Breaking News

ನೋವಿಲ್ಲದೆ ಸಾಯುವ ಸೂಸೈಡ್ ಪಾಡ್‌ ಕಾನೂನುಬದ್ಧಗೊಳಿಸಿದ ಸ್ವಿಜ಼ರ್ಲೆಂಡ್

Spread the love

ನೋವೇ ಇಲ್ಲದಂತೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ.

ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ‘ಸ್ಯಾಕ್ರೋ’ ಯಂತ್ರಗಳು 3ಡಿ ಮುದ್ರಿತ್‌ ಕ್ಯಾಪ್ಸೂಲ್‌ಗಳಾಗಿದ್ದು, ತಮ್ಮೊಳಗೆ ನೈಟ್ರೋಜನ್‌ ತುಂಬಿಕೊಂಡು ಆಮ್ಲಜನಕದ ಪ್ರಮಾಣದ ತಗ್ಗಿಸಿ ಒಳಗಿರುವ ವ್ಯಕ್ತಿಯನ್ನು ತಣ್ಣಗೆ ಜೀವ ಬಿಡಲು ನೆರವಾಗುತ್ತದೆ.

 

ಸ್ವಿಸ್ ಇನ್ಫೋ ವರದಿಯ ಪ್ರಕಾರ, ಶವಪೆಟ್ಟಿಗೆಯಂತೆ ಕಾಣುವ ಸ್ಯಾಕ್ರೋ ಕ್ಯಾಪ್ಸೂಲ್‌ನ್ನು ಸ್ವಿಜ಼ರ್ಲೆಂಡ್‌ನಲ್ಲಿ 2022ರಿಂದ ಬಳಕೆಗೆ ಸಿದ್ಧಪಡಿಸಲಾಗುತ್ತಿದೆ. ಈ ಯಂತ್ರವನ್ನು ನೆದರ್ಲೆಂಡ್ಸ್‌ನಲ್ಲಿ ವೈದ್ಯ ಫಿಲಿಪ್ ನಿಟ್‌ಶ್ಕಿ ಅವರು ಅಭಿವೃದ್ಧಿಪಡಿಸಿದ್ದಾರೆ. ದ್ರವ ರೂಪದ ಸೋಡಿಯಂ ಪೆಂಟೋಬಾರ್ಬಿಟಲ್‌ ಅನ್ನು ಕರಗಿಸಿಕೊಳ್ಳುವ ಆತ್ಮಹತ್ಯಾ ಯಂತ್ರಗಳು ಯಾವುದೇ ನಿಯಂತ್ರಿತ ವಸ್ತುಗಳಿಲ್ಲದೆ ಶಾಂತಿಯಿಂದ ಸಾಯಲು ಅನುವು ಮಾಡಿಕೊಡುತ್ತವೆ.

ಒಮ್ಮೆ ಸಕ್ರಿಯವಾದ ಕೂಡಲೇ ಕ್ಯಾಪ್ಸೂಲ್ ಒಳಗೆ ನೈಟ್ರೋಜನ್ ನುಗ್ಗಿ ಆಮ್ಲಜನಕದ ಪ್ರಮಾಣವನ್ನು ವ್ಯಾಪಕವಾಗಿ ತಗ್ಗಿಸಿ, ಒಳಗಿರುವ ವ್ಯಕ್ತಿ ಪ್ರಜ್ಞಾಹೀನನಾಗಿ ಹಾಗೇ ಯಾವುದೇ ನೋವಿಲ್ಲದೇ ಸಾಯುತ್ತಾನೆ. ಇಡೀ ಪ್ರಕ್ರಿಯೆಯು ಒಂದು ನಿಮಿಷದಲ್ಲಿ ನಡೆದು ಹೋಗುತ್ತದೆ ಎಂದು ಫಿಲಿಪ್ ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ