Breaking News

ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ವಿವಿಧ ಕಟ್ಟಡಗಳ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ

Spread the love

ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ನೂತನ ಅತಿಥಿ ಗೃಹ, ವ್ಯಾಯಾಮ ಶಾಲೆ, ಸೆಂಟನರಿ ಹಾಲ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು.

ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನ ವಂಟಮೂರಿಯ ರಾಜಾ ಲಖಮಗೌಡ ಅವರು ಸ್ಥಾಪಿಸಿದ್ದ 103 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಅವರ ತಂದೆಯ ಹೆಸರಿನ ಅತಿಥಿ ಗೃಹ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೆಸರಿನ ವ್ಯಾಯಾಮ ಶಾಲೆ, ಕೆಎಲ್ಇ ಕಾರ್ಯಾಧ್ಯಕ್ಷರು, ಮಾಜಿ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ ಹೆಸರಿನ  ಸೆಂಟನರಿ ಹಾಲ್ ನ್ನು ಸಿಎಂ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು‌.

ನಂತರ ಮಾತನಾಡಿದ ಮುಖ್ಯಮಂತ್ರಿಗಳು ಒಂದು ವ್ಯಕ್ತಿಗೆ ನೂರು ವರ್ಷ ಆಗುವುದು ಸಾಮಾನ್ಯ ಆದ್ರೆ ಒಂದು ಸಂಸ್ಥೆ ಸ್ಥಾಪನೆಯಾಗಿ ನೂರು ವರ್ಷ ಆಗುವುದು ಬಹಳ‌ ಅಪರಪೂಪ, ಅಂತಹ ಸಂಸ್ಥೆಗೆ ಅದರದೇ ಆದ ಪರಂಪರೆ ಇದೆ. ಒಂದು ನಗರದ ಜನತೆ ಒಂದೆಡೆ ಸೇರಬೇಕು ಎಂಬ ಉದ್ದೇಶದಿಂದ ಬ್ರಿಟಿಷರ ಕಾಲದಿಂದಲೂ ಸೊಶಿಯಲ್ ಕ್ಲಬ್ ಇವೆ. ಸೊಶಿಯಲ್ ಕ್ಲಬ್ ಹೆಸರಲ್ಲಿ ಸಿವಿಲ್ ಸೊಸೈಟಿ ಸ್ಥಾಪಿಸಲು ಇಲ್ಲಿ ಆರೋಗ್ಯಕರ ಚರ್ಚೆಯಾಗುತ್ತಿತ್ತು. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಶಾಲೆ ನಿರ್ಮಾಣ ಮಾಡಿರುವುದು ಒಳ್ಳೆಯದು. ಇದಾದ ಬಳಿಕ 13 ಎಲೆಗಳ ಬಾರ್ ಎತ್ತುವುದು ಕೂಡ ನಡೆಯುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಂದರ್ಭದಲ್ಲಿ ಉತ್ತರ ಶಾಸಕ ಅನಿಲ್ ಬೆನಕೆ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಅಮಿತ್ ಕೋರೆ, ವಿಟಿಯು ಸದಸ್ಯ ಆನಂದ ಹಾವನ್ನವರ,  ಸೊಶಿಯಲ್ ಕ್ಲಬ್ ಅಧ್ಯಕ್ಷ ಮುರುಗೇಶ, ಪ್ರಧಾನ ಕಾರ್ಯದರ್ಶಿ ಅಶೋಕ ಥೋರಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ