Breaking News

ಬೆಳಗಾವಿ ತಾಲ್ಲೂಕಿನಲ್ಲಿ ಕೋವೀಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖ

Spread the love

ಬೆಳಗಾವಿ- ಬೆಳಗಾವಿ ಜಿಲ್ಲೆಯ ಇಂದು ಶುಕ್ರವಾರದ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಕೋವೀಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗಿತ್ತಿದೆ.

ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 436 ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ತಾಲ್ಲೂಕಿನಲ್ಲಿ ಇಂದು ಕೇವಲ 91 ಸೊಂಕಿತರು ಪತ್ತೆಯಾಗಿದ್ದಾರೆ.ಚಿಕ್ಕೋಡಿಯಲ್ಲಿ ಅತೀ ಹೆಚ್ವು 157 ಜನ ಸೊಂಕಿತರು ಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಅತೀ ಕಡಿಮೆ ,6 ಜನ ಸೊಂಕಿತರು,ಅಥಣಿಯಲ್ಲಿ,40,ಗೋಕಾಕಿನಲ್ಲಿ 11,ಹುಕ್ಕೇರಿ 32,ಖಾನಾಪೂರ 14,ರಾಯಬಾಗ 49,ಸವದತ್ತಿಯಲ್ಲಿ 12,ಬೈಲಹೊಂಗಲದಲ್ಲಿ 18,ಜನ ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ತಾಲ್ಲೂಕಿನಲ್ಲಿ ಸೊಂಕಿತರ ಸಂಖ್ಯೆ ದಿನ ಕಳೆದಂತೆ ಕಡಿಮೆ ಆಗುತ್ತಿದೆ.

ಲಾಕ್ಡೌನ್ ಆದಾಗಿನಿಂದ ಬೆಳಗಾವಿ ,ಹಾಗು ಚಿಕ್ಕೋಡಿ ತಾಲ್ಲೂಕಿನಲ್ಲಿ ಅತೀ ಹೆಚ್ವು ಸೊಂಕಿತರು ಪತ್ತೆಯಾಗಿದ್ದರು,ಇತ್ತೀಚಿಗೆ ಈ ವಿಚಾರದಲ್ಲಿ ಚಿಕ್ಕೋಡಿ ಮೊದಲ ಕ್ರಮಾಂಕನಲ್ಲಿದ್ದು ಬೆಳಗಾವಿ ತಾಲ್ಲೂಕು ಎರಡನೇಯ ಸ್ಥಾನದಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣವೂ ಕಡಿಮೆ ಆಗುತ್ತಿದೆ,ಇವತ್ತು ಬೆಳಗಾವಿ ತಾಲ್ಲೂಕಿನಲ್ಲಿ 1,ಚಿಕ್ಕೋಡಿಯಲ್ಲಿ 2,ಗೋಕಾಕ 1,ಹುಕ್ಕೇರಿ 1 ,ಒಟ್ಟು ಐದು ಜನ ಕೋವೀಡ್ ಗೆ ಬಲಿಯಾಗಿದ್ದಾರೆ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ