ಬೆಳಗಾವಿ: ಹಸಿದ ಹೊಟ್ಟೆಗಳನ್ನುತುಂಬಿಸುವ ಸೇವೆಯಲ್ಲಿ ತೊಡಗುವದುಅತ್ಯಂತ ಶ್ರೇಷ್ಟವಾದ ಕಾಯಕವಾಗಿದೆ.
ಹಸಿವನ್ನು ನೀಗಿಸುವದು ಶಿವನಿಗೆ ಅರ್ಪಿಸಿದ ನೈವೇದ್ಯವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರುಗಳಾದ
ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ನಿನ್ನೆ ನಿಡಸೋಸಿ ಮಠದ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿಯು ಆಯೋಜಿಸಿದ್ದ ಹತ್ತು ಹಳ್ಳಿಗಳ 25 ಜಾನಪದ ಕಲಾವಿದರಿಗೆ ಧಾನ್ಯದ ಕಿಟ್ ಗಳನ್ನು ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ
ಮಾತನಾಡುತ್ತಿದ್ದರು.ಕಳೆದ ಎರಡು ತಿಂಗಳಿಂದ ಕರೋನಾ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಧಾನ್ಯ ವಿತರಿಸುವ ಅಭಿಯಾನವನ್ನು ಮುಂದುವರೆಸಿಕೊಂಡು ಬಂದಿರುವದು ಅತ್ಯಂತ ಉದಾತ್ತ ಕಾಯಕವಾದಿದ್ದು ಹಸಿವನ್ನು ನೀಗಿಸುವ ಈ ಸೇವೆ ದೇವರು ಮೆಚ್ಚುವಂಥದ್ದು.ಹಸಿದವರತ್ತ ನಮ್ಮಚಿತ್ತ ಅಭಿಯಾನ ಹಮ್ಮಿಕೊಂಡಿರುವ ಕನ್ನಡ ಕ್ರಿಯಾ ಸಮಿತಿಯು ಪ್ರಶಂಶನಿಯವಾಗಿದೆ
ಎಂದು ಮಹಾಸ್ವಾಮೀಜಿ ಹೇಳಿದರು.
ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಪ್ರಕಾಶ ದೇಶಪಾಂಡೆ ಅವರು ಮಾತನಾಡಿ,ಸಣ್ಣಾಟ,ಬಯಲಾಟ,ಪಾರಿಜಾತ,ಸಂಬಾಳದ ವಾದ್ಯ,ವೀರಗಾಸೆ ಕಲಾವಿದರನ್ನು ಗುರುತಿಸಿ ಅವರಿಗೆ ಸದ್ಯದ ಸಂಕಷ್ಟದ ಕಾಲದಲ್ಲಿ ಆಹಾರ ಧಾನ್ಯ ಪೂರೈಸಿದ ಕ್ರಿಯಾ ಸಮಿತಿಯ ಕಾರ್ಯ ಶ್ಲಾಘನಿಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಅವರು,ಮಾನವೀಯತೆ ಮತ್ತು
ಮನುಷ್ಯತ್ವದ ದೃಷ್ಟಿಯಿಂದ ಮಾತ್ರ ಈ ಅಭಿಯಾನ ನಡೆದಿದ್ದು ಉಪಕಾರ ಅಥವಾ ಮಹಾದಾನ ಮಾಡಿದ ಮನೋಭಾವ ತಮಗಿಲ್ಲವೆಂದು ಹೇಳಿದರು.
ಹಿರಿಯ ಸಾಹಿತಿ ಶ್ರೀ ಎಲ್.ವ್ಹಿ.ಪಾಟೀಲ ಅವರು ವೇದಿಕೆಯಲ್ಲಿದ್ದರು.
ಸಂಕೇಶ್ವರ ಸುತ್ತಮುತ್ತಲಿನ ಜಾನಪದ,ಸಣ್ಣಾಟ,ಬಯಲಾಟ,ವೀರಗಾಸೆ,ಸಂಬಾಳದ ವಾದ್ಯ,ಪಾರಿಜಾತದ 25 ಕಲಾವಿದರಿಗೆ ಆಹಾರ ಧಾನ್ಯ ವಿತರಿಸಲಾಯಿತು.
ಖ್ಯಾತ ಸಂಗೀತ ಕಲಾವಿದ ಶ್ರೀ ಸುರೇಶ ಚಂದರಗಿ ಸ್ವಾಗತಿಸಿದರು.ಕು.ಅಭಿಷೇಕ ಚಂದರಗಿ ಕರೋನಾ ಜಾಗೃತಿ ಗೀತೆ ಹಾಡಿದರು.ಸುಜಾತಾ ಮಗದುಮ್ ಅವರಿಂದ ಪ್ರಾರ್ಥನೆ.ಶ್ರೀ ಅಕ್ಬರ್ ಸನದಿ ಅವರು ಕಾರ್ಯಕ್ರಮ ನಿರೂಪಿಸಿದರು.