Breaking News

ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ​ರಾಹುಲ್​, ಪ್ರಿಯಾಂಕಾ; ಗಮನಸೆಳೆದ ಗೋಕಾಕ್​ ಸಾಹುಕಾರ್​

Spread the love

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ ಎಂಬುದು ಕೆಲವು ಸಂದರ್ಭದಲ್ಲಿ ಸಾಬೀತಾಗುತ್ತಿರುತ್ತದೆ. ಅದೇ ರೀತಿಯ ಸನ್ನಿವೇಶವೊಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಮದುವೆ ಸಂದರ್ಭದಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಈ ಆರತಕ್ಷತೆಯಲ್ಲಿ ಡಿಕೆ ಶಿವಕುಮಾರ್ ಅವರ​ ರಾಜಕೀಯ ಸ್ನೇಹಿತರ ಸಮಾಗಮವಾಗಿದೆ. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಕೂಡ ಆಗಮಿಸಿ ಶುಭಕೋರಿದ್ದಾರೆ. ಇದರಲ್ಲಿ ಗಮನಸೆಳೆದವರು ಎಂದರೇ ಬಿಜೆಪಿ ಸಚಿವರಾದ ರಮೇಶ್​ ಜಾರಕಿಹೊಳಿ. ಈ ಹಿಂದೆ ಕಾಂಗ್ರೆಸ್​ ಜೆಡಿಎಸ್​ ಸರ್ಕಾರ ಉಳಿಸಲು ಡಿಕೆ ಶಿವಕುಮಾರ್ ಪಟ್ಟ ಪ್ರಯತ್ನದಷ್ಟೇ ಯತ್ನವನ್ನು ಸರ್ಕಾರ ಉರುಳಿಸಲು ರಮೇಶ್​ ಜಾರಕಿಹೊಳಿ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ, ಈ ಇಬ್ಬರು ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು ಕೂಡ. ಈ ಎಲ್ಲಾ ಘಟನೆ ನಡುವೆಯೂ ಡಿ.ಕೆ ಶಿವಕುಮಾರ್​ ತಮ್ಮ ಮುದ್ದಿನ ಮಗಳ ಮದುವೆ ಆರತಕ್ಷತೆಗೆ ಬಿಜೆಪಿ ಸಚಿವ ರಮೇಶ್​ ಜಾರಕಿಹೊಳಿಯನ್ನು ಆಹ್ವಾನಿಸಿದ್ದಾರೆ. ರಮೇಶ್​ ಜಾರಕಿಹೊಳಿ ಕೂಡ ಮದುವೆಗೆ ಆಗಮಿಸಿ ನೂತನ ವಧು ವರರನ್ನು ಆಶೀರ್ವಾದಿಸಿದ್ದಾರೆ.

ಈ ವೇಳೆ ಡಿಕೆ ಶಿವಕುಮಾರ್​, ರಮೇಶ್​ ಜಾರಕಿಹೊಳಿಯನ್ನು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಡಿಕೆಶಿ ಪಕ್ಕದಲ್ಲಿ ನಿಂತುಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ನಂದಿ ಬೆಟ್ಟದ ಸಮೀಪದ ಖಾಸಗಿ ರೆಸಾರ್ಟ್​ನಲ್ಲಿ ಡಿಕೆ ಶಿವಕುಮಾರ್​ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾಂಗ್ರೆಸ್​ನ ಹೈ ಕಮಾಂಡ್​ ನಾಯಕರು ಆಗಮಿಸಿದ್ದಾರೆ. ರಾಹುಲ್​ ಗಾಂಧಿ, ಕಮಲ್​ ನಾಥ್​. ರಂದೀಪ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್​ನ ಪ್ರಮುಖ ನಾಯಕರು ಆಗಮಿಸಿದ್ದಾರೆ. ಸಂಜೆ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ನಾಯಕರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತಿಸಿದ್ದರು.

ಫೆ. 14 ರಂದು ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್​ ಹೆಗ್ಡೆ ಮಗ ಸಿದ್ಧಾರ್ಥ್​ ಹೆಗ್ಡೆ ಜೊತೆ ಐಶ್ವರ್ಯಾ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದರು. ಎಸ್​ ಎಂ ಕೃಷ್ಣ ಅವರ ಮೊಮ್ಮಗ ಸಿದ್ದಾರ್ಥ್​ ಹೆಗ್ಡೆ ಆಗಿದ್ದು, ಈ ಹಿನ್ನಲೆ ಬಿಜೆಪಿ ನಾಯಕರು, ಕಾಂಗ್ರೆಸ್​ ನಾಯಕರು ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ವಧುವರರಿಗೆ ಆಶೀರ್ವಾದಿಸಿದ್ದಾರೆ.


Spread the love

About Laxminews 24x7

Check Also

ಬಾಲಕಿಗೆ ಲೈಂಗಿಕ ಕಿರುಕುಳ; ಇಬ್ಬರು ಆಟೋ ಚಾಲಕರ ಬಂಧನ

Spread the loveದಾವಣಗೆರೆ: ಆಟೋ‌ ಚಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಆರ್​ಎಂಸಿ ಯಾರ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ