Breaking News

ದೇಶದ ಗಡಿಯಲ್ಲಿ ಒಳ ನುಗ್ಗಲು ಉಗ್ರರ ಸಂಚು

Spread the love

ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೆಲವೊಂದು ಭಯೋತ್ಪಾದಕ ಸಂಘಟನೆಗಳಿಂದ ಜೀವ ಬೆದರಿಕೆಯ ಕರೆಗಳು ಬಂದಿದ್ದು, ಈ ಹಿನ್ನೆಲೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಬಿಎಸ್​ಎಫ್​ ಹದ್ದಿನ ಕಣ್ಣಿಟ್ಟಿದೆ.ಈ ಕುರಿತು ಮಾಹಿತಿ ನೀಡಿದ ಭದ್ರತಾ ಪಡೆ ಇನ್ಸ್​ಪೆಕ್ಟರ್​​ ಡಿ.ಕೆ ಬೂರಾ, ಕಾಶ್ಮೀರಗಡಿಯಲ್ಲಿ ಈಗಾಗಲೇ ನಿಗಾ ವಹಿಸಲಾಗಿದ್ದು,ಎರಡು ವಾರಗಳ ಕಾಲ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಇತ್ತ ಗಣರಾಜ್ಯೋತ್ಸವ ವೇಳೆ ಜಮ್ಮು-ಕಾಶ್ಮೀರ ಗಡಿಯೊಳಗೆ ನುಗ್ಗಲು 104 ರಿಂದ 135 ಉಗ್ರರು ಸಂಚು ರೂಪಿಸಿದ್ದಾರೆಂದು ಗಡಿ ಭದ್ರತಾ ಪಡೆ ಕಾಶ್ಮೀರ ವಿಭಾಗದ ಇನ್ಸ್​ಪೆಕ್ಟರ್​​ ಜನರಲ್​​ ರಾಜಾ ಬಾಬು ಸಿಂಗ್​​ ತಿಳಿಸಿದ್ದಾರೆ.
2021ರಿಂದಲೂ ಕಣಿವೆ ನಾಡಿನಲ್ಲಿ ಶಾಂತಿ ನೆಲೆಸಿದ್ದು, ಇದೀಗ ಉಗ್ರರು ಗಡಿಯೊಳಗೆ ನುಗ್ಗಲು ಯೋಜನೆ ರೂಪಿಸಿದ್ದಾರೆ. 104 ರಿಂದ 135 ಉಗ್ರರು ಗಡಿಯೊಳಗೆ ನುಸುಳಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ ಎಂದರು.
ಈಗಾಗಲೇ ದೆಹಲಿಯ ಪ್ರಮುಖ ಸ್ಥಳಗಳಲ್ಲೂ ಪೊಲೀಸರು, ಯೋಧರು ಹೆಚ್ಚಿನ ನಿಗಾ ವಹಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ