Breaking News
Home / ರಾಜಕೀಯ / ಕರ್ನಾಟಕಕ್ಕೆ ʼಒಮಿಕ್ರಾನ್‌ʼ ಎಂಟ್ರಿ : ವೈರಸ್ ಲಕ್ಷಣಗಳೇನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ

ಕರ್ನಾಟಕಕ್ಕೆ ʼಒಮಿಕ್ರಾನ್‌ʼ ಎಂಟ್ರಿ : ವೈರಸ್ ಲಕ್ಷಣಗಳೇನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ

Spread the love

ಬೆಂಗಳೂರು : ದೇಶದಲ್ಲಿಯೇ ಮೊದಲ ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿವೆ. ಇನ್ನು ಈ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷದ ವೃದ್ದ ಮತ್ತು ಬೆಂಗಳೂರಿನ 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್‌ ವೈರಸ್‌ ಪತ್ತೆಯಾಗಿದೆ.

 

ಮೂಲತಃ ಬೆಂಗಳೂರಿನ ಆರೋಗ್ಯ ಕಾರ್ಯಕರ್ತನಾದ 46 ವರ್ಷದ ವ್ಯಕ್ತಿಗೆ ಅಪಾಯಕಾರಿ ಒಮಿಕ್ರಾನ್‌ ಪತ್ತೆಯಾಗಿದೆ. ಅಘಾತಕಾರಿ ಅಂದ್ರೆ, ಇವ್ರಿಗೆ ಯಾವುದೇ ಟ್ರಾವೇಲ್‌ ಹಿಸ್ಟ್ರಿ ಇಲ್ಲ. ಹಾಗಾಗಿ ಈ ಅಪಾಯಕಾರಿ ವೈರಸ್‌ ಹೇಗೆ ಹರಡಿತು ಅನ್ನೋದು ಆತಂಕಕ್ಕೆ ಕಾರಣವಾಗಿದೆ. ಸಂಪರ್ಕಿತರನ್ನ ಪತ್ತೆ ಹಚ್ಚಿ ಐಸೋಲೇಟ್‌ ಮಾಡಲಾಗಿದೆಯಾದ್ರು, ಮುಂಜಾಗ್ರತಾ ಕ್ರಮ ವಹಿಸಿ, ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ. ಹಾಗಾದ್ರೆ, ಈ ರೂಪಾಂತರಿ ವೈರಸ್‌ ಎಷ್ಟು ಅಪಾಯಕಾರಿ? ಇದರ ಲಕ್ಷಣಗಳೇನು..?

ತಜ್ಞರು ಈ ಒಮಿಕ್ರಾನ್‌ ವೈರಸ್‌ ತುಂಬಾ ಅಪಾಯಕಾರಿ ಎಂದು ಹೇಳಲಾಗ್ತಿದ್ದು, ಡೆಲ್ಟಾಗಿಂತಲೂ 7 ಪಟ್ಟು ವೇಗವಾಗಿ ಹರಡುತ್ತೆ ಎನ್ನಲಾಗ್ತಿದೆ. ಆದ್ರೆ, ಮುಂಜಾಗ್ರತಾ ಕ್ರಮ ವಹಿಸಿ, ಕೊರೊನಾ ನಿಯಮಗಳನ್ನ ಅಚ್ಚುಕಟ್ಟಾಗಿ ಅನುಸರಿಸಿದ್ರೆ, ಅಪಾಯವಿಲ್ಲ.

ಒಮಿಕ್ರಾನ್‌ ವೈರಸ್‌ನ ಲಕ್ಷಣಗಳೇನು..?
* ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
* ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
* ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
* ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
* ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಠ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ