Breaking News

ಗಡಿಯಂಚಿನ‌ ಪ್ರಾಥಮಿಕ‌ ಆರೋಗ್ಯ ಕೇಂದ್ರಳೀಗ ಸೋಲಾರ್ ಮಯ

Spread the love

ಬೆಳಗಾವಿ – ಸೂರ್ಯನ ಬೆಳಕಿನ ಮಹತ್ವ ಅರಿತು ಅದನ್ನು ಸದುಪಯೋಗ ಪಡಿಸಿಕೊಂಡರೆ ಹಲವಾರು ಸಮಸ್ಯಗಳಿಗೆ ನಾವು ಪರಿಹಾರ ಕಂಡುಕೊಂಡತೆ ಆಗುತ್ತದೆ. ಎಂದು ಜರ್ಮನ್ ದೇಶದ ಎನರ್ಜಿ ಕ್ಲಸ್ಟರ್ ಹೆಡ್ ,ಜಿ ಆಯ್ ಝಡ್ ಡಾ/ ವಿನ್ ಪ್ರೈಡ್ ಡ್ಯಾಮ್ ಅಭಿಪ್ರಾಯ ಪಟ್ಟರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಖಾನಾಪೂರ ತಾಲೂಕ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರ, ,ಜಿ ಆಯ್ ಝಡ್, ಸೆಲ್ಕೋ ಸೋಲಾರ್ ಲೈಟ್ ಪ್ರಾವೆಟ್ ಲಿಮಿಟೆಡ್ ,ಯುನೈಟೈಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸೌರ ಶಕ್ತಿ ಘಟಕ ಹಾಗೂ ವೈದ್ಯಕೀಯ ಉಪಕರಣ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿ ಜಿ,ಆಯ್ ಝಡ್ ಇವರ ಸಹಕಾರದೊಂದಿಗೆ ಸೆಲ್ಕೋ ಸಂಸ್ಥೆ ದೇಶದ ವಿದ್ಯುತ್ ವಂಚಿತ ಗ್ರಾಮಗಳಿಗೆ ಸೂರ್ಯ ಶಕ್ತಿ ಸದ್ಬಳಿಕೆ ಮಾಡಿಕೊಂಡು ವಿದ್ಯುತ್ ಸರಬರಾಜು ಮಾಡುತ್ತಿರುವುದು ತುಂಬಾ ಸಂತಸ ತಂದಿದೆ. ಸಂಸ್ಥೆಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವ ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತಿದ್ದೇನೆ. ಹಾಗೂ ಇಂತಹ ಕಡಿದಾದ ಕಾಡು ಪ್ರದೇಶದಲ್ಲಿ, ಮೂಲಭೂತ ಸೌಕರ್ಯ ಹೊಂದಿರದ ಗ್ರಾಮಗಳ ಜನರಿಗೆ ೧೦೦% ಕೋವಿಡ್ ಲಸಿಕೆ ಹಾಕಿರುವುದು ದೊಡ್ಡ ಸಾಧನೆ ಆಗಿದೆ. ಹಾಗೂ ಇಂತಹ ಗ್ರಾಮೀಣ ಕುಟುಂಬಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಮ್ಮ ಸಂಸ್ಥೆ ಸೋಲಾರ್ ಶಕ್ತಿಯನ್ನು ನೀಡಲು ಸದಾ ಸಿದ್ದವಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಮತಿ ನಿಧಿ ಸರೀನ್ ಯೋಜನಾ ವ್ಯವಸ್ಥಾಪಕರಾದ ಜಿ ಆಯ್ ಝಡ್ ಇವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುಂಬಾ ಉಪಯುಕ್ತವಾದ ಸೋಲಾರ್ ಘಟಕ ನಿರ್ಮಾಣ ಮಾಡಿ. ಇಂದು ಜನರಿಗೆ ಅದರ ಉಪಯೋಗವಾಗುವಂತೆ ಮಾಡಿದ್ದು ಮಹತ್ತರ ಕೆಲಸವಾಗಿದೆ. ನಿರತಂರವಾಗಿ ಮಳೆ ಬೀಳುವ ಈ ಪ್ರದೇಶದಲ್ಲಿ ವಿದ್ಯುತ್ ಸರಿಯಾಗಿ ಸರಬರಾಜು ಮಾಡುವುದು ಸವಾಲಿನ ಕೆಲಸ ಹೀಗಾಗಿ ಇಲ್ಲಿ ಸೋಲಾರ್ ಘಟಕ ಅಳವಡಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಆರೋಗ್ಯ ಸುಧಾರಣೆಗೆ ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೋಹನ ಹೆಗಡೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೆಲ್ಕೋ ಸೋಲಾರ್ ಲೈಟ್ ಪ್ರಾವೆಟ್ ಲಿಮಿಟೆಡ್ ಇವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಲಸಕಾರ್ಯಗಳು ನಿರಂತರವಾಗಿ ಸಾಗಲು ನಮಗೆ ವಿದ್ಯುತ್ ಮುಖ್ಯ . ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲ್ಲಿ ೬ಕಿಲೋ ವ್ಯಾಟ್ ಸಾಮರ್ಥ್ಯ ಸೋಲಾರ ಘಟಕವನ್ನು ಸ್ಥಾಪನೆ ಮಾಡಿದ್ದರಿಂದ ಇಲ್ಲಿ ಇನ್ನು ಮುಂದೆ ವಿದ್ಯುತ್ ಕೊರತೆ ಆಗದು. ಬೆಳಗಾವಿ ಜಿಲ್ಲೆಯ ೩ ಪ್ರಾಥಮೀಕ ಆರೋಗ್ಯ ಕೇಂದ್ರಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದರು.

“ಈ ಬಾಗದ ವಿದ್ಯುತ್  ಸಮಸ್ಯೆಯನ್ನು ಮನಗಂಡು ಜಿ.ಆಯ್. ಝಡ್ ರವರ ಸಂಪೂರ್ಣ ಸಹಯೋಗ ಅಂದಾಜು‌ ಪ್ರತಿ ಆರೋಗ್ಯ ಕೇಂದ್ರಗಳಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸೋಲಾರ್ ಸಿಸ್ಟಮ್ ಮತ್ತು ಅಗತ್ಯವಿರುವ ಮೆಡಿಕಲ್ ಇಕ್ವಿಪ್ ಮೆಂಟ್ ಗಳನ್ನೂ ಒದಗಿಸಿದ್ದೇವೆ. ಇದು ಕೋವಿಡ್ ಸಂದರ್ಭದಲ್ಲಿ ನಿರಂತರ ಸೇವೆಗೈದ ಎಲ್ಲಾ ವೈದ್ಯಕೀಯ ಸಿಬ್ಬಂಗಳ ಎದುರಿಗೆ ಕಿಂಚಿತ್ ನಮ್ಮ ಸೇವೆ ಎಂದು, ಎಲ್ಲಾ ಕೊವಿಡ್ ವಾರಿಯರ್ಗಳನ್ನು ಶ್ಲಾಘಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಶಶಿಕಾಂತ ಮುನ್ಯಾಳ ಬೆಳಗಾವಿ ಇವರು ಮಾತನಾಡಿ ಕಣಕುಂಬಿ ಪ್ರಾಥಮೀಕ ಕೇಂದ್ರದ ಡಾ.ಚೇತನ್ ಹಾಗೂ ಅವರ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು. ಕೋವಿಡ್ ಸಂದರ್ಭದಲ್ಲಿ ಈ ಭಾಗದ ಎಲ್ಲಾ ಜನರಿಗೂ ೧೦೦% ಲಸಿಕೆ ನೀಡಿ ಜಿಲ್ಲೆಗೆ ಮಾದರಿಯಾಗಿದ್ದಾರೆ,ಜೋತೆಗೆ ಸೆಲ್ಕೊ ಸಂಸ್ಥೆಯವರು ನಮ್ಮ ವಿದ್ಯುತ್ ತೂಂದರೆ ನಿಗಿಸಿದೆ. ಹೀಗೆ ಅತಿಹೆಚ್ಚು ಮಳೆ ಬೀಳುವ ಹಲವು ಪ್ರಾಥಮೀಕ ಕೇಂದ್ರ ಗಳಿಗೆ ಸಹಾಯ ಮಾಡಿ ಎಂದರು.
ಕಾರ್ಯಕ್ರಮದ ಮೊದಲಿಗೆ ಜರ್ಮನ್ ದೇಶದ ಡಾ/ ವಿನ್ ಪ್ರೈಡ್ ಡ್ಯಾಮ್ ಹಾಗು ಎಲ್ಲಾ ಅಥಿತಿಗಳನ್ನು ವಾದ್ಯ ಮೇಳಗಳೂಂದಿಗೆ ಸ್ವಾಗತಿಸಲಾಯಿತು. ಸುಮಾರು ೧೫ ಲಕ್ಷ ಮೌಲ್ಯದ ಸೋಲಾರ್ ಘಟಕ ಹಾಗು ವೈದ್ಯಕೀಯ ಉಪಕರಣಗಳನ್ನು  ಕಣಕುಂಬಿ ಪ್ರಾಥಮೀಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚೇತನ್ ಇವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಯುನೈಟೈಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿಯ ಅಧ್ಯಕ್ಷರಾದ ಬಿ ಓ ತಿಪ್ಪೆಸ್ವಾಮಿ , ಕಣಕುಂಬಿ ಗ್ರಾಮ ಪಂಚಾಯತಿ ಅಧ್ಯಕ್ಷರು, ತಾಲೂಕು ಪಂಚಾಯತಿ ಸದಸ್ಯರು, ಗ್ರಾಮದ ಹಿರಿಯರು,ಆಶಾ, ಅಂಗನವಾಡಿ ಕಾರ್ಯಕರ್ತರು,ಶಾಲಾ ಮಕ್ಕಳು , ಪ್ರಾಥಮೀಕ ಕೇಂದ್ರದ ಸಿಬ್ಬಂದಿ, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಡಾ.ಚೇತನ್ ವೈದ್ಯಾಧಿಕಾರಿಗಳು ಪ್ರಾಥಮೀಕ ಆರೋಗ್ಯ ಕೇಂದ್ರ ಕಣಕುಂಬಿ  ಸ್ವಾಗತಿಸಿದರು. ಸೆಲ್ಕೋ ಸೋಲಾರ್ ಲೈಟೆ ಪ್ರಾವೆಟ್ ಲಿಮಿಟೆಡ್‌ನ ಜಿಲ್ಲಾ ಸಂಯೋಜಕರು ವಂದಿಸಿದರು. ಸೆಲ್ಕೊದ ಡಿ.ಜಿ.ಎಮ್. ಪ್ರಸನ್ನ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರೆ ಸೆಲ್ಕೊ ಬೆಳಗಾವಿಯ ಏರಿಯಾ ಮೆನೆಜರ್ ವಿನಾಯಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

 

ಗಡಿಯಂಚಿನ‌ ಪ್ರಾಥಮಿಕ‌ ಆರೋಗ್ಯ ಕೇಂದ್ರಳೀಗ ಸೋಲಾರ್ ಮಯ
ಜಿ.ಆಯ್.ಝಡ್ ಮತ್ತು ಸೆಲ್ಕೊ ಸೋಲಾರ ಸಂಸ್ಥೆಗಳ ಸಹಯೋಗದಿಂದ ಖಾನಾಪುರ ತಾಲೂಕಿ ಗಡಿ ಭಾಗಗಳಲ್ಲಿರುವ ಅದರಲ್ಲೂ ವಿದ್ಯುತ್ ಅಭಾವ ಹೊಂದಿರುವ ಕಣಕುಂಬಿ, ಲೋಂಡಾ, ಕಕ್ಕೇರಿ ಪ್ರಾಥಮಿಕ‌ ಆರೋಗ್ಯ ಕೇಂದ್ರಗಳಿಗ ಸಂಪೂರ್ಣ ವಿದ್ಯುತ್ ಸ್ವಾಲಂಬಿಯಾಗಿ ಹೊರ ಹೊಮ್ಮಿದೆ. ಇಂದು ಕಣಕುಂಬಿಯಲ್ಲಿ ಈ ಸೌಲಭ್ಯವನ್ನು ಈ ಎರಡೂ ಸಂಸ್ಥೆಗಳು ಅಧಿಕೃತವಾಗಿ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳರವರಿಗೆ ಹಸ್ತಾಂತರಿಸಿದರು.

Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ