Breaking News

ಅಮೆರಿಕಾದಿಂದ ಸೂಪರ್ ಸ್ಟಾರ್ ರಜನಿಕಾಂತ್ ವಾಪಸ್: ಫಿಟ್ ಅಂಡ್ ಫೈನ್ ಆಗಿ ಮರಳಿದ ತಲೈವಾ!

Spread the love

ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್, ಕಾಲಿವುಡ್ ತಲೈವಾ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ.

ಆರೋಗ್ಯ ತಪಾಸಣೆಗಾಗಿ ಕಳೆದ ತಿಂಗಳು ನಟ ರಜನಿಕಾಂತ್. ಪತ್ನಿ ಲತಾ, ಪುತ್ರಿ ಐಶ್ವರ್ಯ ಜೊತೆಗೆ ಯುಎಸ್‌ಗೆ ರಜನಿಕಾಂತ್ ತೆರಳಿದ್ದರು. ಅಲ್ಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾದರು.

ಮೂರು ವಾರಗಳ ಕಾಲ ಯುಎಸ್‌ನಲ್ಲಿದ್ದ ರಜನಿಕಾಂತ್ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಚೆನ್ನೈಗೆ ರಜನಿಕಾಂತ್ ಬಂದಿಳಿಯಲಿದ್ದಾರೆ ಎಂಬ ಸುದ್ದಿ ಬಹಿರಂಗವಾದ ನಂತರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ದಂಡು ನೆರೆದಿತ್ತು.

ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ಸಾಗರವೇ ಏರ್‌ಪೋರ್ಟ್‌ನತ್ತ ಹರಿದುಬಂದಿತ್ತು. ಅಭಿಮಾನಿಗಳಿಗೆ ನಮಸ್ಕಾರ ಮಾಡಿದ ರಜನಿಕಾಂತ್ ತಮ್ಮ ನಿವಾಸದತ್ತ ಹೊರಟರು. ಆರೋಗ್ಯವಾಗಿ ವಾಪಸ್ ಬಂದ ರಜನಿಕಾಂತ್‌ರನ್ನ ನೋಡಿದ ಅಭಿಮಾನಿಗಳು ಸಂತಸಗೊಂಡರು. ರಜಿನಿಕಾಂತ್ ಫುಲ್ ಫಿಟ್ ಅಂಡ್ ಫೈನ್ ಆಗಿ ವಾಪಸ್ ಬಂದಿದ್ದಾರೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ