Breaking News

ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಸಿಗಬೇಕಿದೆ.: ಪ್ರಹ್ಲಾದ್​ ಜೋಶಿ,ಉಮೇಶ್​ ಕತ್ತಿ ಸಿಎಂ ಕನಸಿಗೆ ಪರೋಕ್ಷ ಬೆಂಬಲ

Spread the love

ಬಿಜೆಪಿ ಪಾಳಯದಲ್ಲಿ ಸಿಎಂ ಬದಲಾವಣೆಯ ಕೂಗು ಮುಗಿಯುವಂತೆ ಕಾಣುತ್ತಿಲ್ಲ. ಭಿನ್ನಮತ ಶಮನಕ್ಕೆ ಹೈಕಮಾಂಡ್​ ಪ್ರಯತ್ನದ ಬಳಿಕವೂ ಅಲ್ಲಲ್ಲಿ ಭಿನ್ನರಾಗಗಳು ಕೇಳಿ ಬರುತ್ತಲೇ ಇದೆ. ಸದಾ ಸಿಎಂ ಸ್ಥಾನದ ಕನಸು ಕಾಣುವ ಉಮೇಶ್​ ಕತ್ತಿ ಇಂದು ಮತ್ತೊಮ್ಮೆ ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಎಂದು ಹೇಳಿದ್ದಾರೆ.

ಸಚಿವ ಉಮೇಶ್​ ಕತ್ತಿಯ ಈ ಮಾತಿಗೆ ಪರೋಕ್ಷ ಬೆಂಬಲ ಸೂಚಿಸಿ ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಕತ್ತಿ ಉತ್ತರ ಕರ್ನಾಟಕದವರು ಮುಂದಿನ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ನಾಳೆಯೇ ರಾಜ್ಯದ ಸಿಎಂ ಬದಲಾಗ್ತಾರೆ ಎಂದು ಎಲ್ಲಿಯೂ ಹೇಳಿಲ್ಲ. ಉಮೇಶ್​ ಕತ್ತಿ ಯಾವ ಹಿನ್ನೆಲೆ ಇಟ್ಟುಕೊಂಡು ಈ ಮಾತನ್ನ ಹೇಳಿದ್ರು ಅನ್ನೋದು ಗೊತ್ತಿಲ್ಲ.

ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಸಿಗಬೇಕಿದೆ. ಹಾಗಂತ ನಾಳೆ, ನಾಡಿದ್ದೋ ಅಥವಾ ಈ ವರ್ಷವೇ ಬೇಕು ಅಂತಲ್ಲ. ಆದರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೂ ಈ ಅವಕಾಶ ಬೇಕು. ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು ಎಂದು ಹೇಳಿದ್ರು.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ