Breaking News

ಬೃಹತ್ ಮರ ಧರೆಗುರುಳಿದ ಬೆಳಗಾವಿಯಲ್ಲಿ ನೂರಾರು ಬೈಕ್‍ಗಳು ಜಖಂ

Spread the love

  ಬೆಳಗಾವಿ :ಬೆಳಗಾವಿಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ನಗರದ ವಿವಿಧ ಕಡೆಗಳಲ್ಲಿ ಮರಗಳು ಧರೆಗುರುಳಿದಿದ್ದರಿಂದ ಸಾಕಷ್ಟು ವಾಹನಗಳು ಜಖಂಗೊಂಡಿವೆ.

ಹೌದು ಬೆಳಗಾವಿ ನಗರದಲ್ಲಿ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಂಗಳವಾರ ಸಾಯಂಕಾಲ ಸುರಿದ ಮಳೆ ಹರ್ಷ ತಂದಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಆರಂಭವಾಯಿತು. ಈ ವೇಳೆ ಮಳೆಗಿಂತ ಗಾಳಿಯ ರಭಸವೇ ಹೆಚ್ಚಾಗಿದ್ದರಿಂದ ಸಿವಿಲ್ ಆಸ್ಪತ್ರೆ ರಸ್ತೆಯಲ್ಲಿರುವ ಬೃಹದಾಕಾರದ ಮರವು ಉರುಳಿ ಬಿದ್ದಿದೆ. ಇನ್ನು ಈ ಮರವು ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದ ಪರಿಣಾಮ ಸುಮಾರು 35ಕ್ಕೂ ಹೆಚ್ಚು ಬೈಕ್‍ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಮಳೆ ಸುರಿಯುತ್ತಿದ್ದರಿಂದ ಜನರು ಯಾರೂ ಕೂಡ ಹೊರಗಡೆ ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇನ್ನು ನಡು ರಸ್ತೆಯಲ್ಲಿಯೇ ಮರದ ಕೆಲ ಟೊಂಗೆಗಳು ಬಿದ್ದಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.


Spread the love

About Laxminews 24x7

Check Also

ಕಣಬುರ್ಗಿಯಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಆಸೀಫ್ ಸೇಠ್ ಅವರು ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿದರು

Spread the love ಕಣಬರ್ಗಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಆಸೀಫ ಸೇಠ್ ಕಣಬುರ್ಗಿಯಲ್ಲಿ ಸರ್ಕಾರಿ ಶಾಲೆಗೆ ಭೇಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ