Breaking News

ಶ್ರೀಮಂತ ಪಾಟೀಲ್ ಗೆ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕು : ಲಕ್ಷ್ಮಣ ಸವದಿ

Spread the love

ಬೆಳಗಾವಿ : ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಹಣದ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕೆಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.

 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ರನ್ನು ಈ ಬಗ್ಗೆ ನಾನು ಭೇಟಿ ಮಾಡಿಲ್ಲ. ಅವರಿಗೆ ಯಾರು ಹಣ ಕೊಡಲು ತೆರಳಿದ್ದರು, ಯಾರು ಆಮಿಷವೊಡ್ಡಿದ್ದರೆಂದು ಪರಿಶೀಲನೆ ಆಗಬೇಕೆಂದು ಆಗ್ರಹಿಸಿದರು. ಇನ್ನು ಅಧಿಕಾರ ಶಾಶ್ವತವಲ್ಲ. ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ ಮಾತನಾಡುವ ಭರದಲ್ಲಿ ಆ ರೀತಿ ಹೇಳಿರಬಹುದು. ಈ ಬಗ್ಗೆ ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವುದಾಗಿ ಸವದಿ ಸ್ಪಷ್ಟಪಡಿಸಿದರು.

 

ಇನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಬರಲು ನನಗೆ ಹಣದ ಆಮಿಷವೊಡ್ಡಿದ್ದರೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ತಿಳಿಸಿದ್ದಾರೆ. ಅಲ್ಲದೇ, ತಾವು ಹಣ ತೆಗೆದುಕೊಂಡಿಲ್ಲ. ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿದ್ದಕ್ಕೆ ಬಿಜೆಪಿಗೆ ಹೋಗಿದ್ದಾಗಿ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದು, ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ….


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ