ಬೆಂಗಳೂರು, ಫೆ.10- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹರಡುತ್ತಿದ್ದ 500 ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಪಡಿಸಿರುವುದಾಗಿ ಟ್ವಿಟರ್ ಹೇಳಿದೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರ 500 ಖಾತೆಗಳನ್ನು ಗುರುತಿಸಿದ್ದು ಅವುಗಳನ್ನು ರದ್ದು ಪಡಿಸುವಂತೆ ಟ್ವಿಟರ್ ಸಂಸ್ಥೆಗೆ ಜನವರಿ 31 ಮತ್ತು ಫೆಬ್ರವರಿ 4ರಂದು ಪತ್ರ ಬರೆದಿತ್ತು.
ಈ ಖಾತೆಗಳ ಮೂಲಕ ಹಿಂಸೆಗೆ ಪ್ರಚೋದನಕಾರಿಯಾದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್ ಗಳು ಪ್ರಕಟಗೊಳ್ಳುತ್ತಿವೆ ಎಂದು ಹೇಳಲಾಗಿತ್ತು. ಆರಂಭದಲ್ಲಿ ಕೇಂದ್ರ ಸರ್ಕಾರ ಸೂಚಿಸಿದ ಖಾತೆಗಳನ್ನು ತಡೆ ಹಿಡಿಯಲು ಮೀನಾ ಮೇಶ ಎಣಿಸಿದ್ದ ಟ್ವಟರ್ ಸಂಸ್ಥೆ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದಂತೆ ಸಂಸ್ಥೆ ಸರ್ಕಾರದ ಆದೇಶ ಪಾಲನೆ ಮಾಡಿದೆ.
Laxmi News 24×7