ಚಿಕ್ಕಬಳ್ಳಾಪುರ: ಕೊರೊನಾ ವೈಸರ್ ಭೀತಿಯಿಂದಾಗಿ ಹಲವಾರು ಕಾರ್ಯಕ್ರಮಗಳೇ ರದ್ದಾಗುತ್ತಿದ್ದು, ಈ ಮಧ್ಯೆ ಜಿಲ್ಲೆಯಲ್ಲಿ ನಡೆಯಲು ಸಜ್ಜಾಗಿದ್ದ ಅದ್ದೂರಿ ಮದುವೆಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಿಗದಿಯಾಗಿದ್ದ ಅದ್ದೂರಿ ಸಂಭ್ರಮದ ಮದುವೆಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಗುಡಿಬಂಡೆ ಮೂಲದ ಯುವತಿ ಹಾಗೂ ಶಿಡ್ಲಘಟ್ಟ ಮೂಲದ ಯುವಕನ ವಿವಾಹ ಇಂದು ನೆರವೇರ ಬೇಕಿತ್ತು.
ಆರತಕ್ಷತೆಗೆ ಅಂತ ಎಲ್ಲರೂ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು. ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ಆಡುಗೆ ತಯಾರಿ, ಪ್ಲವರ್ ಡೆಕೋರೇಷನ್ ಎಲ್ಲವೂ ಅಣಿಯಾಗುತ್ತಿತ್ತು. ಆದರೆ ಕಲ್ಯಾಣಮಂಟಪಕ್ಕೆ ಎಂಟ್ರಿ ಕೊಟ್ಟ ಅಧಿಕಾರಿಗಳು ಕೊರೊನಾ ವೈರಸ್ ಹರಡದಂತೆ ಹೆಚ್ಚಿನ ಜನಸಂದಣಿ ಸೇರದೆ 100ರಿಂದ 150 ಜನ ಮಾತ್ರ ಮದುವೆಗೆ ಸೇರಬೇಕು. ಆದರೆ ನೀವು ಹೆಚ್ಚಿನ ಜನ ಸೇರುತ್ತಿದ್ದು ಜನ ಸೇರದಂತೆ ಅಧಿಕಾರಿಗಳು ಸೂಚಿಸಿ ಮದುವೆಗೆ ಬಂದಿದ್ದವರನ್ನ ಹೊರಕಳುಹಿಸಿದ್ದಾರೆ.
ಇದರಿಂದ ಇಂದು ನಡೆಯಬೇಕಿದ್ದ ಅದ್ದೂರಿ ಮದುವೆಗೆ ಬ್ರೇಕ್ ಬಿದ್ದಿದ್ದು, ಕುಟುಂಬಸ್ಥರು ಕೊನೆಗೆ ದೇವಾಲಯವೊಂದರಲ್ಲಿ ಬೆರಳಣಿಕೆಯಷ್ಟು ಬಂಧು ಬಳಗದವರ ಸಮ್ಮುಖದಲ್ಲಿ ಸರಳವಿವಾಹ ಮಾಡಿದ್ದಾರೆ.