ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಡೂಪ್ ಆಗಿ ಅಭಿನಯಿಸುತ್ತಿದ್ದ ಸಾಗರ್ ಪಾಂಡೆ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನವಾಗಿ ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ. ಸಾಗರ್ ಪಾಂಡೆ ನಿಧನಕ್ಕೆ ಸಿನರಂಗ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಸಾಗರ್ ಪಾಂಡೆ ಭಜರಂಗಿ ಭಾಯಿಜಾನ್ ಸಿನಿಮಾ ಸೇರಿದಂತೆ ಸುಮಾರು 50 ಸಿನಿಮಾಗಳಲ್ಲಿ ಡೂಪ್ ಆಗಿದ್ದರು. ಕಬೀರ್ ಖಾನ್ ನಿರ್ದೇಶನದ 2015ರ ಭಜರಂಗಿ ಭಾಯಿಜಾನ್ ಸೆಟ್‌ನ ಥ್ರೋಬ್ಯಾಕ್ ಚಿತ್ರವನ್ನು ಸಲ್ಮಾನ್ ಹಂಚಿಕೊಂಡು ರೆಸ್ಟ್ ಇನ್ ಪೀಸ್ ಎಂದು ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಸಾಗರ್ ಪಾಂಡೆ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಸಾಗರ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಮುಂಬೈನ ಜೋಗೇಶ್ವರಿ ಪೂರ್ವದಲ್ಲಿರುವ ಹಿಂದೂ ಹೃದಯ್ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
Laxmi News 24×7