Breaking News

ಸಿಡಿ ಲೇಡಿ ಪೋಷಕ’ರಿಂದ ‘ಡಿಕೆ ಶಿವಕುಮಾರ್’ ಮೇಲೆ ಗಂಭೀರ ಆರೋಪ :

Spread the love

ಬೆಳಗಾವಿ : ನಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳಿಂದ ಮಾಡಿಸಿದ್ದಾರೆ. ಇದರ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ನಮ್ಮ ಮಗಳನ್ನು ಒತ್ತಾಯ ಪೂರ್ವಕವಾಗಿ ಬಂಧನದಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಿಸ್ತಾ ಇದ್ದಾರೆ. ದಿನಕ್ಕೊಂದು ವೀಡಿಯೋ ಹೇಳಿಕೆಯನ್ನು ಅವರಿಂದ ಕೊಡಿಸ್ತಾ ಇದ್ದಾರೆ. ಡಿಕೆ ಶಿವಕುಮಾರ್ ಅವರೇ ದುಡ್ಡು ಕೊಟ್ಟು, ಗೋವಾ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳೋದಕ್ಕೆ ಕಳುಹಿಸಿದ್ದಾರೆ ಎಂಬುದಾಗಿ ಸಿಡಿ ಲೇಡಿಯ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.

 

ನಗದಲ್ಲಿ ಸಿಡಿ ಸಂತ್ರಸ್ತ ಯುವತಿ ತಂದೆ-ತಾಯಿ, ಸಹೋದರರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರಕರಣ ಹೊರ ಬಂದಂತೆ ನಾವು ಆಕೆಯನ್ನು ಸಂಪರ್ಕಿಸಿದ್ದವು. ಆಕೆ ಅದೆಲ್ಲವೂ ಸುಳ್ಳು, ಗ್ರಾಫಿಕ್ಸ್ ಎಂಬುದಾಗಿಯೂ ತಿಳಿಸಿದ್ದಳು. ನಮ್ಮ ಮಗಳ ಮೇಲೆ ನಮಗೆ ನಂಬಿಕೆ ಇದೆ. ಆಕೆ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾಗಿ ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನಮ್ಮ ಮಗಳಿಂದ ದಿನಕ್ಕೊಂದು ಹೇಳಿಕೆಯನ್ನು ಒತ್ತಾಯಪೂರ್ವಕವಾಗಿಯೇ ಕೊಡಿಸುತ್ತಿದ್ದಾರೆ. ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ಅವರನ್ನು ಆಕೆ ಭೇಟಿಯಾಗಿದ್ದಾಗಿಯೂ ಹೇಳಿದ್ದಾಳೆ. ಹಣ ಕೊಟ್ಟು ಗೋವಾ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಕೊಡಲಾಗಿದೆ. ಒತ್ತಡ, ಒತ್ತಾಯದೊಂದಿಗೆ ಆಕೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾಳೆ. ಆಕೆಯನ್ನು ನಾವು ಮಾತನಾಡಿಸೋದು ಬಿಟ್ಟಿಲ್ಲ. ಆಕೆ ನಮ್ಮ ಜೊತೆಗೆ ಇರಲು ಬಯಸಿದ್ರೇ ಬರಲಿ ಎಂದರು.

 

ಸಿಎಂ, ಗೃಹ ಸಚಿವರು, ನ್ಯಾಯಾಧೀಶರಿಗೆ ಮನವಿ ಮಾಡುತ್ತೇವೆ. ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಬಿಡೋದಕ್ಕೆ ಅವಕಾಶ ಮಾಡಿಕೊಡಿಸಿ. ನಮ್ಮ ಮಗಳು ಬಂದ ನಂತ್ರ ಮುಂದಿನ ನಿರ್ಧಾರ ಮಾಡುತ್ತೇವೆ. ನಾವು ಹೇಳೋದು ಒಂದೇ.. ಆಕೆ ಬಂಧನದಲ್ಲಿದ್ದಾರೆ. ಡಿಕೆ ಶಿವಕುಮಾರ್ ಪ್ರಕರಣದ ಹಿಂದೆ ಇರೋ ಸೂತ್ರದಾರ ಆಗಿದ್ದಾರೆ ಎಂಬುದಾಗಿ ಸಿಡಿ ಸಂತ್ರಸ್ತೆಯ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ