Breaking News

ಬೆಳಗಾವಿಯಲ್ಲಿ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ 2022 ಆಯೋಜನೆ

Spread the love

ಬೆಳಗಾವಿಯಲ್ಲಿ ನಗರ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ 2022ನ್ನು ಆಯೋಜಿಸಲಾಗಿತ್ತು.
ಹೌದು ಇಂದು ಬುಧವರಾ ಬೆಳಗಾವಿ ನಗರದ ಜೀರಗೆ ಸಭಾ ಭವನದಲ್ಲಿ ಬೆಳಗಾವಿ ನಗರಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಲ್ಲ ಸುರಕ್ಷತೆ ಅರಿವು ಕಾರ್ಯಕ್ರಮ 2022ನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ. ಎಂ.ಬಿ ಬೋರಲಿಂಗಯ್ಯ, ಡಿಡಿಪಿಐ ಬಸವರಾಜ್ ನಲವತ್‌ವಾಡ್, ಆರ್‌ಟಿಓ ಶಿವಾನಂದ ಮಗದುಮ್, ಪಾಲಿಕೆ ಆಯುಕ್ತರಾದ ಡಾ. ರುದ್ರೇಶ್ ಘಾಳಿ, ಡಿಸಿಪಿ ಪಿವಿ ಸ್ನೇಹಾ, ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ಶಿವಾನಂದ ಮಾಸ್ತಿಹೊಳಿ, ಕಂಟೋನ್‌ಮೆAಟ್ ಬೋರ್ಡ್ನ ಅಧಿಕಾರಿಗಳು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ವೇಳ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಟಿಓ ಶಿವಾನಂದ ಮಗದುಮ್‌ರವರು, ಇಂದು ಮನೆಯ ಪಕ್ಕದಲ್ಲಿ ತಿರುಗಾಡಬೇಕಾದರೂ ವಿಚಾರ ಮಾಡಬೇಕಾದ ಪ್ರಸಂಗ ಬಂದೊದಗಿದೆ. ಈ ಹಿನ್ನೆಲೆ ಪಾಲಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕುರಿತಂತೆ ಚಿಂತನೆ ಮಾಡಬೇಕಾಗಿದೆ. ಮನೆಯಿಂದಲೇ ಶಿಕ್ಷಣ ಪ್ರಾರಂಭವಾಗಬೇಕು.

ರಸ್ತೆಯ ಮೇಲಾಗುವ ತೊಂದರೆಗಳನ್ನು ಕುರಿತಂತೆ ಎಲ್ಲರಿಗೂ ಅರಿವಿದೆ. ಒಬ್ಬರನ್ನೊಬ್ಬರು ದೂರದೇ ಎಲ್ಲರೂ ಅವರವರ ಜವಾಬ್ದಾರಿಗಳನ್ನು ಅರಿತುಕೊಂಡು ನಡೆಯಬೇಕು. ಇದರಿಂದ ಉತ್ತಮ ಆಡಳಿತ ಉತ್ತಮವಾಗುತ್ತದೆ ಎಂದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ