ಯಾವುದೇ ದೇಶದ ಏಳಿಗೆ ಆ ದೇಶದ ಮಹಿಳೆಯರ ಪ್ರಗತಿಯನ್ನು ಅವಲಂಬಿಸಿದೆ. ಹೀಗಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆಯರು ಮತ್ತಷ್ಟು ಸಾಧನೆ ಮಾಡಬೇಕಿದೆ” ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಅಭಿಪ್ರಾಯ ಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳಗಾವಿ ವಲಯದ ಕಾಕತಿ, ಗೌಂಡವಾಡ, ಮುತ್ಯಾನ ಹಟ್ಟಿ ಗ್ರಾಮದ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗೌಡವಾಡದ ಮೋನಿಕ ಸಮುದಾಯ ಭವನದಲ್ಲಿ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ, ಧಾರ್ಮಿಕ ಸಭಾ ಹಾಗೂ ಒಕ್ಕೂಟಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದ ಮಹಿಳೆಯರು ಇμÉ್ಟೂಂದು ಸಂಖ್ಯೆಯಲ್ಲಿ ಸೇರಿರುವುದು ಸಂತಸದ ಸಂಗತಿ.
ಜಾತಿ ಮತ ಪಂಥಗಳ ಭೇದವಿಲ್ಲದೆ ಜಾತ್ಯತೀತವಾಗಿ ರಾಜಕೀಯೇತರವಾಗಿ ಧರ್ಮಸ್ಥಳ ಸಂಸ್ಥೆಯು ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಿದ್ದು ಅನುಕರಣೀಯ. ಅದು ನಮಗೆಲ್ಲ ಮಾದರಿಯಾಗಲಿ” ಎಂದರು.