ನವದೆಹಲಿ: 2020ರ ಅಕ್ಟೋಬರ್ʼನಲ್ಲಿ ಕೊನೆಯ ಪ್ರಯತ್ನ ನಡೆಸಿದ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚುವರಿ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಯುಪಿಎಸ್ ಸಿ ಪರೀಕ್ಷೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಆಗದ ಕೊನೆಯ ಅವಕಾಶದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.
ಸಿವಿಲ್ ಸರ್ವೀಸ್ ಎಕ್ಸಾಮಿನೇಷನ್ 2020ರಲ್ಲಿ ಕೊನೆಯ ಪ್ರಯತ್ನ ಮಾಡಿದ್ದ ಅರ್ಜಿದಾರರು, ಕೋವಿಡ್-19 ಮತ್ತು ರಾಷ್ಟ್ರೀಯ ಲಾಕ್ಡೌನ್ʼನಿಂದ ಉಂಟಾದ ತೊಂದರೆಗಳನ್ನ ಉಲ್ಲೇಖಿಸಿ ಹೆಚ್ಚುವರಿ ಅವಕಾಶ ನೀಡಿ ಎಂದು ಅರ್ಜಿದಾರರು ವಾದಿಸಿದ್ದರು. ಇನ್ನು ತೀರ್ಪಿನ ಪೂರ್ಣ ಪ್ರತಿ ಲಭ್ಯವಾದ ನಂತರ ವಜಾಕ್ಕೆ ಕಾರಣಗಳು ತಿಳಿದು ಬರಲಿದೆ.
2020 ರ ಅಕ್ಟೋಬರ್ ನಲ್ಲಿ ತಾವು ಕಡೆಯ ಬಾರಿ ಪರೀಕ್ಷೆ ಬರೆಯುವ ಅವಕಾಶ ಹೊಂದಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲು ಆಗಿರಲಿಲ್ಲ. ಹಾಗಾಗಿ ಅವಕಾಶ ತಪ್ಪಿತ್ತು. ಆದ್ದರಿಂದ ಮುಂದಿನ ವರ್ಷ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.
 Laxmi News 24×7
Laxmi News 24×7
				 
		 
						
					 
						
					 
						
					