Breaking News
Home / ಜಿಲ್ಲೆ / ಬೆಂಗಳೂರು / Alert : ‘FDA ಸ್ಪರ್ಧಾತ್ಮಕ ಪರೀಕ್ಷೆ’ ಬರೆಯುತ್ತಿರುವ ‘ಅಭ್ಯರ್ಥಿ’ಗಳಿಗೆ ‘ಬಹುಮುಖ್ಯ ಸೂಚನೆ’ಗಳು ಹೀಗಿದೆ ನೋಡಿ, ತಪ್ಪದೇ ಪಾಲಿಸಿ

Alert : ‘FDA ಸ್ಪರ್ಧಾತ್ಮಕ ಪರೀಕ್ಷೆ’ ಬರೆಯುತ್ತಿರುವ ‘ಅಭ್ಯರ್ಥಿ’ಗಳಿಗೆ ‘ಬಹುಮುಖ್ಯ ಸೂಚನೆ’ಗಳು ಹೀಗಿದೆ ನೋಡಿ, ತಪ್ಪದೇ ಪಾಲಿಸಿ

Spread the love

ಬೆಂಗಳೂರು : ಫೆಬ್ರವರಿ 28ರ, ಭಾನುವಾರದಂದು ಈಗಾಗಲೇ ಮುಂದೂಡಿಕೆಯಾಗಿದ್ದಂತ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇಂತಹ ಪರೀಕ್ಷೆಗೆ ಹಳೆಯ ಪ್ರವೇಶ ಪತ್ರ ರದ್ದು ಪಡಿಸಲಾಗಿದ್ದು, ಹೊಸ ಪ್ರವೇಶ ಪತ್ರ ಡೌನ್ ಲೋಡ್ ಗೆ ಕೆಪಿಎಸ್ಸಿ ಅನುಮತಿಸಿದೆ. ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಪಾಲಿಸಬೇಕಾದಂತ ಸೂಚನೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ತಿಳಿಸಿದೆ. ಅಂತಹ ಅಭ್ಯರ್ಥಿಗಳ ಸೂಚನೆಗಳು ಈ ಕೆಳಗಿನಂತಿವೆ.

  • ಎಫ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಇತ್ತೀಚೆಗೆ ಬಸ್, ರೈಲು, ಇತ್ಯಾದಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕಿಂತ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಲು, ಅಭ್ಯರ್ಥಿಗಳು ಹೆಚ್ಚಿನ ಮುನ್ನೆಚ್ಚರಿಕೆಯಿಂದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ
  • ಅಭ್ಯರ್ಥಿಗಳು ಪರೀಕ್ಷೆಯ ಮೊದನೆಯ ಬೆಲ್ ಆಗುವ ಕನಿಷ್ಟ ಎರಡು ಗಂಟೆಯ ಮೊದಲು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು
  • ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಅನ್ನು ಕ್ರಮ ಬದ್ಧವಾಗಿ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
  • ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮ್ಯಾಥಮ್ಯಾಟಿಕಲ್ ಟೇಬಲ್ಸ್, ಸ್ಟೈಡ್ ರೋಲ್ಸ್, ಕ್ಯಾಲುಕುಲೇಟರ್, ಪೇಜರ್, ಮೊಬೈಲ್ ಪೋನ್, ಬ್ಲೂಟೂತ್, ಮಾರ್ಕರ್ಸ್, ವೈಟ್ ಪ್ಲೂಯಿಡ್, ವೈರ್ ಲೆಸ್ ಸೆಟ್ಸ್ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಾಗಿದೆ.
  • ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು, ತೆಗೆದುಕೊಂಡು ಹೋಗುವಂತಿಲ್ಲ. ವಿವಿಧ ಸಮಯಗಳಲ್ಲಿ ಬಾರಿಸುವ ಎಚ್ಚರಿಕೆಯ ಗಂಟೆಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಚುರ ಪಡಿಸಿರುವ ಬೆಲ್ ಸಮಯವನ್ನು ನೋಡುವುದು.
  • ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಮೊದಲನೆಯ ಬೆಲ್ ಆದ ತಕ್ಷಣ ಅಂದರೆ ಮಧ್ಯಾಹ್ನ 2 ನಂತರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ ತಮ್ಮ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು.
  • ಮೂರನೆಯ ಬೆಲ್ ಅಂದರೆ ಮಧ್ಯಾಹ್ನ 2.30 ಆದ ನಂತ್ರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಅನಮತಿ ನೀಡಲಾಗುವುದಿಲ್ಲ.
  • ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ರೋಲ್ ನಂಬರ್, ಅಭ್ಯರ್ಥಿಯ ಹೆಸರು ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಮುದ್ರಿಸಲಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಕೊಠಡಿಯ ಮೇಲ್ವಿಚಾರಕು ತಮಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ರೋಲ್ ನಂಬರ್, ಹೆಸರು ಹಾಗೂ ಪ್ರವೇಶ ಪತ್ರದಲ್ಲಿ ಮುತ್ರಿತವಾಗಿರುವ ರೋಲ್ ನಂಬರ್ ಒಂದೇ ಆಗಿದ್ಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೊತೆಗೆ ನಿಮಗೆ ನೀಡುವ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಉತ್ತರ ಪತ್ರಿಕೆಯ ವರ್ಷನ್ ಕೋಡ್ ಒಂದೇ ಆಗಿದ್ಯಾ ಅಂತ ಖಾತ್ರಿ ಪಡಿಸಿಕೊಳ್ಳುವುದು.
  • ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್, ಕ್ರಮ ಸಂಖ್ಯೆಯನ್ನು ನಾಮಿನಲ್ ರೋಲ್ ನಲ್ಲಿ ಬರೆಯಬೇಕು
  • ಪರೀಕ್ಷೆಯ ನಿಗದಿತ ಸಮಯ ಮುಗಿಯುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ.(ಕೊನೆಯ ಬೆಲ್ ಅಂದರೆ ಸಂಜೆ 4.30 ಆಗುವವರೆಗೂ)
  • ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಓಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಬಳಸಬೇಕು.
  • ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಪರೀಕ್ಷಾ ಕೇಂದ್ರದಲ್ಲಿಯೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.
  • ಪರೀಕ್ಷಾ ದಿನದಂದು ಒಂದು ವೇಳೆ ಅಭ್ಯರ್ಥಿಗೆ ಕೆಮ್ಮು ಅಥವಾ ನೆಗಡಿ ಅಥವಾ ಜ್ವರ ಇದ್ದರೇ, ಪರೀಕ್ಷಾ ಕೇಂದ್ರದ ಉಪ ಮುಖ್ಯಸ್ಥರಿಗೆ ತಿಳಿಸುವುದು.
  • ಓಎಂಆರ್ ಉತ್ತರ ಪತ್ರಿಕೆಯ ಕೆಳಭಾಗದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಅಭ್ಯರ್ಥಿಗಳು ಸಹಿ ಮಾಡಬೇಕು.

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ