Breaking News

ಲೋಕಮಾನ್ಯ ಸೊಸೈಟಿ ಭ್ರಷ್ಟಾಚಾರದ ವಿರುದ್ಧ ಇಡಿ, ಸಿಬಿಐ ತನಿಖೆ ಆಗಬೇಕು: ಅಭಯ್ ಪಾಟೀಲ್

Spread the love

ಲೋಕಮಾನ್ಯ ಸೊಸೈಟಿ ಮೂರು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಇದ್ದ ಕೆಲವೊಂದು ದಾಖಲೆಗಳನ್ನು ವಿಧಾನಸಭೆಯಲ್ಲಿ ಸರ್ಕಾರಕ್ಕೆ ಕೊಟ್ಟಿದ್ದೇನೆ. ಈ ಕೇಸ್‍ನ್ನು ಸಿಬಿಐ, ಇಡಿ ತನಿಖೆ ಆಗಬೇಕು ಎಂದು ವಿಧಾನಸಭೆಯಲ್ಲಿ ಗಮನವನ್ನೂ ಸೆಳೆದಿದ್ದೇನೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಭಯ್ ಪಾಟೀಲ್ ಲೋಕಮಾನ್ಯ ಸೊಸೈಟಿಯಲ್ಲಿ ಯಾವುದೇ ರೀತಿ ಭದ್ರತೆ ಇಲ್ಲದೇ ಕೋಟ್ಯಾಂತರ ಹಣ ಕೊಟ್ಟಿದ್ದಾರೆ. ಬೇನಾಮಿ ಹೆಸರಿನಲ್ಲಿ ಹಣ ಡಿಫಾಸಿಟ್ ಇಟ್ಟಿದ್ದಾರೆ. ಈ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ. ಮುಂದಿನ ತಿಂಗಳು ಇನ್ನು ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಎಂದರು.

ಶಿವಸೃಷ್ಟಿ ಉದ್ಘಾಟನೆಗೆ ವಿಳಂಬ ವಿಚಾರಕ್ಕೆ ಇನ್ನು ಲೈಟ್ ಆಂಡ್ ಸೌಂಡ್ ಕೆಲಸವಿದೆ, ಹೊಸದಾಗಿ ವಾಕಮನ್ ತೆಗೆದುಕೊಂಡಿದ್ದೇವೆ. ಅದು ಕೊನೆ ಹಂತದಲ್ಲಿ ಬಂದಿದೆ.

ಮೊದಲು ಮಳೆಗಾಲದಲ್ಲಿ ನೋಡಲು ಆಗುತ್ತಿರಲಿಲ್ಲ. ಈಗ ಸೀಟ್‍ನ್ನು ಹಾಕುತ್ತಿದ್ದೇವೆ. ಅದು ಕೆಲಸ ಮುಗಿಯುತ್ತಿದೆ. ಬಾಕಿ ಇರುವ 2 ಪರ್ಸೆಂಟ್ ಕೆಲಸವನ್ನು ಪೂರ್ಣಗೊಳಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಥವಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕೈಯಿಂದ ಡಿಸೆಂಬರ್ ಒಳಗೆ ಶಿವಸೃಷ್ಟಿಯನ್ನು ಉದ್ಘಾಟನೆ ಮಾಡಿಸುತ್ತೇವೆ ಎಂದು ಅಭಯ್ ಪಾಟೀಲ್ ಭರವಸೆ ನೀಡಿದರು.


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ