ಬೆಳಗಾವಿ: ಪಶ್ಚಿಮಘಟ್ಟ ಮತ್ತು ಬೆಳಗಾವಿ ಜಿಲ್ಲಾದ್ಯಂತ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ 2 ತಿಂಗಳ ಹಸುಗೂಸು ಮತ್ತು ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೀಮರಾಯ ಪಾಟೀಲ್ (44) ಎಂಬವರಿಗೆ ಸೇರಿದ ಮನೆಯ ಗೋಡೆ ಇಂದು ಬೆಳಗಿನ ಜಾವ ನೆಲಸಮವಾಗಿದೆ. ಮನೆಯ ಹೊರ ಭಾಗದ ಗೋಡೆ ಕುಸಿತವಾಗುವುದನ್ನ ಗಮನಿಸಿದ ಭೀಮರಾವ್, ಕೂಡಲೇ ಮಗು ಮತ್ತು ತಾಯಿಯನ್ನ ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಅವರು ಹೊರಬಂದ ಕೆಲವೇ ಹೊತ್ತಿನಲ್ಲಿ ಗೋಡೆ ಕುಸಿದಿದೆ.
Laxmi News 24×7