ಗೆ….
ಶ್ರೀ ಶಂಕರಗೌಡ ಪಾಟೀಲ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು
ಬೆಂಗಳೂರು
.
ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಅಂಕಗಳನ್ನು ತಿರುಚುವ ಮೂಲಕ 2015 ನೇ ಸಾಲಿನ 428 ಕೆಎಎಸ್ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದರಿಂದ ಇಡೀ ನೇಮಕಾತಿಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದಲ್ಲದೆ ಮರು ಮೌಲ್ಯಮಾಪನ ನಡೆಸಬೇಕೆಂದು ಆಗ್ರಹಿಸುತ್ತೆವೆ.
ಅಸಮಾಧಾನ ಅಂಶಗಳು:-
* 30 ಅಭ್ಯರ್ಥಿಗಳು ಪರೀಕ್ಷಾ ನಿಯಮ ಉಲ್ಲಂಘಿಸಿ ಕೆಎಟಿ ಮೆಟ್ಟಿಲೇರಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದರಿಂದ ಕೆಎಟಿ ಆದೇಶದ ವಿರುದ್ಧ ಕೆಪಿಎಸ್ ಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸದಿರುವುದು,
* ಮೌಲ್ಯಮಾಪಕರಿಗೆ ಕೆಪಿಎಸ್ ಸಿ ಪರೀಕ್ಷಾ ವಿಭಾಗವೇ ಪಾಸ್ವರ್ಡ್ ಒದಗಿಸಿರುವ ಬಗ್ಗೆ ಮಾಹಿತಿ ಕೇಳಿ ಬಂದಿದ್ದು,
* ತಾತ್ಕಾಲಿಕ ಪಟ್ಟಿಯಲ್ಲಿ ಒಂದೆರಡು ಸಮುದಾಯಗಳ ಸುಮಾರು 150 ಅಭ್ಯರ್ಥಿಗಳು ಆಯ್ಕೆಯಾಗಿರುವುದು,
* ಮೌಲ್ಯಮಾಪನದಲ್ಲಿ ಕನ್ನಡ ಸಾಹಿತ್ಯಕ್ಕೆ ಕಡೆಗಣಿಸಿ ಮಾನವಶಾಸ್ತ್ರ ಹೆಚ್ಚು ಒತ್ತು ಕೊಟ್ಟಿದ್ದು.
* ಡಿಜಿಟಲ್ ಮೌಲ್ಯಮಾಪನ ನಡೆಸಿದ್ರು ಫಲಿತಾಂಶಕ್ಕೆ ವಿಳಂಬ ಮಾಡಿರುವುದು.
* ಆಕ್ಷೇಪಣೆಗಳನ್ನು ಆಲಿಸದೆ ತರಾತುರಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದು,
ಬೇಡಿಕೆಗಳು:-
* ಅಭ್ಯರ್ಥಿಗಳು ಪರೀಕ್ಷೆ ಬರೆದ ವಿಷಯಗಳ ಅಂಕಗಳನ್ನು ಪ್ರತ್ಯೇಕ, ಪ್ರತ್ಯೇಕವಾಗಿ ಒದಗಿಸಬೇಕು,
* ಎಲ್ಲಿಯೂ ಕೂಡ ಯಶಸ್ವಿಯಾಗದ ಡಿಜಿಟಲ್ ಮೌಲ್ಯಮಾಪನ ರದ್ದುಮಾಡಬೇಕು.
* ಡಿಜಿಟಲ್ ಮೌಲ್ಯಮಾಪನ ರದ್ದುಪಡಿಸಿ ಮರು ಮೌಲ್ಯಮಾಪನ ನಡೆಸಬೇಕು.
* ಇಡೀ ನೇಮಕಾತಿಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದು.