Breaking News

ಶಿವಮೊಗ್ಗ: ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಯುವಕರು

Spread the love

ಶಿವಮೊಗ್ಗ: ದರೋಡೆ ಮಾಡಿ ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿದ ಯುವಕರನ್ನು ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಿನಿಮೀಯ ಶೈಲಿಯ ಘಟನೆ ನಗರದ ಕುವೆಂಪು ನಗರದಲ್ಲಿ ನಡೆದಿದೆ.

ಶಿವಮೊಗ್ಗದ ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಚೇಸ್ ಮಾಡಿದ ಯುವಕರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾಡಹಗಲೇ ದರೋಡೆಗೆ ಇಳಿದ ಇಬ್ಬರು ಖದೀಮರು ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುತ್ತಿದ್ದವರಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಅಷ್ಟೇ ಅಲ್ಲದೆ ಮೊಪೈಡ್ ಬೈಕ್​ನಲ್ಲಿ ಹೋಗುತ್ತಿದ್ದ ಅಪ್ಪ-ಮಗನಿಗೆ ಚಾಕು ತೋರಿಸಿ ಅವರಿಂದಲೂ ಹಣ ಕಸಿದು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದರು.

ಇದನ್ನು ಗಮನಿಸಿದ ಮನೋಜ್ ಹಾಗೂ ರಾಜೇಶ್ ಎಂಬಿಬ್ಬರು ಯುವಕರು ದರೋಡೆ ಮಾಡಿ ಓಡುತ್ತಿದ್ದವರನ್ನು ಬೈಕ್ ನಲ್ಲೇ ಬೆನ್ನತ್ತಿದ್ದರು. ಈ ವೇಳೆ ಕಳ್ಳರು ಶರಾವತಿ ನಗರದಲ್ಲಿ ಬೈಕ್ ಬಿಟ್ಟು ಮನೆಯೊಂದಕ್ಕೆ ನುಗ್ಗಿದ್ದರು. ಮನೆ ಒಳಗೆ ಹೋದ ಮನೋಜ್ ಹಾಗೂ ರಾಜೇಶ್ ಕಳ್ಳರಿಬ್ಬರುನ್ನು ಹಿಡಿಯಲು ಯತ್ನಿಸಿದಾಗ ಓರ್ವ ಯುವಕ ಪರಾರಿಯಾಗಿದ್ದು, ಓರ್ವನನ್ನು ಸೆರೆ ಹಿಡಿದಿದ್ದಾರೆ.

ಈ ಇಬ್ಬರು ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಓರ್ವನನ್ನು ಯುವಕರು ದೊಡ್ಡಪೇಟೆ ಪೊಲೀಸರ ಸುಪರ್ದಿಗೆ ನೀಡಲಾಗಿದೆ. ಪೊಲೀಸರು ಮತ್ತೋರ್ವನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಯುವಕರ ಧೈರ್ಯ ಮತ್ತು ಸಮಯೋಚಿತ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ