕೇಳಿ ಗೂಗಲ್ ಸಂಸ್ಥೆಯು ಇವರನ್ನು ಸಂಪರ್ಕಿಸಿದೆ.ಭಾರತೀಯರಿಗೆ ಸಾಕಷ್ಟು ಹತ್ತಿರವಾಗಲು ನಾನಾ ಯೋಜನೆಗಳನ್ನು ರೂಪಿಸಿರುವ ಗೂಗಲ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಗೂಗಲ್ ಮ್ಯಾಪ್‍ಗೆ ಅಮಿತಾಬ್‍ಬಚ್ಚನ್‍ರ ಧ್ವನಿಯನ್ನು ಅಳವಡಿಸಿಕೊಳ್ಳುವ ಮೂಲಕ ಬಿಗ್‍ಬಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.
https://youtu.be/r6bH1CgI-Qg