Breaking News

18 ತಿಂಗಳ ಬಳಿಕ ವಿಮಾನ ಕಾರ್ಯಾಚರಣೆ ಆರಂಭಿಸಿದ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1

Spread the love

ಹೊಸದಿಲ್ಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಹದಿನೆಂಟು ತಿಂಗಳ ಬಳಿಕ ಮೊದಲ ಬಾರಿಗೆ ಕಾರ್ಯಾರಂಭ ಮಾಡಿದೆ.

ರವಿವಾರ ಸಂಜೆ 6 ಗಂಟೆವರೆಗೆ 133 ವಿಮಾನಗಳು ಟೇಕಾಫ್ ಅಥವಾ ಲ್ಯಾಂಡಿಗ್ ಆಗಿವೆ. ಇಡೀ ದಿನ 200ಕ್ಕೂ ಹೆಚ್ಚು ವಿಮಾನಗಳು ಮೊದಲ ದಿನ ಕಾರ್ಯಾಚರಣೆ ಮಾಡಿವೆ ಎಂದು ದೆಹಲಿ ಇಂಟರ್‌ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಲ್‌ಎಲ್) ಪ್ರಕಟಿಸಿದೆ.

 

“ಇಂಡಿಗೊ ಮತ್ತು ಸ್ಪೈಸ್‌ ಜೆಟ್ ವಿಮಾನಗಳೊಂದಿಗೆ ಟರ್ಮಿನಲ್-1ರಲ್ಲಿ ಮೊದಲ ಬಾರಿಗೆ 18 ತಿಂಗಳ ಬಳಿಕ ಕಾರ್ಯಾರಂಭ ಮಾಡಲಾಗಿದೆ. ದುರ್ಗಾಪುರ- ದೆಹಲಿ ಸ್ಪೈಸ್‌ ಜೆಟ್ (ಎಸ್‌ಜಿ-226) ವಿಮಾನ ಮಧ್ಯರಾತ್ರಿ ಬಳಿಕ 1 ಗಂಟೆಗೆ ಆಗಮಿಸಿದೆ. ದೆಹಲಿ- ಮುಂಬೈ ಇಂಡಿಗೊ ವಿಮಾನ (6ಇ-171) 1.49ಕ್ಕೆ ಮೊದಲ ವಿಮಾನವಾಗಿ ನಿರ್ಗಮಿಸಿದೆ” ಎಂದು ಡಿಐಎಎಲ್ ವಕ್ತಾರರು ಹೇಳಿದ್ದಾರೆ.

ಕೋವಿಡ್-19 ಲಾಕ್‌ಡೌನ್‌ನ ನಿರ್ಬಂಧಗಳಿಂದಾಗಿ 2020ರ ಮಾರ್ಚ್ 25ರ ಬಳಿಕ ಯಾವುದೇ ವಿಮಾನ ಕಾರ್ಯಾಚರಣೆ ಮಾಡಿಲ್ಲ. ಇದೀಗ ಬಹುತೇಕ ಭಾಗಗಳು ಪ್ರಯಾಣಿಕರ ಬಳಕೆಗೆ ಲಭ್ಯವಾಗಿವೆ. ಪ್ರಯಾಣಿಕರು ಆಗಮನ ಆರಂಭವಾಗಿದ್ದು, ಹಿಂದೆ ಇದ್ದ ಭದ್ರತಾ ಸಿಬ್ಬಂದಿಯ ಶೇಕಡ 70ರಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

“1ನೇ ಟರ್ಮಿನಲ್‌ನ ಅರ್ಧದಷ್ಟು ಪ್ರದೇಶವನ್ನು ವಿಸ್ತರಣಾ ಕಾರ್ಯಕ್ಕೆ ಬಳಸಿಕೊಂಡಿರುವುದರಿಂದ ಬ್ಯಾರಿಕಡ್ ಮತ್ತು ತ್ವರಿತ ಸ್ಪಂದನೆ ತಂಡಗಳು ಹಿಂದಿನ ದಿನಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿವೆ. ಎರಡು ಕ್ಯೂಆರ್‌ಟಿ ತಂಡ ಮತ್ತು 2 ಬ್ಯಾರಿಕೇಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಧಿಕೃತ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ” ಎಂದು ಸಿಐಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

ಒಂದನೇ ಟರ್ಮಿನಲ್‌ನಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳಲ್ಲಿ ಸುರಕ್ಷಿತ ಅಂತರ ಖಾತರಿಗೊಳಿಸುವ ಸರದಿ ವ್ಯವಸ್ಥೆ, ಸರದಿ ವ್ಯವಸ್ಥಾಪಕರ ನಿಯೋಜನೆ, ನೆಲದಲ್ಲಿ ಗುರುತುಗಳನ್ನು ಮಾಡಿರುವುದು, ಪರ್ಯಾಯ ಆಸನಗಳ ಹಂಚಿಕೆ ಮತ್ತು ಸ್ವಯಂಚಾಲಿತ ಸ್ಯಾನಿಟೈಸರ್ ಯಂತ್ರಗಳನ್ನು ವಿವಿಧೆಡೆ ಅಳವಡಿಸಿರುವುದು ಸೇರಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ