Breaking News

ಗ್ರಾಹಕನ ಸೋಗಿನಲ್ಲಿ ಹೋಗಿ ಬಂಧಿಸಿದ ಪೊಲೀಸರು – 100 ರೂ. ಮೌಲ್ಯದ ಮದ್ಯ 400 ರೂ. ಗೆ ಮಾರಾಟ

Spread the love

ಚೆನ್ನೈ: ಲಾಕ್‍ಡೌನ್ ಮಧ್ಯೆಯೂ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚೆನ್ನೈನ ಹಮ್ಸಾ ಪಾರ್ಕ್ ನಿವಾಸಿ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಈತ ಲಾಕ್‍ಡೌನ್ ಆಗಿರುವುದನ್ನೇ ಬಂಡವಾಳ ಮಾಡಿಕೊಂಡು ಮದ್ಯವನ್ನು ಸಂಗ್ರಹಿಸಿ ಅದನ್ನು ವಾಟ್ಸಪ್ ಮೂಲಕ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ.

ಕೊರೊನಾ ಭಯದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಅಗತ್ಯವಸ್ತುಗಳ ಸರಬರಾಜು ಬಿಟ್ಟು ಬೇರೆಲ್ಲ ವಸ್ತುಗಳು ಮತ್ತು ಅಂಗಡಿಗಳು ಬಂದ್ ಆಗಿವೆ. ಇದರ ನಡುವೆ ಮದ್ಯದಂಗಡಿಗಳು ಕೂಡ ಮುಚ್ಚಿದ್ದು, ಮದ್ಯಪ್ರಿಯರಿಗೆ ತೊಂದರೆಯಾಗಿದೆ. ಇನ್ನೂ ಮದ್ಯಸಿಗದೆ ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಎಣ್ಣೆಯನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ

ಈ ರೀತಿಯಲ್ಲೇ ಅಯ್ಯಪ್ಪನ್ ಕೂಡ ಲಾಕ್‍ಡೌನ್‍ಗೂ ಮುಂಚೆಯೇ ಮದ್ಯದ ಬಾಟಲಿಗಳನ್ನು ಶೇಖರಣೆ ಮಾಡಿಕೊಂಡಿದ್ದು, ಈಗ ಅವುಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಗ್ರಾಹಕರಂತೆ ವಾಟ್ಸಪ್ ಮೂಲಕ ಮದ್ಯವನ್ನು ಆರ್ಡರ್ ಮಾಡಿದ್ದಾರೆ. ಆಗ ಅಯ್ಯಪ್ಪನ್ ಅವರಿಗೆ ತನ್ನ ಬೈಕಿನಲ್ಲಿ 12 ಬಾಟಲಿಗಳನ್ನು ತೆಗೆದುಕೊಂಡು ಕೊಡಲು ಬಂದಾಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.

ಅಯ್ಯಪ್ಪನ್ ಅವರನ್ನು ಅರೆಸ್ಟ್ ಮಾಡಿದ ಪೊಲೀಸರು ಆತನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋಗಿ ಚೆಕ್ ಮಾಡಿದಾಗ ಅವರ ಮನೆಯಲ್ಲಿ ನಿಂತಿದ್ದ ಕಾರಿನಲ್ಲಿ ಸುಮಾರು 870 ಮದ್ಯದ ಬಾಟಲಿಗಳು ಸಿಕ್ಕಿವೆ. ನಂತರ ಆತನನ್ನು ತನಿಖೆ ಮಾಡಿದಾಗ ನಾನು ಲಾಕ್‍ಡೌನ್ ಮುಂಚೆಯೇ ಈ ಮದ್ಯದ ಬಾಟಲಿಗಳನ್ನು ಖರೀದಿಸಿದ್ದೆ. ನಂತರ ನನ್ನ ನಂಬರ್ ಅನ್ನು ವಿವಿಧ ವಾಟ್ಸಪ್ ಗ್ರೂಪ್‍ಗಳಿಗೆ ಶೇರ್ ಮಾಡಿ ಆ ಮೂಲಕ 100 ರೂ. ಮೌಲ್ಯದ ಮದ್ಯವನ್ನು 400 ರೂ. ಬೆಲೆಗೆ ಮಾರುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.


Spread the love

About Laxminews 24x7

Check Also

ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್​ ಅವಕಾಶ ನೀಡಿದೆ.

Spread the love ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ