Breaking News

ಬಜೆಟ್​ ವಿಚಾರದಲ್ಲಿ ಭಾರೀ ಟ್ರೋಲ್​ ಆದ ಪ್ರಭಾಸ್​ ನಟನೆಯ ಸಲಾರ್​ ಸಿನಿಮಾ

Spread the love

ಪ್ರಭಾಸ್​ ನಟನೆಯ ಸಲಾರ್​ ಸಿನಿಮಾ 2022ರ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಪ್ರಭಾಸ ಸಿನಿಮಾ ಕೆರಿಯರ್​ನಲ್ಲಿ ಚಿತ್ರ ಮತ್ತೊಂದು ದೊಡ್ಡ ಬ್ರೇಕ್​ ನೀಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಜೆಟ್​ ವಿಚಾರಕ್ಕೆ ಸಲಾರ್​ ಸಿನಿಮಾ ತುಂಬಾನೇ ದೊಡ್ಡ ಮಟ್ಟಕ್ಕೆ ಟ್ರೋಲ್​ ಆಗುತ್ತಿದೆ. ಸಲಾರ್​ ಸಿನಿಮಾವನ್ನು ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಇದೇ ಮೊದಲ ಬಾರಿಗೆ ಪ್ರಶಾಂತ್​ ನೀಲ್​ ಟಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಸಲಾರ್​ ಸಿನಿಮಾ 2014ರಲ್ಲಿ ತೆರೆಕಂಡ ಉಗ್ರಂ ಚಿತ್ರದ ರಿಮೇಕ್​ ಎಂದು ಹೇಳಲಾಗಿತ್ತು. ಇದನ್ನು ಸಂಗೀತ ನಿರ್ದೇಶಕ ರವಿ ಬಸ್ರೂಸ್​ ಖಚಿತಪಡಿಸಿದ್ದರು. ಆದರೂ ಅಭಿಮಾನಿಗಳಲ್ಲಿ ಒಂದು ಅನುಮಾನ ಇದ್ದೇ ಇತ್ತು.

ನಿನ್ನೆ ಸಲಾರ್​ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. ಈ ವೇಳೆ ಚಿತ್ರತಂಡ ಪೋಸ್ಟರ್​ ಒಂದನ್ನು ರಿಲೀಸ್​ ಮಾಡಿತ್ತು. ಇದರಲ್ಲಿ ಸೇಮ್​ ಟು ಸೇಮ್ ಶ್ರೀಮುರಳಿ ಉಗ್ರಂ ಲುಕ್​ನಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಲಾರ್​, ಉಗ್ರಂನ ರಿಮೇಕ್​ ಎನ್ನುವುದು ಖಚಿತವಾಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಉಗ್ರಂ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ. ನಟ ಶ್ರೀಮುರಳಿಗೆ ದೊಡ್ಡ ಬ್ರೇಕ್​ ಕೂಡ ನೀಡಿತ್ತು. ಪ್ರಶಾಂತ್​ ನೀಲ್​ ಬಗ್ಗೆ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹುಟ್ಟಲು ಇದೇ ಸಿನಿಮಾ ಕಾರಣವಾಗಿತ್ತು. ಉಗ್ರಂ ಸಿನಿಮಾ ತೆರೆಕಂಡಿದ್ದು 2014ರಲ್ಲಿ. ಅಂದು ಈ ಸಿನಿಮಾದ ಬಜೆಟ್​ ಕೇವಲ 5 ಕೋಟಿ ರೂಪಾಯಿ!

ಇದೇ ಕತೆ ಇಟ್ಟುಕೊಂಡು ಸಿದ್ಧಗೊಳ್ಳುತ್ತಿರುವ ಸಿನಿಮಾ ಸಲಾರ್. ಆದರೆ, ಈ ಚಿತ್ರದ​ ಬಜೆಟ್​ 150 ಕೋಟಿ ರೂಪಾಯಿ. ಅಂದರೆ ಚಿತ್ರತಂಡ ಹೆಚ್ಚುವರಿಯಾಗಿ 145 ಕೋಟಿ ರೂಪಾಯಿಯನ್ನು ಖರ್ಚು ಮಾಡುತ್ತಿದೆ! ಈ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಟ್ರೋಲ್​ ಕೂಡ ಮಾಡುತ್ತಿದ್ದಾರೆ.

ಮೂಲಗಳ ಪ್ರಕಾರ ಸಲಾರ್​ ಸಿನಿಮಾ ತುಂಬಾನೇ ಅದ್ದೂರಿಯಾಗಿ ಸಿದ್ಧಗೊಳ್ಳುತ್ತಿದೆಯಂತೆ. ಇದೇ ಕಾರಣಕ್ಕೆ, ಸಿನಿಮಾದ ಬಜೆಟ್​ 150 ಕೋಟಿ ರೂಪಾಯಿ ತಲುಪಿದೆ. ಅಲ್ಲದೆ, ಕೆಜಿಎಫ್​ನಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಸಲಾರ್​ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಇವರು ದೊಡ್ಡ ಮೊತ್ತದೆ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾ ಬಜೆಟ್​ ಹಿರಿದಾಗಿದೆ.


Spread the love

About Laxminews 24x7

Check Also

ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ

Spread the love ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ ೧೦೪ ಪದಕಗಳನ್ನು ಗೆದ್ದ ೫೭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ