Breaking News

ದಾರಿತಪ್ಪಿ ಪಾಳುಬಾವಿಗೆ ಬಿದ್ದ 80 ವರ್ಷದ ವೃದ್ಧ: ಮೂರು ದಿನಗಳ ಬಳಿಕ ರಕ್ಷಣೆ ಮಾಡಿದ್ದೇ ರೋಚಕ!

Spread the love

ಸಿದ್ದಿಪೇಟೆ: ಜೂನ್​ 29 ರಂದು 80 ವರ್ಷದ ನಾರಾಯಣ ಎಂಬುವರು ತೆಲಂಗಾಣದ ಸಿದ್ದಿಪೇಟೆ ಸಮೀಪದ ಗ್ರಾಮವೊಂದರಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಿದ್ದಿಪೇಟೆಗೆ ಹಿಂದಿರುಗುವಾಗ ದಾರಿತಪ್ಪಿದ ನಾರಾಯಣ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದು ಮೂರು ದಿನಗಳ ಬಳಿಕ ರಕ್ಷಣೆ ಒಳಗಾದ ಘಟನೆ ನಡೆದಿದೆ.

ಬಾವಿಯಲ್ಲಿ ಬಿದ್ದಿದ್ದ ನಾರಾಯಣ ಮೂರು ದಿನಗಳ ಕಾಲ ನೆರವಿಗಾಗಿ ಕೂಗಾಡಿ, ಕಣ್ಣೀರಾಕಿದರು ಯಾರೊಬ್ಬರಿಗೂ ಅವರ ಸುಳಿವು ಸಿಗಲಿಲ್ಲ. ಮೂರು ದಿನಗಳ ಕಾಲವೂ ಊಟ ಇಲ್ಲದೆ ಹಿರಿಯ ಜೀವ ಸಾಕಷ್ಟು ನರಳಾಡಿದೆ. ಅವರ ನರಳಾಟ ನೋಡಿ ದೇವರಿಗೂ ಮನಸ್ಸು ಕರಗಿತೇನೋ… ಜುಲೈ ಒಂದರಂದು ಅಂದರೆ ಘಟನೆ ನಡೆದ ಮೂರು ದಿನಗಳ ಬಳಿಕ ಪಾಳು ಬಾವಿಯ ಹತ್ತಿರ ಕೆಲಸ ಮಾಡುತ್ತಿದ್ದ ರೈತನಿಗೆ ನಾರಾಯಣ ಅಳುವ ಶಬ್ದ ಕೇಳಿದೆ. ತಕ್ಷಣ ಹೋಗಿ ನೋಡಿದ ರೈತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿರಿಯ ಜೀವವನ್ನು ರಕ್ಷಿಸಿದ್ದಾರೆ.

ಮೂರು ದಿನಗಳ ಕಾಲ ಊಟವಿಲ್ಲದೆ, ಬಾವಿಯ ಕೇವಲ ಒಂದು ಭಾಗದಲ್ಲಿದ್ದ ನೀರನ್ನು ಕುಡಿದುಕೊಂಡು ನಾರಾಯಣ ಬದುಕಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಹಿರಿಯ ಜೀವವನ್ನು ರಕ್ಷಿಸಿದ್ದಾರೆ. ತುಂಬಾ ನಿತ್ರಾಣರಾಗಿದ್ದ ನಾರಾಯಣರ ನಡುವಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಅದೃಷ್ಟವಶಾತ್​ ಹಿರಿಯ ಜೀವಕ್ಕೆ ಯಾವುದೇ ಗಾಯಗಳಾಗಿಲ್ಲ. ಆರೋಗ್ಯ ಸ್ಥಿರವಾಗಿದೆ. ಇದಕ್ಕೂ ಮೊದಲು ನಾರಾಯಣ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ನಾರಾಯಣ ರಕ್ಷಣೆ ಮಾಡಿದ್ದಕ್ಕೆ ಅವರ ಕುಟುಂಬ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ